ನೂರೆಂಟು ಮಾತು / Noorentu Mathu
ನೂರೆಂಟು ಮಾತು / Noorentu Mathu Original price was: ₹95.Current price is: ₹86.
Back to products
ನೂರೆಂಟು ಮಾತು -5 / Noorentu Mathu - 5
ನೂರೆಂಟು ಮಾತು -5 / Noorentu Mathu - 5 Original price was: ₹95.Current price is: ₹86.

ಪ್ಯೂಪಾ / Puepa

Author: Shashi Pustaka

Pages: 123

Edition: 2024

Book Size: 1/8th Demmy

Binding: Paper Back

Publisher: Alaru Pustaka

Original price was: ₹150.Current price is: ₹135.

In stock

Description

ಪ್ಯೂಪಾ / Puepa – ತನ್ನ ನಿಜವಾದ ಮುಖವನ್ನು ವ್ಯಕ್ತಿ ಎಂದೂ ಕಾಣಲಾರ. ಕಾಣುವ ಅಥವಾ ಕಾಣುತ್ತೇನೆಂದು ಭ್ರಮಿಸುವ ಹೊರಜಗತ್ತಾದರೂ ಎಷ್ಟೊಂದು ನಿಜ ಎನ್ನುವ ಪ್ರಶ್ನೆ ಏಳುತ್ತದೆ. ನೇರವಾಗಿ ನೋಡಿದಾಗ ನಮಗೆ ಎಲ್ಲವೂ ಚಪ್ಪಟೆಯಾಗಿ ತೋರುತ್ತವೆ. ಮೂರನೆಯ ಆಯಾಮ ಗೋಚರಿಸಬೇಕಾದರೆ ಕೋನದಲ್ಲಿ ನೋಡುವುದು ಅಗತ್ಯವಾಗುತ್ತದೆ. ಈ ಕವಿ ಅದನ್ನು ಮಾಡುತ್ತಾರೆ. ಆಗ ನೇರವನ್ನು ಮುರಿಯಬೇಕಾಗುತ್ತದೆ. ಇಲ್ಲೊಂದು ಪ್ರಕ್ಷೇಪವಿದೆ; ಪ್ರಕ್ಷೇಪ ವೆಂದರೆ ಕತೆಗೆ ಕಟ್ಟುಕತೆ ಸೇರಿಸುವುದು, ಇಂಟರ್‌ಪೊಲೇಶನ್, ಕತೆಯೇ ಕಟ್ಟುಕತೆಯಾಗಿರುತ್ತ ಅದಕ್ಕೆ ಸೇರಿಸುವುದನ್ನಷ್ಟೆ ಕಟ್ಟುಕತೆಯೆಂದಾಗ ಕತೆ ಆಥೆಂಟಿಕ್, ಕಟ್ಟುಕತೆ ಕಲ್ಪನೆ ಎಂಬ ಭ್ರಮೆ ಬರುತ್ತದೆ. ಇದು ಮುಖವನ್ನು ಕನ್ನಡಿಯೊಳಗಿನಿಂದ ನೋಡಿದ ಹಾಗೆ! ಅಥವಾ ಹಾಗೆ ಅಂದುಕೊಳ್ಳುವುದು, ಕಲ್ಪಿಸುವುದು. ಈ ಕವಿ ಇಂಥಾದ್ದನ್ನು ಕವಿತೆಗಳಲ್ಲಿ ಮಾಡುತ್ತಾರೆ. ಅವು ‘ಕಟ್ಟುಕತೆ’ಗಳ ಒಂದು ಸೇತು ಇದ್ದ ಹಾಗೆ. ಒಂದರಿಂದ ಒಂದಕ್ಕೆ ನಾವು ಜಿಗಿಯಬೇಕು. ಎಲ್ಲೂ ಹೋಗುವುದಿಲ್ಲ ಎಲ್ಲೂ ವಿರಮಿಸುವುದಿಲ್ಲ. ಅರ್ಧಕ್ಕೆ ನಿಂತ ಸೇತುವಿನ ಹಾಗೆ. ಸೆಳವು ನೋಡುವುದಕ್ಕೆ ಮಾಡಿದ್ದು, ಅಥವಾ ನೆರೆಯಲ್ಲಿ ಸೆಳೆದುಕೊಂಡು ಹೋದ್ದು ಈ ನಿರುಪಾಯ’ ಎಂಬ ಪದವನ್ನು ನಾನು ಶಶಿಯವರದೇ ಕವಿತೆಯೊಂದರಿಂದ ಎತ್ತಿಕೊಂಡದ್ದು.

ಕೆ. ವಿ. ತಿರುಮಲೇಶ್