ಇದೇ ಅಂತರಂಗ ಸುದ್ದಿ / Ide Antaranga Suddi
Author: Vishweshwar Bhat
Pages:288
Edition: 2022
Book Size: 1/8th Demmy
Binding: Paper Back
Publisher: Vishwavani Pustaka Prakashana
Description
ಇದೇ ಅಂತರಂಗ ಸುದ್ದಿ / Ide Antaranga Suddi – ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ಟರ ಅಂಕಣಗಳ ಸಂಗ್ರಹವಾಗಿದೆ. ಅಣ್ಣ ಬಸವಣ್ಣ ‘ಇದೇ ಅಂತರಂಗ ಶುದ್ದಿ’ ಎಂದರು. ಎಷ್ಟೆಂದರೂ ನಾನು ಸುದ್ದಿಜೀವಿ. ಇದನ್ನೇ ನಾನು ತುಸು ಬದಲಿಸಿ, ‘ಇದೇ ಅಂತರಂಗ ಸುದ್ದಿ’ಯಾಗಿಸಿದೆ. ಸುದ್ದಿಗೂ ಶುದ್ದಿ ಬೇಕು, ಸುದ್ದಿಯೂ ಶುದ್ಧವಾಗಿರಬೇಕಲ್ಲ. ಬಸವಣ್ಣನವರ ಆಶಯವೇ ಈ ಅಂಕಣದ ಹಾಸು, ಹೊದಿಕೆ, ಎಲ್ಲವೂ ಒಳಗೊಳ್ಳಬೇಕು, ಎಲ್ಲರನ್ನೂ ಒಳಗೊಂಡಿರಬೇಕು, ತುಂಬಿದ್ದು ಬರಿದಾಗಬೇಕು, ಪುನಃ ಭರ್ತಿಯಾಗಬೇಕು, ಆಪ್ತತೆಯ ಬೇಲಿ ಕಟ್ಟಬೇಕು; ಬೇಲಿ ಬಿಡಿಸಿಕೊಂಡು ಅಲಿಪ್ತತೆಯೆಡೆಗೆ ಮುಖ ಮಾಡಬೇಕು. ಅದೇ ಅಂಕಣಕಾರ ಅನುಭವಿಸುವ ನಿಜವಾದ ಸ್ವಾತಂತ್ರ್ಯ, ಆನಂದ, ಹೀಗಾಗಿ ‘ಇದೇ ಅಂತರಂಗ ಸುದ್ದಿ’ ಯಾವ ಬೇಲಿಯೂ ಇಲ್ಲದ ಬಾನು, ತಿಳಿ ಅಕ್ಷರಗೊಳ, ಇದೊಂದು ಚೌಕಟ್ಟೇ ಇಲ್ಲದ ಅಂಕಣ, ಸರಗೋಲು ಇಲ್ಲದ ಹುಲ್ಲುಗಾವಲು. ಹೀಗಾಗಿ ಇಲ್ಲಿ ಯಾರ್ಯಾರೋ ಬರುತ್ತಾರೆ, ಬಂದವರೆಲ್ಲ ಏನೋ ಹೊಸತು ಹೇಳಿ ಹೋಗುತ್ತಾರೆ. ನಾನು ಅವರಿಗೆಲ್ಲಾ ಕಿವಿಯಾಗುತ್ತೇನೆ, ಲೇಖನಿಯಾಗುತ್ತೇನೆ. ಈ ಅಂತರಂಗದ ಅಭಿವ್ಯಕ್ತಿಯಲ್ಲಿ ಬಹಳಷ್ಟನ್ನು ನನ್ನ ‘ಅನುಭವ ಮಂಟಪ’ದಲ್ಲೇ ಕಟ್ಟಿದ್ದು, ಇನ್ನೂ ಕೆಲವು ನಿಮ್ಮಂಥವರ ಬದುಕಿನ ಬಾವಿಯಿಂದ ನಾನು ಸೇದಿಕೊಂಡಿದ್ದು, ಇವೆರಡನ್ನೂ ಗಂಧ-ಚಂದನದಂತೆ ಸೇರಿಸಿ ಈಗ ಓದುಗರ ಮಸ್ತಕಕ್ಕೆ ತಿಲಕವಿಡುವ ಖುಷಿಯ ಸಂದರ್ಭ. ಒಟ್ಟಾರೆ ಇವು ಕೆಲಕಾಲ ಅಂತರಂಗವನ್ನು ಶುದ್ಧವಾಗಿಸುವ ಅಂತಃಕರಣದ ಬರಹ ಎಂದು ವಿಶ್ವೇಶ್ವರ ಭಟ್ ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
