ಪಾಥೇರಸ್/ Pateras
Author:Meghana Sudhindra
Pages:120
Edition: 2022
Book Size: 1/8th Demmy
Binding: Paper Back
Publisher: Sawanna Publication
Specification
Description
ಪಾಥೇರಸ್/ Pateras -ಲೇಖಕಿ, ಕತೆಗಾರ್ತಿ ಮೇಘನಾ ಸುಧೀಂದ್ರ ಅವರು ಅಪ್ಪ-ಮಗಳ ಸಂಬಂಧದ ಬಗೆಗೆ ಬರೆದಿರುವ ವಿಶೇಷ ಕೃತಿ ಪಾಥೇರಸ್ . ಮೇಟಾವರ್ಸ್ ಎಂಬ ಆಲ್ಟರ್ನೇಟ್ ಜಗತ್ತನ್ನು ಈಗಿನ ದೊಡ್ಡ ದೊಡ್ಡ ಕಂಪನಿಗಳು ಸೃಷ್ಟಿ ಮಾಡುತ್ತಿವೆ. ಅಲ್ಲೀಗ ಮನುಷ್ಯ ಒಂದು ‘ಅವತಾರ್ ’ ರೂಪದಲ್ಲಿ ಜೀವಂತ ಇರುತ್ತಾನೆ. ಅವನಿಗೇ ಆದ ಒಂದು ನೀತಿ, ನಿಯಮ ಇದ್ದು ತಾನು ಅತ್ಯಂತ ಶಕ್ತಿಶಾಲಿಯೆಂದು ಅಂದುಕೊಂಡು, ಅವನಿಗೆ ಅಂತ್ಯವೇ ಇಲ್ಲ ಎಂಬ ಮನಸ್ಥಿತಿಯೊಂದಿಗೇ ಕಾಲ ಕಳೆಯುತ್ತಾನೆ. ದೇವರ ಅವತಾರಕ್ಕೆ ಕೊನೆ ಇರುವಾಗ ಮನುಷ್ಯನ ‘ಅವತಾರ್’ ಕೊನೆಯಾಗುವುದಿಲ್ಲವೇ ? ಮೆಟಾವರ್ಸಿನ ‘ಅವತಾರ್’ ನಲ್ಲಿ ಅಪ್ಪನನ್ನು ಶಾಶ್ವತವಾಗಿ ನೋಡುವ ಮಗಳ ಕನಸಿಗೆ ನೀರೆರೆದು ಪೋಷಿಸುವ ಕೆಲಸ ಸಿಂದೆಸಿ ಮಾಡುತ್ತಿದೆ. ಯಾರು ಸಿಂದೆಸಿ ? ಯಾವ ಪ್ರಾಜೆಕ್ಟ್ ಎಂಬ ಕುತೂಹಲಕರವಾದ ಮಾಹಿತಿ ಈ ಪುಸ್ತಕದಲ್ಲಿದೆ. ಮಗಳ ಎಲ್ಲೆ ಮೀರಿದ ಕನಸುಗಳಿಗೆ ಅಪ್ಪ ಮಾತ್ರ ರೆಕ್ಕೆ ಕೊಡಲು ಸಾಧ್ಯ. ಅಂತಹ ‘ಅವತಾರ್’ ನೀಳ್ಗತೆಯನ್ನು ಇಲ್ಲಿ ಓದಬಹುದು.
