ನನ್ನ ಊರು ಪುಣ್ಯ ಭೂಮಿ / Nanna Ooru Punya Bhoomi
ನನ್ನ ಊರು ಪುಣ್ಯ ಭೂಮಿ / Nanna Ooru Punya Bhoomi Original price was: ₹175.Current price is: ₹157.
Back to products
ಲೈಫ್ ಸೂಪರ್ ಗುರು / Life Super Guruu
ಲೈಫ್ ಸೂಪರ್ ಗುರು / Life Super Guruu Original price was: ₹120.Current price is: ₹108.

ಪ್ರತಿಭೆ ಪರಿಶ್ರಮ ಮತ್ತು ಪರಿಣತಿ / Prathibhe Parishrama Mattu Parinati

Author: Y.G. Muralidharan

Pages: 208

Edition: 2023

Book Size: 1/8th Demmy

Binding: Paper Back

Publisher: Abhinava

Original price was: ₹250.Current price is: ₹225.

In stock

Description

ಪ್ರತಿಭೆ ಪರಿಶ್ರಮ ಮತ್ತು ಪರಿಣತಿ / Prathibhe Parishrama Mattu Parinati – ‘ಪ್ರತಿಭೆ ಪರಿಶ್ರಮ ಮತ್ತು ಪರಿಣತಿ’ ಹತ್ತು ಐಎಎಸ್ ಅಧಿಕಾರಿಗಳ ಜೀವನ ಕಥನವಾಗಿದೆ. ಈ ಕೃತಿಯನ್ನು ವೈ.ಜಿ.ಮುರಳೀಧರನ್ ಅವರು ಸಂಪಾದಿಸಿದ್ದಾರೆ. ಇದಕ್ಕೆ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಬೆನ್ನುಡಿ ಬರಹವಿದ್ದು, ಆಡಳಿತದಲ್ಲಿ ಎದುರಾಗುವ ಮುಖ್ಯ ಸವಾಲೆಂದರೆ ಭ್ರಷ್ಟ ರಾಜಕಾರಣಿಗಳ ಹಸ್ತಕ್ಷೇಪ; ರಾಜಕಾರಣಿಗಳೆಲ್ಲ ಕೆಟ್ಟವರಲ್ಲ, ಆದರೆ ಎಂತಹ ವಾತಾವರಣವನ್ನೂ ಕೆಡಿಸುವ ಶಕ್ತಿ ಭ್ರಷ್ಟರಿಗಿದೆ. ತಮಗೆ ಅನುಕೂಲ ‘ವ್ಯವಸ್ಥೆ’ಯನ್ನು ಕಲ್ಪಿಸಿಕೊಳ್ಳಲು ಇವರು ಅಧಿಕಾರಿಗಳನ್ನು ಬಳಸಿಕೊಳ್ಳುತ್ತಾರೆ. ಸಹಕರಿಸದವರನ್ನು ‘ವರ್ಗಾವಣೆ’ಯ ‘ಶಿಕ್ಷೆ’ಗೆ ಗುರಿಪಡಿಸುತ್ತಾರೆ. ಅವರ ಕ್ರಿಯಾಶಕ್ತಿಯೇ ಸತ್ವಹೀನವಾಗುವ ಸನ್ನಿವೇಶ ಸೃಷ್ಟಿಸುತ್ತಾರೆ. ಇವೆಲ್ಲ ನಿರೀಕ್ಷಿತ. ಕೆಲವೊಮ್ಮೆ ಇದಕ್ಕೆ ವ್ಯತಿರಿಕ್ತವಾದ ರೀತಿಯ ಪ್ರಕ್ರಿಯೆಯೂ ಜರುಗಬಹುದು. ಅಧಿಕಾರಿಯ ಪ್ರಭಾವೀ ವ್ಯಕ್ತಿತ್ವ ರಾಜಕಾರಣಿಯ ಸ್ಥಾನಕ್ಕೇ ಚ್ಯುತಿತರಬಹುದು. ಪ್ರತಿಕೂಲ ಪರಿಸ್ಥಿತಿಯನ್ನೆಲ್ಲ ಸಮರ್ಥವಾಗಿ ಎದುರಿಸಿ ಸಾರ್ಥಕ ಸೇವೆ ಸಲ್ಲಿಸಿದ ಹಲವಾರು ಶ್ರೇಷ್ಠರು ನಮ್ಮಲ್ಲಿದ್ದಾರೆ. ಅಂಥವರೇ ನಮಗೆ ಮಾದರಿ. ಅಂತಹ ಹತ್ತು ಜನರ ಪರಿಚಯ ಇಲ್ಲಿದೆ ಎಂದಿದ್ದಾರೆ.