ಭಕ್ತಿಯ ಬೆರಗು / Bhakthiya Beragu
ಭಕ್ತಿಯ ಬೆರಗು / Bhakthiya Beragu Original price was: ₹275.Current price is: ₹247.
Back to products
ಅಗಸ್ತ್ಯ ದರ್ಶನ / Agasthya Darshana
ಅಗಸ್ತ್ಯ ದರ್ಶನ / Agasthya Darshana Original price was: ₹299.Current price is: ₹269.

ಮಣ್ಣೆ ಒಂದು ಪರಿಚಯಾತ್ಮಕ ಅಧ್ಯಯನ / Manne Ondu Parichayathmaka Adhyayana

Author: H.S. Gopal Rao

Pages: 240

Edition: 2021

Book Size: 1/8th Demmy

Binding: Paper Back

Publisher: Abhinava

Original price was: ₹250.Current price is: ₹225.

In stock

Description

ಮಣ್ಣೆ ಒಂದು ಪರಿಚಯಾತ್ಮಕ ಅಧ್ಯಯನ / Manne Ondu Parichayathmaka Adhyayana – ಒಂದು ಪರಿಚಯಾತ್ಮಕ ಅಧ್ಯಯನ” ಎಂಬ ಪುಸ್ತಕವನ್ನು ಎಚ್. ಎಸ್. ಗೋಪಾಲರಾವ್ ಅವರು ಬರೆದಿದ್ದಾರೆ. ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನಲ್ಲಿರುವ ಮಣ್ಣೆ ಗ್ರಾಮದ ಬಗ್ಗೆ ಸಮಗ್ರ ಅಧ್ಯಯನವಾಗಿದೆ, ಇದು ರಾಜಕೀಯ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಾಮಾಜಿಕ ಇತಿಹಾಸವನ್ನು ಒಳಗೊಂಡಿದೆ. ಈ ಪುಸ್ತಕವು ಶಾಸನಗಳು, ಸಾಹಿತ್ಯ, ಮತ್ತು ಮಣ್ಣೆಯ ದೇವಾಲಯಗಳಂತಹ ಅಂಶಗಳನ್ನು ಒಳಗೊಂಡಿದೆ. ಕೃತಿಗೆ ಮುನ್ನುಡಿ ಬರೆದಿರುವ ಎಸ್. ನಾಗರಾಜು ಅವರು, ಮಣ್ಣೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ನೆಲಮಂಗಲ ತಾಲ್ಲೂಕಿನಲ್ಲಿ, ನೆಲಮಂಗಲದಿಂದ ಸು.25ಕಿ.ಮೀ. ದೂರದಲ್ಲಿರುವ ಗ್ರಾಮ. ಇಲ್ಲಿ ಸುಮಾರು 80 ಮನೆಗಳಿವೆ. ಜನಸಂಖ್ಯೆ 336; ಈ ಅಂಕೆ-ಸಂಖ್ಯೆಗಳು ಹೊಂದಾಣಿಕೆ ಆಗುತ್ತಿಲ್ಲ. ಏಕೆಂದರೆ, 2009ರ ಮಾಹಿತಿಯ ಪ್ರಕಾರ ಇಲ್ಲಿ 379 ಮನೆಗಳಿದ್ದು, ಜನಸಂಖ್ಯೆ 1429. ಒಟ್ಟಾರೆ ಇದೊಂದು ಚಿಕ್ಕ ಗ್ರಾಮ. ಈ ಗ್ರಾಮದ ಬಗ್ಗೆ ‘ಮಣ್ಣೆ’ ಕೃತಿಯು ಬರೆಯಲು ಸಾಧ್ಯವೇ ಎಂಬ ಪ್ರಶ್ನೆ ನನ್ನಂತೆಯೇ ನಿಮ್ಮ ಮನಸ್ಸಿನಲ್ಲೂ ಸಹ ಹಾದುಹೋಗಬಹುದು. ಸೃಜನಾತ್ಮಕ ಗ್ರಂಥಗಳನ್ನು ಬರೆಯಬಲ್ಲ ಸಾಮರ್ಥ್ಯದ ಜೊತೆಗೆ ಇತಿಹಾಸರಂಗದಲ್ಲಿ ಸಾಕಷ್ಟು ಕೃಷಿ ಮಾಡಿರುವ ಡಾ. ಎಚ್. ಎಸ್. ಗೋಪಾಲ ರಾಯರಂತಹ ಸಮರ್ಥರಿಗೆ ಇದೇನೂ ಕಷ್ಟದ ಕೆಲಸವಲ್ಲ. ಮಣ್ಣೆಯ ಬಗ್ಗೆ ಅವರ ನಂಟು ಸುಮಾರು 50 ವರ್ಷಗಳಷ್ಟು ಹಳೆಯದು. ಮಣ್ಣಿಗೆ ಸುಮಾರು 1500 ವರ್ಷಗಳ ದೀರ್ಘವಾದ ಇತಿಹಾಸವಿದೆ ಎಂದು ತಿಳಿದಿರುವ ಅನೇಕ ಹಿರಿಯ ಹಾಗೂ ಕಿರಿಯ ವಿದ್ವಾಂಸರು ಮಣ್ಣೆಯನ್ನು ನೋಡಲು ಬಂದಾಗ ಅವರ ಜೊತೆಯಲ್ಲಿರುವುದು ಗೋಪಾಲ ರಾಯರೇ. ನಾನೂ ಅವರ ವಿದ್ವದಾತಿಥ್ಯವನ್ನು ಎಷ್ಟೋ ಬಾರಿ ಸ್ವೀಕರಿಸಿದ್ದೇನೆ. ಇತಿಹಾಸರಂಗದ ಬಗ್ಗೆ ಅವರಿಗಿರುವ ಆಸೆ, ಉತ್ಸಾಹಗಳು ಈ ಪುಸ್ತಕದ ಪ್ರತಿಪುಟದಲ್ಲೂ ಬಿಂಬಿತವಾಗಿವೆ. ಇದನ್ನು ಓದುಗರು ಗುರುತಿಸಬಹುದು. ಎಲ್ಲದಕ್ಕಿಂತಲೂ ಗಮನಾರ್ಹವಾದುದು ಎಲ್ಲೂ ಯಾವ ರೀತಿಯ ತಪ್ಪು ಕಾಣದ ಅವರ ಬರವಣಿಗೆ ಕನ್ನಡವಾಗಲಿ, ಸಂಸ್ಕೃತವಾಗಲಿ, ಗದ್ಯವಾಗಲಿ, ಪದ್ಯವಾಗಲಿ ಎಲ್ಲೂ ಯಾವ ತಪ್ಪುಗಳೂ ಕಾಣಬರದಿರುವುದು ಅವರ ಬರವಣಿಗೆಯ ವೈಶಿಷ್ಟ್ಯ ಈ ಪುಸ್ತಕದ ವಸ್ತು ಒಂದು ಚಿಕ್ಕ ಗ್ರಾಮವಾದರೂ, ಸುಮಾರು 15 ಶತಮಾನಗಳ ದೀರ್ಘ ಇತಿಹಾಸ ಇದಕ್ಕಿದೆ. ಅದರ ನಿರೂಪಣೆಯನ್ನು ಓದಲು ಪ್ರಾರಂಭಿಸಿ ಕೊನೆಯ ಪುಟ ತಲುಪುವವರೆಗೂ ಏಕತಾನವಾಗಿ ಸಾಗುವ ಗುಣ ಈ ಬರವಣಿಗೆಯಲ್ಲಿ ಇದೆ. ಇದು ಲೇಖಕರ ಸಮರ್ಥ ಕಾಯಕಕ್ಕೆ ಸಲ್ಲುವ ಒಂದು ಗರಿ. ರಾಜರ ಪೇಟಗಳ ಮೇಲೆ ಎದ್ದು ಕಾಣುವ ನವಿಲುಗರಿಯ ಅಲಂಕಾರದಂತೆ ’ ಎಂದು ವಿಶ್ಲೇಷಿಸಿದ್ದಾರೆ.