ಟಿಪ್ಪು ನಿಜಕನಸುಗಳು / Tippu Nijakanasugalu
ಟಿಪ್ಪು ನಿಜಕನಸುಗಳು / Tippu Nijakanasugalu Original price was: ₹150.Current price is: ₹135.
Back to products
English for Competitive Examinations (Includes Descriptive and Objective Tests)
English for Competitive Examinations (Includes Descriptive and Objective Tests) Original price was: ₹525.Current price is: ₹472.

ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು / Utta Batteyalli Horatu Bandavaru

Author:Vinayka Bhatta Muroor

Pages:96

Edition: 2020

Book Size: 1/8th Demmy

Binding: Paper Back

Publisher: Ayodhya  Publication

Original price was: ₹100.Current price is: ₹90.

In stock

Description

ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು / Utta Batteyalli Horatu Bandavaru -ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ವಿರೋಧಿಸುತ್ತಿರುವವರು ಭಾರತದ ನೆರೆಯ ಮೂರು ದೇಶಗಳಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಾಗಿರುವ ಇಸ್ಲಾಂ/ಜೆಹಾದಿ ಕ್ರೌರ್ಯವನ್ನು ಉದ್ದೇಶಪೂರ್ವಕ ಕಡೆಗಣಿಸುತ್ತಿರುವಾಗ, ಆ ದೇಶಗಳಲ್ಲಿ ಹಿಂದೂಗಳು ಪಟ್ಟ ಕಷ್ಟವೇನೆಂಬುದನ್ನು ಪದರ ಪದರವಾಗಿ ಬಿಚ್ಚಿಡುವ ಕೃತಿಯಾಗಿ ಬಂದಿದೆ “ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು”. ಬಾಂಗ್ಲಾ ದೇಶದಲ್ಲಿ ಹಿಂದೂಗಳು ಯಾವ್ಯಾವ ರೀತಿಯ ಹಿಂಸಾಚಾರಗಳಿಗೆ ಗುರಿಯಾಗಬೇಕಾಯಿತೆಂಬುದನ್ನು ಅತ್ಯಂತ ವಿಸ್ತøತವಾಗಿ ಚಿತ್ರಿಸುವ ಕೃತಿ ಇದು.
ಇದು ಎಲ್ಲೋ ದಂತಗೋಪುರದಲ್ಲಿ ಕೂತು ಬರೆದ ಕಲ್ಪನಾವಿಲಾಸವಲ್ಲ. ಕೃತಿಯ ಲೇಖಕರು ಕರ್ನಾಟಕದಲ್ಲಿ ನೆಲೆ ಕಂಡುಕೊಂಡಿರುವ ಬಾಂಗ್ಲಾ ದೇಶದ ನಿರಾಶ್ರಿತ ಹಿಂದೂಗಳನ್ನು ಖುದ್ದು ಮಾತಾಡಿಸಿ, ಅವರ ಬಾಯಿಯಿಂದಲೇ ಜೆಹಾದ್ ದೌರ್ಜನ್ಯದ ಕತೆಗಳನ್ನು ಕೇಳಿ, ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ದುರಂತವೆಂದರೆ, ಹಾಗೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಎಸಗಿದವರು ಹೆಚ್ಚಿನ ಸಂದರ್ಭಗಳಲ್ಲಿ ಆ ಹಿಂದೂಗಳ ನೆರೆಹೊರೆಯಲ್ಲಿದ್ದ, ಹಲವು ವರ್ಷಗಳಿಂದ ಸ್ನೇಹವಲಯದಲ್ಲಿದ್ದ ಮುಸ್ಲಿಮರೇ!
ಹೊತ್ತಗೆಯಲ್ಲಿರುವ ಪ್ರತಿ ಕತೆಯೂ ಒಂದು ಕಣ್ಣೀರ ಕತೆ. ಹಿಂದೂಗಳು ಎದುರಿಸಿದ ಬಗೆ ಬಗೆಯ ಹಿಂಸಾಚಾರ, ಅನ್ಯಾಯಗಳ ಕತೆ. ಜೆಹಾದಿಗಳ ಕೈಯಲ್ಲಿ ಅವರು ಹೇಗೆ ನಲುಗಿದರು, ಆಸ್ತಿಪಾಸ್ತಿಯನ್ನು ಹೇಗೆ ಕಳೆದುಕೊಂಡು ಬೀದಿಗೆ ಬಿದ್ದರು, ಊರು ಮತ್ತು ದೇಶವನ್ನು ಬಿಡುವ ನಿರ್ಧಾರ ಕೈಗೊಳ್ಳಲು ಅವರನ್ನು ಪ್ರೇರೇಪಿಸಿದ ಸನ್ನಿವೇಶಗಳು ಯಾವುವು, ನಿರಾಶ್ರಿತರಾಗಿ ಭಾರತಕ್ಕೆ ಬಂದವರು ನಂತರ ಶಿಬಿರಗಳಲ್ಲಿ ಕಳೆದ ದಿನಗಳು ಹೇಗಿದ್ದವು, ಭಾರತದ ನೆಲದಲ್ಲಿ ಮತ್ತೆ ಬದುಕು ಕಟ್ಟಿಕೊಂಡ ಅವರ ಸಾಹಸಗಾಥೆ ಎಂಥಾದ್ದು – ಈ ಎಲ್ಲವನ್ನೂ ಒಂದು ಜ್ವಲಂತ ಇತಿಹಾಸವಾಗಿ ಕಣ್ಣಿಗೆ ಕಟ್ಟುವಂಥ ಚಿತ್ರಕ ಶೈಲಿಯಲ್ಲಿ ಈ ಕೃತಿ ನಮ್ಮೆದುರು ಬಿಚ್ಚಿಡುತ್ತದೆ.