ಸುಪಾರಿ ಸ್ವಾಮಿ ಮತ್ತು ಸಕೀನಾ / Supari Swamy Mattu Sakina
Author:Ragam
Pages:14
Edition: 2025
Book Size: 1/8th Demmy
Binding: Paper Back
Publisher: Veeraloka Books PVT .LTD.
Description
ಸುಪಾರಿ ಸ್ವಾಮಿ ಮತ್ತು ಸಕೀನಾ / Supari Swamy Mattu Sakina – ಬಹುತೇಕ ಪ್ರಪಂಚದ ಎಲ್ಲ ಭಾಷೆಗಳಲ್ಲಿಯ ಕಥೆಗಾರರನ್ನು ಓದಿದ ನಂತರವೂ ನನಗೆ ಕಥೆಗಾರರಾಗಿ ಕಾಡಿದವರು ಮುನ್ನಿ ಪ್ರೇಮಚಂದ್ ಹಾಗೂ ಸಾದತ್ ಹಸನ್ ಮಾಂಟೊ. ನನ್ನ ನೆಲದ ನಾಡಿ ಇವರಿಬ್ಬರು. ನನ್ನ ಅಪ್ಪ ಹೇಳಿದ ಪ್ರೇಮಚಂದ್ರರ ಕಥೆಗಳನ್ನು ಕೇಳುತ್ತ ಬೆಳೆದೆ ಮತ್ತು ನನ್ನ ದೇಶ ಬರೆಯಿಸಿದ ಮಾಂಟೊನ ಕಥೆಗಳನ್ನು ಓದುತ್ತ ನಾನು ಮನುಷ್ಯನಾದೆ. ಮನುಷ್ಯರಾದವರಿಗೆ ಪಂಥ, ಪಕ್ಷಗಳ ಹಂಗಿರುವುದಿಲ್ಲ ಎಂದು ಹೇಳಿದವರು ಇವರು. ಬಹುತೇಕ ಇವರಿಬ್ಬರಂತೆ ನಮ್ಮ ಎದೆಯೊಳಗಿನ ಆಗ್ನಿಕುಂಡಕ್ಕೆ ಕನ್ನಡಿ ಹಿಡಿದ ಲೇಖಕರು ಮತ್ತೊಬ್ಬರಿಲ್ಲ.
ಒಂದು ಸಣ್ಣ ಒಪ್ಪಂದ, ಹೆಮಿಂಗೈಯನ್ನೂ ಈ ಪಟ್ಟಿಗೆ ಸೇರಿಸಬಹುದು. ಅಂದಹಾಗೆ, ಇವರೆಲ್ಲ ಮನುಷ್ಯರನ್ನು ಬೆನ್ನಟ್ಟಿಸಿಕೊಂಡ ಲೇಖಕರು, ಪ್ರಶಸ್ತಿ ಪುರಸ್ಕಾರಗಳನ್ನು ಅಲ್ಲ.
ಪ್ರಸ್ತುತ ‘ಸುಪಾರಿಸ್ವಾಮಿ ಮತ್ತು ಸಕೀನಾ’ ಸಂಕಲನದ ಎಲ್ಲ ಪಾತ್ರಗಳು ನನ್ನ ಕಲ್ಪನೆಯ ಸೃಷ್ಟಿಗಳಲ್ಲ, ನನ್ನ ಸಂಕಟದ ಪ್ರತಿಫಲಗಳು, ಸುಮಾರು ಒಂದು ದಶಕ!! ನಾನು ಇವರನ್ನು ಕಾಯಿಸಿದೆ. ಆದರೆ, ರಚ್ಚೆ ಹಿಡಿದು ಕುಳಿತ ಇವರು ಮನದ ಮನೆಯಿಂದ ತೊಲಗಲೇ ಇಲ್ಲ!!
ಕಾಯಿಸಿದ ನಂತರವೂ ಕಾಡಿದವರನ್ನು ದಾಖಲಿಸದೆ ಹೋದರೆ..? ಆತ್ಮವಂಚನೆಯಾದೀತು ಎನ್ನುವ ಕಾರಣಕ್ಕೆ ಅವರನ್ನು ದಾಖಲಿಸಿ ನಿಮಗೆ ಕೊಡುತ್ತಿದ್ದೇನೆ. ನನ್ನನ್ನು ಕಾಡಿದ ಈ ‘ಪಾಪಿಗಳು!!??’ ನಿಮ್ಮನ್ನೂ ಕಾಡಿದರೆ ಅದು ಬರಹದ ‘ಪುಣ್ಯ’ ಎಂದುಕೊಳ್ಳುತ್ತೇನೆ.
