ಸಂಚಿ / Sanchi
ಸಂಚಿ / Sanchi Original price was: ₹240.Current price is: ₹216.
Back to products
ಬಾಳಿನ ಗಿಡ / Baalina Gida
ಬಾಳಿನ ಗಿಡ / Baalina Gida Original price was: ₹175.Current price is: ₹157.

ಬೇಂದ್ರೆ ಕಾವ್ಯ ಮೀಮಾಂಸೆ / Bendre Kavya Meemamse

Author:Dr Shankar Mokashi Punekar

Pages:108

Edition: 2012

Book Size: 1/8th Demmy

Binding: Paper Back

Publisher: Vasantha Prakashana

Original price was: ₹60.Current price is: ₹54.

In stock

Description

ಬೇಂದ್ರೆ ಕಾವ್ಯ ಮೀಮಾಂಸೆ / Bendre Kavya Meemamse – ಕವಿ ದ.ರಾ. ಬೇಂದ್ರೆ ಕವಿತೆಗಳಿಗೆ ಹಿಡಿದ ಕನ್ನಡಿ ’ಬೇಂದ್ರೆ ಕಾವ್ಯ ಮೀಮಾಂಸೆ’ ಕೃತಿ.ಯನ್ನು ವಿಮರ್ಶಕ, ಸಾಹಿತಿ ಶಂಕರ್ ಮೊಕಾಶಿ ಪುಣೇಕರ್ ಅವರು ರಚಿಸಿದ್ದಾರೆ.

1962 ರಲ್ಲಿ ಪ್ರಕಟಿಸಿದ ಹೊತ್ತಿಗೆಯನ್ನು ಕೆಲವು ಲೇಖನಗಳ ಜೊತೆಗೆ ಪರಿಷ್ಕರಿಸಿ ಪ್ರಕಟಿಸಲಾಗಿದೆ. ಇಲ್ಲಿನ ಪ್ರಬಂಧಗಳ ಸಾಮಾನ್ಯಗುಣವೆಂದರೆ ಇವು ಯಾವುವೂ ನವ್ಯ ವಿಮರ್ಶೆಗಳಲ್ಲ ಒಂದೇ ಕವನದ ವಿಶ್ಲೇಷಣೆಯಲ್ಲೂ ನವ್ಯ ವಿಮರ್ಶೆಯ ಇತಿಮಿತಿಗೆ ಬದ್ಧವಾಗಿಲ್ಲ. ವಿಸ್ತಾರವಾದ ಹಿನ್ನೆಲೆಯಲ್ಲಿ ಆಯಾ ಕವನಗಳ ವೈಶಿಷ್ಟ್ಯವನ್ನು ತೋರ್ಪಡಿಸಲಾಗಿದೆ.

ಕವಿಯ ಉದ್ದೇಶವನ್ನೇ ತಿಳಿದುಕೊಳ್ಳದೆ ಕಾವ್ಯ ಓದುವುದು, ನವ್ಯ ವಿಮರ್ಶೆಯ ತಾತ್ವಿಕ ಚಟ. ಕೃತಿಯನ್ನಷ್ಟೇ ಓದಿದರೆ ಸಾಲದು. ಕೃತಿಯೊಂದೇ ಸಾಮಗ್ರಿಯಲ್ಲ. ನವ್ಯರು ಕವಿಯ ಉದ್ದೇಶದ ಬಗ್ಗೆ ಬರೆಯುವುದು ಅಪ್ರಸ್ತುತವೆಂದು ಬರೆಯುತ್ತಾರೆ. ಇಂಥ ಬಂಧನಗಳಿಗೆ ವಿದಾಯ ಹೇಳುವುದು ತೌಲನಿಕ ಅಧ್ಯಯನದ ಉದ್ದೇಶ, ಇಂಥ ತೌಲನಿಕ ಅಧ್ಯಯನದ ಬರಹಗಳು ಈ ಹೊತ್ತಿಗೆಯ ಹೂರಣವೆಂದೇ ಹೇಳಬಹುದು.