ನೆರಳಹಾಸು / Neralahaasu
ನೆರಳಹಾಸು / Neralahaasu Original price was: ₹345.Current price is: ₹310.
Back to products
ಗುಜರಿ ತೋಡಿ / Gujari Thodi
ಗುಜರಿ ತೋಡಿ / Gujari Thodi Original price was: ₹300.Current price is: ₹270.

ಕ್ರಾಂತಕದರ್ಶನ / Krantadarshana

Author: Vasantha Divanaji

Pages: 160

Edition: 2022

Book Size: 1/8th Demmy

Binding: Paper Back

Publisher: Sahitya Bhandara

Original price was: ₹160.Current price is: ₹144.

In stock

Description

ಕ್ರಾಂತಕದರ್ಶನ / Krantadarshana – ಕುಸುಮಾಕರ ದೇವರಗಣ್ಣೂರ ಅವರ ಕೃತಿ ಕ್ರಾಂತದರ್ಶನ. ಬೇಂದ್ರೆಯವರ ಕಾವ್ಯ ಸ್ವರೂಪದ ವಿರಾಟ್ ದರ್ಶನ ಈ ಕೃತಿಯಲ್ಲಿ ಸಾಧ್ಯವಗುತ್ತದೆ. ಕುಸುಮಾಕರರು ಬೇಂದ್ರೆಯವರ ಅಂತೇವಸಿಗಳಾಗಿ, ಮಗನೇ ಆಗಿ ಅವರ ಸಾಮಿಪ್ಯದಲ್ಲಿ ಬೆಳೆದವರು. ಈ ಕೃತಿಗೊಂದು ಉಪನಿಷತ್ತಿನ ಸ್ವರೂಪವಿದೆ. ಬಹುಷಃ ಅದಕ್ಕೆ ಇದನ್ನು ’ಕ್ರಾಂತದರ್ಶನ’ ಎಂದು ಕರೆದಿರಬಹುದು. ಬೇಂದ್ರೆ ಮತ್ತು ಕುಸುಮಾಕರರ ನಡುವಿನ ಒಡನಾಟದ ಹಬೆ ಹಬೆಯಾಡುತ್ತವೆ ಇಲ್ಲಿನ ಲೇಖನಗಳು. ಕೃತಿಯ ಬೆನ್ನುಡಿಯಲ್ಲಿ ಬರೆದಿರುವಂತೆ, ಹಲವು ವರ್ಷಗಳ ಕಾಲ ಬೇಂದ್ರೆಯವರ ಜೀವನ ಮತ್ತು ಬರವಣಿಗೆಯನ್ನು ಬಹಳ ಹತ್ತಿರದಿಂದ, ಬಹಳ ಪ್ರೀತಿಯಿಂದ ನೋಡಿದ ವಸಂತ ದಿವಾಣಜಿ ಅವರು ಈ ವಿಶಿಷ್ಟವಾದ ಕೃತಿಯನ್ನು ಕೊಟ್ಟಿದ್ದಾರೆ. ಇಲ್ಲಿ ಕವಿ ಮತ್ತು ರಸಿಕರ ನಡುವಿನ ಅರ್ಥಪೂರ್ಣ ಸಂವಾದವಿದೆ. ಬೇರೆಲ್ಲಿಯೂ ಸಿಗಲಾರದ ನೆನಪುಗಳ ಸಂಕಲನವು ಕವಿಹೃದಯದ ಆಗುಹೋಗುಗಳಿಗೆ ಕನ್ನಡಿ ಹಿಡಿದಿದೆ. ಎಚ್ಚರದ ಪ್ರತಿ ಕ್ಷಣದಲ್ಲಿಯೂ ಕವಿಯಂತೆಯೇ ಲೋಕವನ್ನು ಕಂಡ, ಹಾಗೆಯೇ ಕಂಡರಿಸಿದ ಬೇಂದ್ರೆ ಅವರನ್ನು ದಿವಾಣಜಿಯವರ ಸೂಕ್ಷ್ಮ ಮತಿಯು ಗೌರವ ಮತ್ತು ವಿಮರ್ಶಾತ್ಮಕ ದೂರಗಳಿಂದ ನೋಡಿದೆ.ಬೇಂದ್ರೆಯವರೇ ಹೇಳಿದ ಹತ್ತು ಹಲವು ವಿಚಾರಗಳು ಮತ್ತು ಅವರ ಜೀವನದಿಂದ ಆಯ್ದು ತೆಗೆದ ಘಟನೆಗಳು ಮಸ್ತಕದ ಮೌಲ್ಯವನ್ನು ಹೆಚ್ಚಿಸಿವೆ.ಬೇಂದ್ರೆಯವರ ಕವಿತೆಯನ್ನು ಗ್ರಹಿಸಬೇಕಾದ ಹಲವು ಬಗೆಗಳನ್ನು, ಕವಿಯ ಮೂಲಕ ಮತ್ತು ಸ್ವಂತ ಪ್ರತಿಭೆಯ ಮೂಲಕ ಕಂಡುಕೊಂಡ ಲೇಖಕರು ಒಟ್ಟಂದದ ವಿಶ್ಲೇಷಣೆ ಮತ್ತು ಹಲವು ಕವಿತೆಗಳ ಓದಿನ ಮೂಲಕ ತೋರಿಸಿಕೊಟ್ಟಿದ್ದಾರೆ. ಬೇಂದ್ರೆಯವರ ಮಿತಿಗಳನ್ನು ಗುರುತಿಸಿಯೂ ಅವರ ಕಾವ್ಯದ ಅಖಂಡ ಶಕ್ತಿಯನ್ನು ತೆರೆದು ತೋರಿಸುವುದು ಮೆಚ್ಚುವುದು ಇದರ ಹಿರಿದು.ಬೇಂದ್ರೆಯವರ ಬಗ್ಗೆ ಈವರೆಗೆ ಬಂದಿರುವ ವಿಮರ್ಶೆಯ ವಿಮರ್ಶೆ ಈ ಪುಸ್ತಕದ ಇನ್ನೊಂದು ನೆಲೆ. ನೇರವಾಗಿ ಹೆಸರಿಸದಿದ್ದರೂ ಕನ್ನಡದ ಪ್ರಮುಖ ಬೇಂದ್ರೆ ವಿಮರ್ಶಕರ ವಿಧಾನ, ಶಕ್ತಿ ಮತ್ತು ಪರಿಮಿತಿಗಳ ಸೂಕ್ಷ್ಮವಾದ ಪರಿಶೀಲನೆ ಇಲ್ಲಿದೆ. ಗತ-ಪ್ರಸ್ತುತಗಳ ಸೀಮಿತಗಳನ್ನು ಮೀರಿದ ತಾತ್ವಿಕಸಂಗತಿಗಳ ನೋಟವು ಕವಿಗೆ ಸಾಧ್ಯ. ಆದ್ದರಿಂದಲೇ ಅವನನ್ನು ಕ್ರಾಂತದರ್ಶಿಯೆಂದು ಕರೆಯುತ್ತಾರೆ. ಬೇಂದ್ರೆಯವರು ನೀಡಿರುವ, ಅಂಥ ದರ್ಶನದ ಹೊಳಹುಗಳನ್ನು ಈ ಪುಸ್ತಕವು ಅರಸುತ್ತದೆ.ಆರಾಧನೆ ಅಥವಾ ನಿರಾಕರಣೆಗಳೆಂಬ ಅತಿರೇಕಗಳನ್ನು ಬದಿಗಿಟ್ಟು ಕಲೆಯನ್ನು ಅನುಸಂಧಾನ ಮಾಡುವ ‘ಕ್ರಾಂತದರ್ಶನ ಇಂಥ ಪ್ರಯತ್ನಗಳಿಗೆ ಮಾದರಿ ಎಂಬುದಾಗಿದೆ.