ಸ್ಟೈಲಿಂಗ್ ಅಟ್ ದಿ ಟಾಪ್ / Styling At The Top
Author:Shivanand
Pages:244
Edition: 2019
Book Size: 1/8th Demmy
Binding: Hard Bound
Publisher: Manjul Publishing House
Specification
Description
ಸ್ಟೈಲಿಂಗ್ ಅಟ್ ದಿ ಟಾಪ್ / Styling At The Top -ಶ್ರೀ ಶಿವರಾಮ ಭಂಡಾರಿ ಅವರಿಗೆ ಈಗ ಐವತ್ತೆಂಟರ ಪ್ರಾಯ. ಅವರು ಕೇಶವಿನ್ಯಾಸ ಕ್ಷೇತ್ರದಲ್ಲಿ ಮಾಡಿದ ಸಾಧನೆ ಬೆರಗುಗೊಳಿಸುವಂಥಹದು. ಕಾರ್ಕಳದ ಅತ್ತೂರಿನ ಸಮೀಪದ ನಾಗೋಲಿ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ, ಬಡ ನಾಪಿತ(ಭಂಡಾರಿ)ಸಮಾಜಕ್ಕೆ ಸೇರಿದ, ವಾಮನಾಕಾರದ ಬಾಲಕರಾಗಿದ್ದರು. ಬಡತನ ಮತ್ತು ದುರ್ದೈವದ ಶಿಕಾರಿಯಾಗಿ ಬಾಲ್ಯ ಕಳೆದರು. 5ನೆಯ ತರಗತಿಯವರೆಗೆ ಮಾತ್ರ ಅಭ್ಯಾಸ ಮಾಡಿದ ಅವರು ಎಳಮೆಯಲ್ಲಿಯೇ ಕೇಶಕರ್ತನ ವೃತ್ತಿಯನ್ನು ಪ್ರಾರಂಭಿಸಿದರು. ಪ್ರತಿಭೆ, ಪರಿಶ್ರಮ, ಮಹತ್ವಾಕಾಂಕ್ಷೆಯ ಬೆಂಬಲದಿಂದ ತ್ರಿವಿಕ್ರಮನಾಗಿ ಬೆಳೆದರು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದರು, ರೆಪಿಡೆಕ್ಸ್ ಓದಿ ಇಂಗಿಷ್‍ನಲ್ಲಿ ಮಾತಾಡಲು ಕಲಿತರು, ಹಲವಾರು ಭಾಷೆಗಳನ್ನು ( ತಮಿಳು, ಮಲಯಾಳಂ, ಹಿಂದಿ, ಮರಾಠಿ, ಅರೇಬಿಕ್) ಸುಲಲಿತವಾಗಿ ಮಾತಾಡಲು ಕಲಿತರು, ಬಾಲಿವುಡ್‍ನಲ್ಲಿಯೂ ಬಹುಬೇಡಿಕೆಯ ವ್ಯಕ್ತಿಯಾದರು, ವಿದೇಶಗಳಲ್ಲಿ ತರಬೇತಿ ಪಡೆದರು, ತನ್ನ ಕ್ಷೇತ್ರದಲ್ಲಿ ಡಾಕ್ಟರೇಟ್ ಪದವಿಯನ್ನು ಗಳಿಸಿದ ಪ್ರಥಮ ಭಾರತೀಯನಾದರು.
