ಅನಾಥೆ / Anathe
ಅನಾಥೆ / Anathe Original price was: ₹150.Current price is: ₹135.
Back to products

ಮಾನವತವಾದಿ ಬಸವಣ್ಣ / Manavatavaadi Basavanna

Author:M Basavanna

Pages:48

Edition: 2024

Book Size: 1/8th Demmy

Binding: Paper Back

Publisher:  Amulya Prakashana

Original price was: ₹40.Current price is: ₹36.

In stock

Description

ಮಾನವತವಾದಿ ಬಸವಣ್ಣ / Manavatavaadi Basavanna -‘ಮಾನವತಾವಾದಿ ಬಸವಣ್ಣ’ ಎಂ. ಬಸವಣ್ಣನವರ ಕೃತಿ. ಈ ಕೃತಿಯ ಕುರಿತು ಬರೆದಿರುವ ಅವರು ನಾನೊಬ್ಬ ಮನೋವಿಜ್ಞಾನದ ವಿದ್ಯಾರ್ಥಿ. ಏನಾದರೂ ಬರೆಯುವುದಿದ್ದರೆ ಅದು ಮನೋಜ್ಞಾನವನ್ನು ಕುರಿತಾಗಿಯೆ. ಕಲ್ಯಾಣದ ಬಸವಣ್ಣನನ್ನು ಕುರಿತು ಬರೆಯಬೇಕಾಗಿ ಬಂದದ್ದು ಆಕಸ್ಮಿಕ ಎಂದಿದ್ದಾರೆ. ಜೊತೆಗೆ ಅದು ನಡೆದದ್ದು ಹೀಗೆ. ನಾನು 2015ರಲ್ಲಿ ಭಕ್ತಿಯನ್ನು ಕುರಿತು ಒಂದು ಲೇಖನ ಬರೆಯಬೇಕಾಗಿ ಬಂತು. ನನ್ನ ಪ್ರಕಾರ ಭಕ್ತಿ ಒಂದು ಮಾನಸಿಕ ಪ್ರಕ್ರಿಯೆ. ಅದನ್ನು ಬರೆಯುವಾಗ ಭಕ್ತಿ ಎಂದರೇನು? ಅದು ಎಲ್ಲಿ ಹುಟ್ಟಿ, ಹೇಗೆ ಬೆಳೆಯಿತು, ಮುಂತಾದ ವಿವರಗಳನ್ನೆಲ್ಲಾ ಬರೆಯುವಾಗ, 12ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಭಕ್ತಿ ಪಂಥವನ್ನು ಬೆಳಗಿಸಿದ ಭಕ್ತಿ ಭಂಡಾರಿ ಬಸವಣ್ಣನವರನ್ನು ಕುರಿತು ಹತ್ತಾರು ವಾಕ್ಯಗಳನ್ನು ಬರೆದಿದ್ದೆ. ಆ ಲೇಖನ ನನ್ನದೊಂದು ಪುಸ್ತಕದಲ್ಲಿ ಪ್ರಕಟವಾಯಿತು. ಆ ಪುಸ್ತಕ ನಾಲ್ಕಾರು ಸಾರಿ ಮರುಮುದ್ರಣಗೊಂಡು ಕನ್ನಡ ಓದುಗರ ಮೆಚ್ಚುಗೆಗೆ ಪಾತ್ರವಾಯ್ತು. ಅದನ್ನು ಓದಿದ ಕೆಲವರು ಬಸವಣ್ಣನನ್ನು ಕುರಿತು ಒಂದು ಲೇಖನ ಬರೆಯುವಂತೆ ನನ್ನನ್ನು ಒತ್ತಾಯಿಸಿದರು. ಅದರ ಪರಿಣಾಮವಾಗಿ ಒಂದು ಸುದೀರ್ಘವಾದ ಲೇಖನವನ್ನು ಬರೆದೆ. ಅದನ್ನು ನೋಡಿದ ಯುವ ಪ್ರಕಾಶಕ ಶ್ರೀ ಕೃಷ್ಣ ಚಂಗಡಿ ಒಂದು ಪುಟ್ಟ ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿರುವರು. ಪರಿಣಾಮ ನಿಮ್ಮ ಮುಂದಿದೆ. ನನ್ನೆಲ್ಲಾ ಪುಸ್ತಕಗಳನ್ನು ಓದಿ ಪ್ರೋತ್ಸಾಹಿಸುತ್ತಿರುವ ಕನ್ನಡಿಗರು ಇದನ್ನೂ ಸ್ವೀಕರಿಸುವರೆಂದು ನಂಬಿದ್ದೇನೆ ಎಂದಿದ್ದಾರೆ.