ಪ್ರಾಚೀನ ಪ್ರೇಮ ಕಥೆಗಳು / Pracheena Prema Kathegalu
Author:V Sitaramaiah
Pages:116
Edition: 2025
Book Size: 1/8th Demmy
Binding: Paper Back
Publisher: Amulya Pustaka Prakasahna
Description
ಪ್ರಾಚೀನ ಪ್ರೇಮ ಕಥೆಗಳು / Pracheena Prema Kathegalu -“ಈ ಸಣ್ಣ ಪುಸ್ತಕದಲ್ಲಿನ ಐದು ಕಥೆಗಳೂ ಮೂಲ ಮಹಾಭಾರತದಿಂದ ಎತ್ತಿಕೊಂಡವು: ಆ ಕಥೆಯಲ್ಲಿ ನಡುನಡುವೆ ಬರುವ ಉಪಕಥೆಗಳು. ನಮ್ಮ ಸಂಸ್ಕೃತಿ ಮೊದಲಿಂದಲೂ ಯಾವ ದಾರ್ಡ್ಯದಲ್ಲಿ ನಡೆದಿದೆ. ಯಾವ ಪಕ್ಷಪಾತಕ್ಕೆ ಬೆಲೆ ಕೊಟ್ಟಿದೆ ಎಂಬುದನ್ನು ತೋರಿಸುವವು. ಇವೊತ್ತಿಗೂ ಹೊಸತೆನ್ನಬಹುದಾದ ರೀತಿ, ರಚನೆ ಅಲ್ಲಿ ಪ್ರತಿಫಲಿಸುತ್ತವೆ. ಕಥೆಗಳು ಹಿಂದಿನವಾದರೇನು? ಅವುಗಳಲ್ಲಿ ಎಲ್ಲ ಕಾಲದ ಮಾನವ ಜೀವನದ ಸತ್ಯದರ್ಶನ ಉಂಟು. ಎದೆಯ ಆಳದಲ್ಲಿ ಕುಳಿತು ಮನುಷ್ಯನನ್ನು ಶುಚಿಗೂ ಧೃತಿಗೂ ಧರ್ಮಕ್ಕೂ ನಡೆಸುವ ಪ್ರಭಾವಗಳ ಪರಿಚಯ ಅಲ್ಲಿ ದೊರಕುತ್ತದೆ. ಆ ಕಾಲಕ್ಕೂ ಈ ಕಾಲಕ್ಕೂ ಹೊರವ್ಯತ್ಯಾಸ ಎಷ್ಟೇ ಇದ್ದರೂ ಈ ಜನವೇ ಹಿಂದೆ ಬದುಕಿದ ಬಾಳು ಅದು: ಅದರ ಹದ ಇಂದಿಗೂ ಸ್ಫೂರ್ತಿದಾಯಕವೇ. ಆದುದರಿಂದ ಅದು ಹಳತಲ್ಲ. ಇಂದಿನದು ಮಾತ್ರ ಹೊಸತು, ಹಿಂದಿನ ಕಾಲದ್ದು ಹಳತು, ಹಳಸಲು ಎಂಬ ಮಾತು ಅಸತ್ಯ. ಹಳತು, ಹೊಸತು ಎಂಬ ಮಾತು ಹೆಚ್ಚಾಗಿ ಜೀವಗುಣಕ್ಕೆ ಸಂಬಂಧಿಸಿದ್ದು; ಬರಿಯ ಕಾಲಮಾನಕ್ಕಲ್ಲ. ಜೀವಂತ ಪ್ರಭಾವ ಎಲ್ಲೆಲ್ಲಿ ಹರಿಯುವುದೋ ಹೊಮ್ಮುವುದೋ ಅಲ್ಲೆಲ್ಲ ಸನಾತನವಾದ. ಅಮೃತವಾದ ಚೈತನ್ಯವಿರುತ್ತದೆ. ಅಂಥ ಶಕ್ತಿ ಈ ಕಥೆಗಳಲ್ಲಿದೆ.”
