ಕ್ರಾಂತಿಜ್ಯೋತಿ ಸಾವಿತ್ರಿ ಬಾಯಿ ಫುಲೆ / Krantijyoti Savitri Bai Phule

Author:Dr H S Anupama

Pages:96

Edition: 2025

Book Size: 1/8th Demmy

Binding: Paper Back

Publisher:Ladai Prakashana

Original price was: ₹100.Current price is: ₹90.

In stock

Description

ಕ್ರಾಂತಿಜ್ಯೋತಿ ಸಾವಿತ್ರಿ ಬಾಯಿ ಫುಲೆ / Krantijyoti Savitri Bai Phule -ಕೆಳವರ್ಗದ ಮಹಿಳೆಯರು ಜಾತಿ ಶೋಷಣೆಯ ಜೊತೆಗೆ ಲಿಂಗ ಅಸಮಾನತೆಯನ್ನು ಎದುರಿಸುತ್ತಲೇ ಬಂದವರು. ಸಾವಿತ್ರಿ ಬಾಯಿ ಅವರು ಜೀವಿಸಿದ ಸಾಮಾಜಿಕ ಸಂದರ್ಭದಲ್ಲಂತೂ ಮಹಿಳೆಗೆ ಸಾಕಷ್ಟು ಅಂಕುಶಗಳಿದ್ದವು. ಅದನ್ನೆಲ್ಲಾ ಮೀರಿ ಆಕೆ ಭಾರತದ ಮೊಟ್ಟಮೊದಲ ಶಿಕ್ಷಕಿ, ಆಧುನಿಕ ಶಿ‌ಕ್ಷಣದ ತಾಯಿಯಾಗಿದ್ದು ಒಂದು ಕೌತುಕದ ಸಂಗತಿ. ಸಾವಿತ್ರಿ ಅವರ ಬಗ್ಗೆ ಮಾತನಾಡುವುದು ಎಂದರೆ ಅವರ ಸುತ್ತಲೂ ಇದ್ದ ಸಮಾಜ, ವ್ಯವಸ್ಥೆಯ ಕುರಿತು ಮಾತನಾಡುವುದು ಎಂತಲೇ ಅರ್ಥ. ಎಷ್ಟೆಲ್ಲಾ ಮಿತಿಗಳ ನಡುವೆಯೂ ಆಕೆ ಬಾಲಕಿಯರಿಗೆಂದೇ ಪ್ರತ್ಯೇಕ ಶಾಲೆ ತೆರೆಯುತ್ತಾರೆ. ಪತಿ ಜ್ಯೋತಿಬಾ ಪುಲೆ ಅವರೊಂದಿಗೆ ಸೇರಿ ಜಾತಿಮತದ ಹೊಟ್ಟ ತೂರಲು ಯತ್ನಸಿದ್ದು ಒಂದು ರೀತಿ ರೋಚಕ ಕಥನದಂತೆಯೇ ಇದೆ.

ಸಾಮಾಜಿಕ ಕಳಕಳಿಯನ್ನೇ ತಮ್ಮ ಬರಹದ ಭಾಗವನ್ನಾಗಿಸಿಕೊಂಡಿರುವ ಡಾ. ಎಚ್‌.ಎಸ್. ಅನುಪಮಾ ಕೃತಿಯನ್ನು ಬರೆದಿರುವುದು ಅದರ ಮೆರುಗು ಇನ್ನಷ್ಟು ಹೆಚ್ಚಲು ಕಾರಣವಾಗಿದೆ.