ಮೋಹನ್ ದಾಸ್ ಒಂದು ಸತ್ಯ ಕಥೆ / Mohan Das Ondu Satya Kathe
Author:G N Ranghanath Rao
Pages:952
Edition: 2015
Book Size: 1/8th Demmy
Binding: Hard Bound
Publisher:Loka Shikshana Trust
Description
ಮೋಹನ್ ದಾಸ್ ಒಂದು ಸತ್ಯ ಕಥೆ / Mohan Das Ondu Satya Kathe -ಮಹಾತ್ಮಗಾಂಧೀಜಿ ಅವರ ಮೊಮ್ಮಗ ರಾಜ್ ಮೋಹನ್ ದಾಸ್ ಅವರು ಇಂಗ್ಲಿಷ್ ನಲ್ಲಿ ಬರೆದ ಕೃತಿಯನ್ನು ಹಿರಿಯ ಲೇಖಕ, ಪತ್ರಕರ್ತ ಜಿ.ಎನ್ ರಂಗನಾಥ ರಾವ್ ಅವರು ಅನುವಾದಿಸಿದ ಕೃತಿ- ’ಮೋಹನ್ ದಾಸ್ ಒಂದು ಸತ್ಯಕಥೆ’ ಮಹಾತ್ಮ ಗಾಂಧಿ ಕುರಿತ ಒಂದು ಸತ್ಯ ಕತೆಯಾಗಿದೆ. ಈ ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ ಪುರಸ್ಕೃತವಾಗಿದೆ. ಕೇವಲ ಚಾರಿತ್ರಿಕ ಪುನರ್ ಸೃಷ್ಟಿಯಾಗದೇ ಇವತ್ತಿನ ಜ್ವಲಂತ ಸಮಸ್ಯೆಗಳಿಗೂ ಬೆಳಕಿಂಡಿಯಾಗಿದೆ. ಮುಸ್ಲಿಂ ಮತ್ತು ಮುಸ್ಲಿಮೇತರ ಜನರ ನಡುವಣ ಸ್ನೇಹ -ಸಾಮರಸ್ಯಗಳ ಮರು ಹೊಂದಾಣಿಕೆಗಾಗಿ ಜಗತ್ತು ತುದಿಗಾಲಿನಲ್ಲಿ ನಿಂತಿರುವ ಇಂದಿನ ಪರಿಸ್ಥಿತಿಯಲ್ಲಿ ಈ ಕೃತಿಯು ಸುಸಂಗತವೆನಿಸುವ ಕೃತಿ ಎಂದು ಅಭಿಪ್ರಾಯಪಡಲಾಗುತ್ತಿದೆ..
ಕೃತಿಗೆ ಬೆನ್ನುಡಿ ಬರೆದಿರುವ ಅಶೋಕ್ ಹಾರನಹಳ್ಳಿ ಅವರು, ‘ಗಾಂಧೀಜಿಯವರು ಅದ್ಭುತವಾದ ಅಧ್ಯಾತ್ಮಿಕ ಶಕ್ತಿಯನ್ನು ಹೊಂದಿದ್ದರು. ಈ ಅಧ್ಯಾತ್ಮಿಕ ಶಕ್ತಿಯಿಂದ ಅವರು ತಮ್ಮ ಜೊತೆಗಿನ ಸಾಮಾನ್ಯ ಮನುಷ್ಯರನ್ನು ಅಸಾಮಾನ್ಯರಾಗಿ ಪರಿವರ್ತಿಸಿದರು. ಗಾಂಧೀಜಿಯವರ ಹಾಗೂ ರಾಜಾಜಿಯವರ ಮೊಮ್ಮಗ ಕಂಡಿರುವ ತಾತನ ನೈಜ ಚಿತ್ರಣ ಇಲ್ಲಿದೆ. ಲೇಖಕರು ಇಲ್ಲಿ ತಾತನ ಅಂತರಂಗ – ಬಹಿರಂಗಗಳನ್ನು ವಸ್ತುನಿಷ್ಟವಾಗಿ ವಿವರಿಸಿದ್ದಾರೆ. ಇಪ್ಪತ್ತನೇ ಶತಮಾನದ ಮಹಾನ್ ಹೋರಾಟಗಾರನ ನೈಜ ರೂಪ ಇಲ್ಲಿದೆ. ಸ್ವಾತಂತ್ಯ್ರ ಹಿಂದೂ- ಮುಸ್ಲಿಂ ಏಕತೆ, ಬ್ರಹ್ಮಚರ್ಯೆಯ ಪಾಲಕನ ಅಂತರಂಗದ ತುಮುಲಗಳನ್ನು ಈ ಕೃತಿ ಸ್ಪಷ್ಟಪಡಿಸುತ್ತದೆ. ಅಲ್ಲದೇ, ಗಾಂಧೀಜಿ ಅವರ ಪತ್ನಿ ಕಸ್ತೂರಿ ಬಾ, ಮಗ ಹರಿಲಾಲ್, ವಲ್ಲಭಭಾಯಿ ಪಟೇಲ್ , ನೆಹರೂ, ರಾಜೇಂದ್ರ ಪ್ರಸಾದ್ , ರಾಜಾಜಿ, ಅಂಬೇಡ್ಕರ್ ಮುಂತಾದ ಹೋರಾಟಗಾರರು ಈ ಕೃತಿಯಲ್ಲಿ ಚಿತ್ರಿತರಾಗಿದ್ದಾರೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
