ಧ್ಯಾನ ಮತ್ತು ಆಧ್ಯಾತ್ಮಿಕ ಜೀವನ / Dhyana Mattu Aadhyatmika Jeevana

Author:Swami Yatishwaranandaji

Pages:651

Edition: 2022

Book Size: 1/8th Demmy

Binding: Paper Back

Publisher:Sri Ramakrishna ashrama

Original price was: ₹290.Current price is: ₹261.

In stock

Description

ಧ್ಯಾನ ಮತ್ತು ಆಧ್ಯಾತ್ಮಿಕ ಜೀವನ / Dhyaana Mattu Aadhyaatmika Jeevana -‘ ಧ್ಯಾನ ಮತ್ತು ಆಧ್ಯಾತ್ಮಿಕ ಜೀವನ’ ಇದು ಸ್ವಾಮಿ ಯತೀಶ್ವರಾನಂದರು(1889-1966) ಇಂಗ್ಲಿಷಿನಲ್ಲಿ ಬರೆದ ‘ ಮೆಡಿಟೇಶನ್ ಎಂಡ್ ಸ್ಪಿರಿಚುವಲ್ ಲೈಫ್’ ಪುಸ್ತಕದ ಕನ್ನಡ ಅನುವಾದ. ಸ್ವಾಮಿ ಯತೀಶ್ವರಾನಂದರು ಶ್ರೀ ರಾಮಕೃಷ್ಣ ಪರಮಹಂಸರ ನೇರ ಶಿಷ್ಯರಾದ ಸ್ವಾಮಿ ಬ್ರಹ್ಮಾನಂದರ ಶಿಷ್ಯರು. ಇವರು 15 ವರ್ಷಗಳ ಕಾಲ ಬೆಂಗಳೂರಿನ ಶ್ರೀ ರಾಮಕೃಷ್ಣಾಶ್ರಮದ ಅಧ್ಯಕ್ಷರಾಗಿಯೂ ಇದ್ದರು. ಇವರು ಯುರೋಪ್ ಹಾಗೂ ಅಮೆರಿಕ ಪ್ರವಾಸದಲ್ಲಿ ನೀಡಿದ ಉಪದೇಶಗಳ ಸಂಗ್ರಹವನ್ನು ಪುಸ್ತಕ ರೂಪದಲ್ಲಿ ನೀಡಲಾಗಿದೆ. ಪುಸ್ತಕವನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದಿಸಿದವರು ನಿ ಸ್ವಾ.

ಆಧ್ಯಾತ್ಮ ಎನ್ನುವುದು ನಮ್ಮ ಪ್ರಕಾರ ಊಹೆಗೆ ನಿಲುಕದ ಯಾವುದೋ ಕಲ್ಪನೆ. ಆದರೆ ಈ ಪುಸ್ತಕ ಅದೊಂದು ವಾಸ್ತವ ಎನ್ನುವ ಭಾವನೆಯನ್ನು ಮೂಡಿಸುತ್ತಾ ಹೋಗುತ್ತದೆ. ಆಧ್ಯಾತ್ಮ ಎಂದರೇನು? ಧ್ಯಾನದ ಮಹತ್ವ ಏನು? ಧ್ಯಾನ ಯಾವ ರೀತಿಯಲ್ಲಿ ಆಧ್ಯಾತ್ಮಿಕ ಜೀವನಕ್ಕೆ ಸಹಕಾರಿಯಾಗುತ್ತದೆ? ಆಧ್ಯಾತ್ಮ ಮಾರ್ಗದಲ್ಲಿ ಸಾಗುವ ಬಗೆ ಹೇಗೆ? ಅಲ್ಲಿ ಇರುವ ಹಂತಗಳು ಯಾವುವು? ಎದುರಿಸಬೇಕಾದ ಸವಾಲುಗಳೇನು? ಎಲ್ಲ ಹಂತಗಳನ್ನು ದಾಟಿ ಕೊನೆಯಲ್ಲಿ ನಾವು ಪಡೆಯುವುದೇನು? ಈ ಎಲ್ಲ ಅಂಶಗಳು ಇಲ್ಲಿ ಚರ್ಚಿತವಾಗಿವೆ.