ನನ್ನ ದೇವರು ಮತ್ತು ಇತರ ಕಥೆಗಳು / Nanna Devaru Mathu Ethara Kathegalu
Author: Kuvempu
Pages:79
Edition: 2025
Book Size: 1/8th Demmy
Binding: Paper Back
Publisher: Udayaravi Prakasahana
Description
ನನ್ನ ದೇವರು ಮತ್ತು ಇತರ ಕಥೆಗಳು / Nanna Devaru Mathu Ethara Kathegalu -1940ರಲ್ಲಿ ಮೊದಲ ಮುದ್ರಣವನ್ನು ಕಂಡಂತಹ ನನ್ನ ದೇವರು ಮತ್ತು ಇತರ ಕಥೆಗಳು, ಈವರೆಗೆ ಹದಿನೆಂಟು ಮುದ್ರಣಗಳನ್ನು ಕಂಡಿದೆ. ಈ ಪುಸ್ತಕದಲ್ಲಿ ನನ್ನ ದೇವರು, ಸಾಲದ ಮಗು, ಆದರ್ಶ ಸಾಧನೆ, ಔದಾರ್ಯ, ಗಂಟು ಅಥವಾ ಗುಪ್ತದಾನ, ಮೀನಾಕ್ಷಿಯ ಮನೆಮೇಷ್ಟರು, ಧನ್ವಂತರಿಯ ಚಿಕಿತ್ಸೆ ಹಾಗೂ ವೈರಾಗ್ಯದ ಮಹಿಮೆ ಹೀಗೆ ಒಟ್ಟು ಎಂಟು ಕಥೆಗಳನ್ನು ಒಳಗೊಂಡಂತಹ ಪುಸ್ತಕ ನನ್ನ ದೇವರು ಮತ್ತು ಇತರ ಕಥೆಗಳು. ಕುಟುಂಬದಲ್ಲಿನ ಕಷ್ಟ ಸುಖಗಳ ಕುರಿತಾಗಿ ನವಿರಾಗಿ ವಿವರಿಸಿ ಬರೆದಂತಹ ಪುಸ್ತಕವಿದು. ಒಂದು ಸಂಸಾರದಲ್ಲಿರುವ ವ್ಯಕ್ತಿಗಳ ನಡುವಿರುವ ಸಂಬಂಧಗಳ ಭಾವನೆಯನ್ನು ಈ ಪುಸ್ತಕದಲ್ಲಿ ವರ್ಣಿಸಲಾಗಿದೆ. ಸಾಲದ ಮಗು ಕಥೆಯಲ್ಲಿ, ಬಂಡವಾಳಶಾಹಿಕೋರರ ದೌರ್ಜನ್ಯಕ್ಕೆ ತುತ್ತಾದ ಅಮಾಯಕ ಬಾಲಕನ ಕಥೆ ಓದುಗರ ಮನ ಕಲುಕುತ್ತೆ. ಮುನ್ನೂರು ರೂಪಾಯಿ ಸಾಲಕ್ಕೆ ಜೀತದ ಆಳಾಗಿ ಗೌಡರ ಮನೆಯಲ್ಲಿ ಕೆಲಸಕ್ಕೆ ಸೇರುವ ಮುಗ್ದ ಬಾಲಕನ ಸಾವನ್ನು ಮನಸ್ಸಿಗೆ ನಾಟುವ ರೀತಿಯಲ್ಲಿ ಈ ಕಥೆಯಲ್ಲಿ ವಿವರಿಸಲಾಗಿದೆ. ಕುವೆಂಪು ಅವರ ಇತರ ಬರೆವಣಿಗೆಗಳಂತೆ ಈ ಪುಸ್ತಕದಲ್ಲಿನ ಕಥೆಗಳಲ್ಲಿ ಕೂಡ ಪ್ರಕೃತಿಯ ವಿವರಣೆ ಈ ಪುಸ್ತಕದಲ್ಲಿದೆ.
