ಧರ್ಮಯುದ್ಧ / Dharmayuddha

Author: Dr. N. Mogasale

Pages: 232

Edition: 2021

Book Size: 1/8th Demmy

Binding: Paper Back

Publisher: Manohara Grantha Mala

Original price was: ₹230.Current price is: ₹207.

In stock

Description

ಧರ್ಮಯುದ್ಧ / Dharmayuddha – ಹಿರಿಯ ಲೇಖಕ ಡಾ.ನಾ. ಮೊಗಸಾಲೆ ಅವರ ಕಾದಂಬರಿ. ಈ ಕೃತಿಗೆ ಲೇಖಕ ನರೇಂದ್ರ ಪೈ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಬದಕನ್ನು ಸಮಗ್ರವಾಗಿ ಗ್ರಹಿಸಿ, ಒಂದು ಪಾತ್ರವನ್ನು ಹೇಗೋ ಹಾಗೆಯೇ ಒಂದು ಊರನ್ನು ಅದರ ಸಕಲ ಚರಾಚರ ವ್ಯಕ್ತಿ, ವಸ್ತು, ವಿಷಯ, ವಿವರಗಳಲ್ಲಿ ಸಮೃದ್ಧಗೊಳಿಸಬಲ್ಲ ಕಲೆಗಾರಿಕೆ ಮೊಗಸಾಲೆಯವರಿಗೆ ಸಹಜವಾಗಿ ಸಿದ್ಧಿಸಿದೆ. ಏವರ ಯಾವುದೇ ಕೃತಿಯನ್ನು ಕೈಗೆತ್ತಿಕೊಂಡರೂ ಒಂದು ಅಥೆಂಟಿಕ್ ಜಗತ್ತು ತೆರೆದುಕೊಳ್ಳುವುದು ನಿಶ್ಚಿತ. ಕಾದಂಬರಿಯೊಂದು ಇಷ್ಟನ್ನೇ ಅಚ್ಚುಕಟ್ಟಾಗಿ ಮಾಡಿದರೂ ಸಾಕು ಅದೊಂದು ಅದ್ಭುತ ಕೃತಿಯಾಗುವುದರಲ್ಲಿ ಎರಡು ಮಾತಿಲ್ಲ ಎನ್ನುತ್ತಾರೆ ನರೇಂದ್ರ ಪೈ. ಒಂದು ಪಂಜುರ್ಲಿ ಗುಡಿಯ ಜೀರ್ಣೋದ್ಧಾರವನ್ನೇ ವಸ್ತುವಾಗಿಸಿಕೊಂಡು ಏನು ಮಹಾ ಸಾಧಿಸಬಹುದು ಅನಿಸಿದರೆ. ಬಹುಬೇಗ ಮೊಗಸಾಲೆಯವರು ನಮ್ಮನ್ನು ಬೆಚ್ಚಿ ಬೀಳಿಸುವಂತೆ ಆದಿಶಂಕರ, ಬಸವ, ವೈದಿಕ ಎಂದೆಲ್ಲಾ ಅಷ್ಟಾವಧಾನಕ್ಕೆ ಕುಳಿತವರಂತೆ ತಮ್ಮ ವಸ್ತು ಹೇಗೆ ಜಾನಪದ, ಹೇಗೆ ಸಾಂಸ್ಕೃತಿಕ, ಹೇಗೆ ಧಾರ್ಮಿಕ ಮತ್ತು ಹೇಗೆ ರಾಜಕೀಯ ಕೂಡ ಎಂದೆಲ್ಲಾ ಅದರ ಎಂಟೂ ಮಗ್ಗುಲುಗಳನ್ನು ಪರಿಚಯಿಸುತ್ತಾ ಸಾಗುತ್ತಾರೆ.