ನಾನು ನಾನೇ? ನಾನು ನಾನೇ! / Naanu Naane? Naanu Naane!
Author: M.S. Sriram
Pages: 186
Edition: 2021
Book Size: 1/8th Demmy
Binding: Paper Back
Publisher: Manohara Grantha Mala
Specification
Description
ನಾನು ನಾನೇ? ನಾನು ನಾನೇ! / Naanu Naane? Naanu Naane! – ಕಥೆಗಾರ ಎಂ. ಎಸ್ ಶ್ರೀ ರಾಮ್ ಅವರ ’ನಾನು ನಾನೇ? ನಾನು, ನಾನೇ!’ ಕೃತಿಯು ಪ್ರಯೋಗಾತ್ಮಕವಾಗಿ ಸಣ್ಣ ಕತೆಗಳಾಗಿವೆ. ಇಲ್ಲಿರುವ ಕತೆಗಳು ವಸ್ತು, ಮನೋಧರ್ಮ ಮತ್ತು ನಿರೂಪಣಾ ತಂತ್ರಗಳ ನೆಲೆಯಲ್ಲಿ ಬೇರೆ ಬೇರೆ ಬಗೆಗಳಾಗಿವೆ. ಪ್ರಶ್ನೆಯಲ್ಲಿ ಮೊದಲಾಗಿ ಆಶ್ಚರ್ಯದಲ್ಲಿ ಕೊನೆಯಾಗುವ ಸಂಕಲನದ ಶೀರ್ಷಿಕೆಯು ’ಲೋಕಶೋಧನೆ’ ಮತ್ತು ’ ಆತ್ಮಶೋಧನೆ’ ಎರಡರಲ್ಲಿಯೂ ಖಚಿತವಾದ ತೀರ್ಮಾನಗಳಿಗೆ ಎಡೆಯಿಲ್ಲವೆಂಬ ಸತ್ಯವನ್ನು ಹೇಳುತ್ತವೆ. ಲೋಕವನ್ನು ಅರಿಯುವ ಪ್ರಾಮಾಣಿಕ ಪ್ರಯತ್ನವು ವ್ಯಕ್ತಿಯನ್ನು ಅಂದರೆ ಇಲ್ಲಿ ’ನನ್ನನ್ನು’ ಅರಿಯುವ ದಿಕ್ಕಿನಲ್ಲಿ ಚಲಿಸುತ್ತದೆ’ ಎಂದಿದ್ದಾರೆ ಲೇಖಕ ಶ್ರೀ ರಾಮ್. ಕೃತಿಗೆ ಮುನ್ನುಡಿ ಬರೆದಿರುವ ಎಚ್.ಎಸ್ ರಾಘವೇಂದ್ರರಾವ್ ಅವರು, ಈ ಸಂಕಲನವನ್ನು ಪ್ರಯೋಗಾತ್ಮಕ ಎಂದು ಕರೆದಿರುವುದು ಸರಿಯಾಗಿದೆ. ತಮ್ಮ ಉದ್ದೇಶ ಸಾಧನೆಗಾಗಿ ಇಲ್ಲಿನ ಕತೆಗಳು ವಿವಿಧ ಸಲಕರಣೆಗಳನ್ನು ಬಳಸಿಕೊಂಡಿವೆ. ಅವೆಲ್ಲವೂ ಒಂದು ಬಗೆಯಿಂದ ವಾಸ್ತವ ನಿರೂಪಣೆಯಿಂದ ತಪ್ಪಿಸಿಕೊಳ್ಳುವ ಉಪಾಯಗಳಾಗಿವೆ. .ಶ್ರೀ ರಾಮ್ ಅವರು ಎರಡು ಬಗೆಯ ಕತೆಗಳನ್ನು ಬರೆದಿದ್ದಾರೆ. ಮೊದಲ ಕಾಲಘಟ್ಟದಲ್ಲಿ ಬರೆದ ಕತೆಗಳು ರಾಜಕೀಯದ ಫಲವಾದ ನೈತಿಕ ಅವನತಿಯನ್ನು ಕೇಂದ್ರವಾಗಿಟ್ಟುಕೊಂಡರೆ, ಎರಡನೇಯ ಹಂತದಲ್ಲಿ ನಿರ್ದಿಷ್ಟ ಬಗೆಯ ರಾಜಕಾರಣ ಮತ್ತು ಅಧಿಕಾರದ ದುರ್ಬಳಕೆಯ ಬಗ್ಗೆ ಇರುವ ಅಸಹನೆಯು ಇನ್ನಷ್ಟು ತೀವ್ರವಾಗಿ ವ್ಯಕ್ತವಾಗಿದೆ. ’ಬಸವನಹುಳು’, ’ಪ್ರಗತಿ’, ’ಈ ಊರಿನಲ್ಲಿ ಕಳ್ಳರೇ ಇಲ್ಲ’ ಮುತಾಂದವುಗಳು ಈ ಬಗೆಯ ಕತೆಗಳಾಗಿವೆ’ ಎಂದು ಪ್ರಶಂಸಿಸಿದ್ದಾರೆ.
