ವಿವಾಹ ಬಂಧನ / Vivaaha Bandhana
ವಿವಾಹ ಬಂಧನ / Vivaaha Bandhana Original price was: ₹140.Current price is: ₹126.
Back to products
ಈಶಾನ್ಯ / Eashaanya
ಈಶಾನ್ಯ / Eashaanya Original price was: ₹195.Current price is: ₹175.

ಬಿರಿದ ಮೊಗ್ಗು ಮತ್ತು ಇತರ ಕಿರು ಕಾದಂಬರಿಗಳು / Birida Moggu Mattu Ithara Kiru Kaadambarigalu

Author:  Saisuthe

Pages:256

Edition: 2019

Book Size: 1/8th Demmy

Binding: Paper Back

Publisher: Sudha Enterprises

Original price was: ₹190.Current price is: ₹171.

In stock

Description

ಬಿರಿದ ಮೊಗ್ಗು ಮತ್ತು ಇತರ ಕಿರು ಕಾದಂಬರಿಗಳು / Birida Moggu Mattu Itara Kiru Kaadambarigalu – ‘ಬಿರಿದ ಮೊಗ್ಗು ಮತ್ತು ಇತರ ಕಿರು ಕಾದಂಬರಿಗಳು’ ಕೃತಿಯು ಸಾಯಿಸುತೆ ಅವರ ಕಿರು ಕಾದಂಬರಿಗಳಾಗಿವೆ. ಬಿರಿದ ಮೊಗ್ಗು ಶೀರ್ಷಿಕೆಯ ಈ ಕಾದಂಬರಿಯಲ್ಲಿ ‘ಪಲ್ಲವಿ’, ‘ಧರೆಗಿಳಿದ ಹಕ್ಕಿ’ ಮತ್ತು ‘ಸ್ವರ್ಣ ಪಂಜರ’ ಕಿರು ಕಾದಂಬರಿಗಳಿವೆ. ‘ರಾಗಸಂಗಮ’ ಹಾಗೂ ‘ಹಂಸರಾಗ’ ತಿಂಗಳ ಪತ್ರಿಕೆಯಲ್ಲಿ ಪ್ರಕಟಗೊಂಡ ಕಾದಂಬರಿಗಳು ಒಟ್ಟಾಗಿ ‘ಬಿರಿದ ಮೊಗ್ಗು’ ಕೃತಿಯ ಮೂಲಕ ಪ್ರಕಟಗೊಂಡಿದೆ. ಈ ಕೃತಿಯ ಬೆನ್ನುಡಿಯಲ್ಲಿ, ಮನಸ್ಸಿನ ಹಿಡಿತದಲ್ಲಿರುವ ಬದುಕಿನ ಬಗ್ಗೆ ಸ್ವಲ್ಪ ತೀವ್ರವಾಗಿ ವಿಶ್ಲೇಷಣೆಗೆ ತೊಡಗಿದರೆ ದಿಗ್ಬ್ರಾಂತಿಯಾಗುತ್ತೆ. ಜೀವನವೆನ್ನುವುದು ಎಷ್ಟು ಅರ್ಥಪೂರ್ಣ ಅಷ್ಟೇ ವಿಚಿತ್ರವೆನಿಸುತ್ತೆ. ಕೆಲವೊಮ್ಮೆ ವಿಲಕ್ಷಣವು ಕೂಡ. ಬಾಲ್ಯದ ಮುಗ್ಧತೆ ಕಳೆದುಕೊಳ್ಳುವುದಕ್ಕೆ ಮುನ್ನವೆ ವಿಪ್ಲವ ಶುರುವಾಗುತ್ತೆ ನಂತರವೆ ನಿಜವಾದ ಹೋರಾಟ. ಕೆರಿಯರ್, ಲೈಫ್ ನಲ್ಲಿ ಸೆಟ್ಲಾಗಬೇಕೆಂಬ ತುಡಿತ ಪ್ರತಿ ಕ್ಷಣ ಕಾಡುವ ಪ್ರೇಮ, ಕಾಮ, ಆತಂಕದ ಕ್ಷಣಗಳು. ಮಕ್ಕಳಾದ ಕೂಡಲೆ ಹೆಚ್ಚು ಕಡಿಮೆ ಫಸ್ಟ್ ಇನ್ನಿಂಗ್ಸ್ ಮುಗಿಯುತ್ತೆ. ನಂತರದ್ದು ಮೊದಲಿಗಿಂತ ಭಿನ್ನ. ಮಕ್ಕಳ ಅವಿಧೇಯತೆ, ಆರೋಗ್ಯದಲ್ಲಿ ಏರುಪೇರು. ಆಗ ಲೆಕ್ಕಾಚಾರ ಶುರುವಾಗುತ್ತೆ. ಇವೆಲ್ಲದರಿಂದ ಮುಕ್ತವಾಗುವುದು ಹೇಗೆ? ಇಂತ ಅನನ್ಯವಾದ, ಗೋಜಲು ಗೋಜಲಾದ ಮಾನವನ ಬದುಕಿನ ಬಗ್ಗೆ ತಮ್ಮ ವಿಚಾರಧಾರೆಗಳನ್ನು ಮಂಡಿಸಿದ್ದಾರೆ ದಾರ್ಶನಿಕರು’ ಎಂದು ಪ್ರಸ್ತಾಪಿಸಿದ್ದಾರೆ.