ಮಂಜಿನಲ್ಲಿ ಮಿಂದ ಪುಷ್ಪ / Manjinalli Minda Pushpa
ಮಂಜಿನಲ್ಲಿ ಮಿಂದ ಪುಷ್ಪ / Manjinalli Minda Pushpa Original price was: ₹150.Current price is: ₹135.
Back to products
ಗ್ರೀಷ್ಮದ ಸೊಬಗು / Greeshmada Sobagu
ಗ್ರೀಷ್ಮದ ಸೊಬಗು / Greeshmada Sobagu Original price was: ₹100.Current price is: ₹90.

ಕರಗಿದ ಕಾರ್ಮೋಡ / Karagida Karmoda

Author: Smt. Saisuthe

Pages: 174

Edition: 2019

Book Size: 1/8th Demmy

Binding: Paper Back

Publisher: Sudha Enterprises

Specification

Original price was: ₹180.Current price is: ₹162.

In stock

Description

ಕರಗಿದ ಕಾರ್ಮೋಡ / Karagida Karmoda – ಈ ಕಾದಂಬರಿ ಎಪ್ಪತ್ತರ ದಶಕದ ಕಥೆ. ಆ ಕಲದ ಮಡಿವಂತಿಕೆಯ ಒಂದು ಸ್ವಷ್ಟ ಚಿತ್ರಣವನ್ನು ಈ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ.ತುಂಬು ಮಡಿವಂತಿಕೆಯ ಮಾಧ್ವ ಬ್ರಾಹ್ಮಣರಾದ ಗೋದಾಬಾಯಿಯ ಸಂಸಾರ ಕಥನವಿದು.ಮಡಿ,ನೀತಿ,ನೇಮದಲ್ಲಿ ಮಡದಿಯನ್ನು ಸ‌ರಿಗಟ್ಟುವ ಪತಿ ಶ್ರೀಪಾದರಾಯರು.ಮೊದಲ ಮಗಳು ಜಯಂತಿ, ಗಂಡ ಸುಬ್ಬಣ್ಣನ ಅತಿ ಕಾಮುಕತೆಗೆ ಬಲಿಯಾದ ಬಗೆ, ಮಗ ಶ್ರೀಧರ ಮನೆಯಲ್ಲಿ ಅಮ್ಮನ ಇಷ್ಟದಂತೆ ನಡೆದರೂ ಹೊರಗಡೆ ಆ ಮಡಿವಂತಿಕೆ ಬಿಚ್ಚದೆ ತನ್ನಿಷ್ಟ ಪೂರೈಸುವವನು.ತಾಯಿಯ ಮಡಿವಂತಿಕೆಯನ್ನು ಚಾಚು ತಪ್ಪದೆ ಪಾಲಿಸುವ ತಂಗಿ ವಿಜಯ.ಇವೆಲ್ಲದರ ನಡುವೆ ವಿಪರೀತದ ಮಡಿಗೆ ಎಂದೂ ಮಣೆ ಹಾಕದ ಕಥಾನಾಯಕಿ ಕಲ್ಪನಾ.ಆತ್ಮೀಯ ಗೆಳತಿ ನೂರ್ ಅನ್ಯ ಧರ್ಮಕ್ಕೆ ಸೇರಿದವರಾದರೂ , ಸಂಗೀತದಲ್ಲಿ ಆಸಕ್ತಿ ವಹಿಸಿ,ಕಲಿತು ದಾಸರ ಪದಗಳನ್ನು ಹಾಡುವುದು,ಕಾಲೇಜಿನ ಸಹಪಾಠಿಗಳಾದ ವೇಣು,ಮೀರಾರ ಅಪಕ್ವವಾದ ಅಂತರ್ಜಾತಿಯ ಪ್ರೇಮ ವಿವಾಹ ಎಲ್ಲವೂ ಬ್ರಾಹ್ಮಣಿಕೆಯ ಬಗ್ಗೆ ಮನಸ್ಸನ್ನು ಕೊರೆಯುವ ಪ್ರಶ್ನೆಯಾಗಿರುವಾಗಲೇ ಅನಿರೀಕ್ಷಿತ ವಾಗಿ ಕಲ್ಪನಾ ಹಾಗೂ ವೆಂಕಟೇಶ್ ನಾಯ್ಡು ರೊಳಗೆ ಮೊಳಕೆ ಒಡೆದ ಪ್ರೇಮ ಎಲ್ಲವೂ ಈ ಕಾದಂಬರಿಯಲ್ಲಿ ಮೂಡಿಬಂದಿದೆ.ಆ ಪ್ರೇಮಕ್ಕಾಗಿ ಮಡಿವಂತಿಕೆಯ ಮನೆಯನ್ನೆ ತ್ಯಜಿಸಿ ಹೊರನಡೆದ ಕಲ್ಪನಾಳ ಬದುಕಿನಲ್ಲಿ ಕಾರ್ಮೋಡವನ್ನು ಕರಗಿಸಿತೇ ಎಂಬ ಪ್ರಶ್ನೆಯೆ ಈ ಕಾದಂಬರಿ.