ಬೆಳ್ಳಿ ದೋಣಿ / Belli Doni
Author: Smt. Saisuthe
Pages: 242
Edition: 2017
Book Size: 1/8th Demmy
Binding: Paper Back
Publisher: Sudha Enterprises
Specification
Description
ಬೆಳ್ಳಿ ದೋಣಿ / Belli Doni – ಹುಸೇನಮ್ಮನ ಬಗ್ಗೆ ಬಡಕೂಲಿಗಳ ಬಗ್ಗೆ ಯೋಚಿಸಿದ ವೇಣು. ‘ಅವರಿಗೆ ಇರುವ ಸಮಸ್ಯೆಗಳು ಬಗೆಹರಿಯಲಾರದಂಥವು ಎನಿಸಿತು. ಆದರೂ ಅವರೆಲ್ಲರ ಬದುಕಿನಲ್ಲಿ ಸಂತೃಪ್ತಿ ಇದೆ. ನೆಮ್ಮದಿ ಇದೆ! ಸಂಬಂಧಿಕರು ಇದ್ದಾರೆ. ತಾಳಿ ಕಟ್ಟಿಸಿಕೊಂಡ ಮಡದಿ ಇದ್ದಾಳೆ, ತನಗೆ ವಿದ್ಯೆ ಇದೆ, ಆರ್ಥಿಕವಾಗಿ ಹಿಂದುಳಿದಿಲ್ಲ. ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನಮಾನಗಳು ಇದೆ, ಆದರೆ ಬದುಕಿಗೆ ಅರ್ಥವಿಲ್ಲ, ಸಂತೃಪ್ತಿ ಇಲ್ಲ. ಯಾಕೆ? ಆ ಮನುಷ್ಯನ ಕೆಲವು ಅವಶ್ಯಕತೆಗಳಲ್ಲಿ ಪ್ರೀತಿಯು ಒಂದು. ಊಟ, ನಿದ್ದೆಯಂತೆ ಪ್ರೀತಿಯ ಅಗತ್ಯವು ಇದೆ. ಬಯಕೆಗೆ ಬಾಯಿಬಿಡುವ ಶರೀರವು ಇದೆ’ ಇದೊಂದು ಕಾದಂಬರಿಯ ಒಂದು ಮುಖ್ಯ ಪಾತ್ರವಾದ ವೇಣುವಿನ ಕೊರಗು. ‘ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡ’ ಇದು ಅಲ್ಲಮ ಪ್ರಭುವಿನ ಮಾತು. ಭ್ರಮಾಧೀನ ಬದುಕಿನಿಂದ ಮಡದಿಯನ್ನು ಹೊರತರಲು ಪ್ರಯತ್ನಿಸಿ ಸೋತದ್ದೇಕೆ? ವೇಣು ತಲುಪಿದ್ದು ಎಲ್ಲಿಗೆ? ‘ಬೆಳ್ಳಿ ದೋಣಿ’ ಕನಸಿಗಷ್ಟೆ ಸೀಮಿತವಾಯಿತೇ?
