ಮತ್ತೊಂದು ಬಾಡದ ಹೂ / Matthondu Baadada Hoo
Author: Saisuthe
Pages:156
Edition: 2022
Book Size: 1/8th Demmy
Binding: Paper Back
Publisher: Sudha Enterprises
Description
ಮತ್ತೊಂದು ಬಾಡದ ಹೂ / Matthondu Baadada Hoo – ಹಣ, ಅಂತಸ್ತುಗಳಿದ್ದರೆ ಗುಣವಿರುವುದು ವಿರಳ ಎಂಬ ಮಾತಿದೆ.ಆದರೆ ಮೇಘನಾಥರು ಗುಣದಲ್ಲೂ ಶ್ರೀಮಂತರೆಂದು ನಿರೂಪಿಸಿದ ಹೃದಯಸ್ಥ, ಮಗನ ಇಚ್ಚೆಯೇ ತಮ್ಮ ಇಚ್ಚೆಯೆಂದು ಬದುಕುವ ದಂಪತಿ,ತಾಯಿಲ್ಲದ ಮಗುವನ್ನು ಮಮತೆಯಿಂದ ಸಾಕಿದ ಚಿಕ್ಕಪ್ಪ ಮತ್ತು ಚಿಕ್ಕಮ್ಮ, ಮನೆಯ ಸಂಪ್ರದಾಯಕ್ಕೆ ತಕ್ಕ ವಿಭಯಾ ಎಂಬ ಮಗಳು , ಗಿಣಿಯನ್ನು ಸಾಕಿ ಹದ್ದಿನ ಕೈಗೆ ಎಲ್ಲಿ ಕೊಟ್ಟು ಬಿಡುತ್ತಾರೋ ಎಂಬ ಚಡಪಡಿಕೆ , ಅಭಿಷೇಕ್ ನ ಪ್ರೀತಿಯ ದೆಸೆಯಿಂದ ವಿಭಾಳ ಬಾಳು ಬಾಡದೆ ಮತ್ತೊಂದು ಬಾಡದ ಹೂವಾಗಿ ಅರಳಿತು ,ಹೀಗೆ ಹಲವು ವಿಷಯಗಳನ್ನು ಚರ್ಚಿಸುತ್ತಾ ಈ ಕೃತಿಯೂ ಮುಂದೆ ಸಾಗುತ್ತದೆ.ನಡೆಯ ಬಾರದ ಘಟನೆಯೊಂದು ನಡೆದು, ಬಹು ದೊಡ್ಡ ಆಘಾತವನ್ನು ವಿಭಾಳ ಬಾಳಿಗೂ ಮತ್ತು ಕುಟುಂಬಕ್ಕೂ ಏರ್ಪಡಿಸಿ ಬಿಡುತ್ತದೆ, ಅವಳು ನಿರಪರಾಧಿಯಾದರೂ ಸಮಾಜದೆದುರಿಗೆ ಅವಳೇ ತಪ್ಪಿಸ್ಥಳು, ಏನೂ ತಿಳಿಯದ ಮುಗ್ದೆ, ಹೆಚ್ಚು ಸಲಿಗೆ-ಸ್ನೇಹದಿಂದ ಯಾರೊಡನೆಯೂ ಬೆರೆಯದ ವಿಭಾಳನ್ನು ಕಂಡು ಮನ ಸೋತ ಅಭಿಷೇಕ್, ದುಡುಕಿ ಮಾಡಿದ ಕೆಲಸದಿಂದ ಅತಿಯಾದ ವ್ಯಥೆ ವಿಭಾಳಿಗೆ, ಆ ಉನ್ನತ ಅಂಗದಿಂದ ಒಳಿತನ್ನು ಮಾತನಾಡೋ ಮನುಜ, ಎಂದು ಎಷ್ಟೋ ಮಹಾನ್ ವ್ಯಕ್ತಿಗಳು ಹಾಡಿದ್ದರೂ ಕೇಳುವ ತಾಳ್ಮೆಯಿಲ್ಲ, ಕೆಲ ಗಂಡಸರಿಗೆ ಹೆಣ್ಣು ಮಕ್ಕಳ ಕಣ್ಣೀರು ಆನಂದ ನೀಡುವಂತವು, ಅವರನ್ನು ನಾನಾ ರೀತಿಯಲ್ಲಿ ನೋಯಿಸಿ ಆನಂದಿಸುವವರೇ ಹೆಚ್ಚು, ಅಂತಹವರ ಪೈಕಿ ಯೋಗಿಯೂ , ಯಾವ ದೇವರ ಫಲವೋ, ಅಂತಹವನ ಕೈಯಿಂದ ಕೂದಲೆಳೆಯ ಅಂತರದಲ್ಲಿ ವಿಭಾ ಪಾರಾದ ಬಗೆಯು ಈ ಕಾದಂಬರಿಯಲ್ಲಿ ಮೂಡಿಬಂದಿದೆ.
