ಪಂಚವಟಿ / Panchavati
ಪಂಚವಟಿ / Panchavati Original price was: ₹160.Current price is: ₹144.
Back to products
ರಜತಾದ್ರಿಯ ಕನಸು / Rajatadriya Kanasu
ರಜತಾದ್ರಿಯ ಕನಸು / Rajatadriya Kanasu Original price was: ₹155.Current price is: ₹139.

ನಾಟ್ಯ ಸುಧಾ / Natya Sudha

Author:  Saisuthe

Pages:160

Edition: 2022

Book Size: 1/8th Demmy

Binding: Paper Back

Publisher: Sudha Enterprises

Original price was: ₹140.Current price is: ₹126.

In stock

Description

ನಾಟ್ಯ ಸುಧಾ / Naatya Sudha – ಕಲೆಗಳಿಗೆ ಅದ್ಭುತ ಸಾಮರ್ಥ್ಯ ಇದೆ.ಗೀತ, ನಾಟ್ಯ,ಇವಕ್ಕೆಲ್ಲಾ ನೋವನ್ನು ನಲಿವನ್ನಾಗಿಸುವ ಶಕ್ತಿ ಇದೆ. ಈ ಕಾದಂಬರಿಯಲ್ಲಿ ನಾಟ್ಯಶಾಸ್ತ್ರ ಪ್ರವೀಣೆ ರಾಜಮ್ಮ ಅವರ ಶಿಷ್ಯೆ ಕವಿತ, ಚೆನ್ನಾಗಿ ನೃತ್ಯ ವಿದ್ಯೆ ಕರಗತ ಮಾಡಿಕೊಂಡು, ನಾಟ್ಯಸುಧಾ ಬಿರುದು ಪಡೆಯುತ್ತಾಳೆ. ಮದುವೆ ಮೊದಲು ತಂದೆಯ ವಿರೋಧ ಇದ್ದರೂ ಭಾಗವಹಿಸುತ್ತಿದ್ದಳು. ಮದುವೆಯಾದ ಮೇಲೆ ಆಸಕ್ತಿ ತೋರಲಿಲ್ಲ.ಚಂದ್ರಶೇಖರ ಯಾವಾಗಲೂ ‘ನಾನು ಮಾತ್ರ ನನ್ನ ಕೈ ಹಿಡಿದವಳ ಅಂಗಾಂಗ ಪ್ರದರ್ಶನವನ್ನು ವಿರೋಧಿಸ್ತೀನಿ’ಎನ್ನುತ್ತಿದ್ದ. ಕವಿತ ಗಂಡನ ಮಾತನ್ನು ಧಿಕ್ಕರಿಸಿ ನಾಟ್ಯ ಮುಂದುವರಿಸಿದಳೇ?ಇಲ್ಲಾ ಗಂಡನಿಗೆ ತಕ್ಕ ಹೆಂಡತಿಯಾಗಿ,ಮನದ ಬಯಕೆಯನ್ನು ನೇಪಥ್ಯಕ್ಕೆ ಸರಿಸಿದಳೇ? ಉತ್ತರ ಈ ಕಾದಂಬರಿಯಲ್ಲಿದೆ.

ಪ್ರಗತಿಯಿಲ್ಲದ ಸಂಪ್ರದಾಯ ಹೇಗೆ ಸ್ತಬ್ದವೋ, ಹಾಗೆಯೇ ಸಂಪ್ರದಾಯವಿಲ್ಲದ ಪ್ರಗತಿ ಕೂಡ. ಭಾರತೀಯ ಕಲೆಗಳಲ್ಲಿ ನೃತ್ಯಕ್ಕೆ ವಿಶಿಷ್ಟವಾದ ಸ್ಥಾನವಿದೆ. ನೃತ್ಯ ಪರಿಪೂರ್ಣವಾಗಿರುವಂತೆ ಪ್ರಾಚೀನವಾದದ್ದು ಹೌದು. ಆದರೆ ಶಾಸ್ತ್ರೀಯವಾದ ಪರಂಪರೆಯನ್ನು ಅದರ ಶುದ್ಧ ಶೈಲಿಗೆ ಧಕ್ಕೆಯಾಗದಂತೆ, ಆಧುನಿಕ ಜನಜೀವನಕ್ಕೆ ಅನುಗುಣವಾಗಿ ರೂಪಿಸಿಕೊಳ್ಳಲು ಸಾಧ್ಯವೇ ಎಂಬುದು ಪರಿಶೀಲನಾರ್ಹ ಇದನ್ನೆಲ್ಲ ಮನಸ್ಸಿನಲ್ಲಿ ಇಟ್ಟುಕೊಂಡು ಯೋಚಿಸಿದರೇ ಈ ಕಾದಂಬರಿ ಈಗ ಬರೆದಿದ್ದರೇ ಆರಂಭ ಮಾತ್ರವಲ್ಲ, ಮುಕ್ತಾಯವೂ ವಿಭಿನ್ನ ರೀತಿಯಲ್ಲಿ ಇರುತಿತ್ತೆನಿಸಿದೆ. ಕವಿತಾಳ ಕಲೆಗೆ ಸರಿಯಾದ ನ್ಯಾಯ ಒದಗಿಸಿ ಕೊಡಲಿಲ್ಲ ಎನ್ನುವ ಗೊಂದಲ ನನ್ನಲ್ಲಿ ಇಂದಿಗೂ ಇದೆ. ಅನ್ನೋದು ಸಾಯಿಸುತೆಯವರ ಮಾತು.