ಚೈತ್ರದ ಕೋಗಿಲೆ / Chaitrada Kogile
Author: Saisuthe
Pages:194
Edition: 2016
Book Size: 1/8th Demmy
Binding: Paper Back
Publisher: Sudha Enterprises
Description
ಚೈತ್ರದ ಕೋಗಿಲೆ / Chaitrada Kogile – ಈ ಕಾದಂಬರಿಯ ಪಾತ್ರಗಳು ತುಂಬಾ ಆಕರ್ಷಕವಾಗಿದ್ದು,ಕಾಡುವಂತದ್ದು.ಕಾದಂಬರಿಕಾರ್ತಿ ಹೇಳುತ್ತಾರೆ,‘ಚೈತ್ರದ ಕೋಗಿಲೆ’ ನನಗೆ ಇಷ್ಟವಾದ ಕಾದಂಬರಿಗಳಲ್ಲಿ ಒಂದು. ಈ ಕಾದಂಬರಿಯನ್ನು ಓದುಗರ ಜೊತೆ ವಿಮರ್ಶಕರು ಕೂಡ ಮೆಚ್ಚಿಕೊಂಡಿದ್ದಾರೆ.ಹೆಚ್ಚು ಕಡಿಮೆ ಎಲ್ಲರಿಗೂ ಹೆಚ್ಚುಇಷ್ಟವಾದ ಪಾತ್ರ ಮುರಳಿಯದು. ಯಾಕೆ ‘ನಂಗೆ ಮುರಳಿ ಪಾತ್ರ ಇಷ್ಟ. ಅಂಥ ನೇರ, ಪ್ರಾಮಾಣಿಕ ಹೃದಯದ ಯುವಕ ಎಲ್ಲಿದ್ದಾನೆ?’ ಎಂದು ಪ್ರತಿಕ್ರಿಯಿಸಿದ ಓದುಗರಲ್ಲಿ ಬರೀ ಯುವತಿಯರು ಮಾತ್ರ ಇಲ್ಲ.ಅಂಥ ಮಗನನ್ನು ಬಯಸುವ ತಂದೆ ತಾಯಿಯರು ಅವನಂಥ ಅಣ್ಣ ಭಾವ ತಮಗಿರಲೆಂದು ಬಯಸುವ ಷೋಡಶಿಯರು ಇದ್ದಿದ್ದು ಅಚ್ಚರಿಯೆ.ಉತ್ತಮ ಕಾದಂಬರಿಗಳು ಸಂತೋಷದ ಜೊತೆ ಬೇಸರ ಮತ್ತು ದುಃಖವನ್ನು ಒಳಗೊಂಡಿರುತ್ತವೆ. ಮೊದಲ ಪುಟದಿಂದ ಕೊನೆಯ ಪುಟದವರೆಗೂ ಉದ್ವೇಗ ಹುಟ್ಟಿಸುವಂಥ ಕಾದಂಬರಿ ಮಹಾನ್ ಕೃತಿಯಾಗದು. ಶಾಂತತೆಯೇ ದೃಢ ವ್ಯಕ್ತಿತ್ವದ ಗುರುತು.ದುರ್ಬಲತೆಯನ್ನು ಬೇರೆಯವರಿಗೆ ನೋವಾಗದ ರೀತಿಯಲ್ಲಿ ಹತ್ತಿಕ್ಕುವ ಗುಣವನ್ನು ಮುರಳಿಯ ಪಾತ್ರದಲ್ಲಿ ಕಂಡೆ’ ಒಬ್ಬ ಹಿರಿಯ ಓದುಗರ ಅಭಿಪ್ರಾಯ.
