ಹೃದಯ ರಾಗ / Hrudaya Raaga
Author: Saisuthe
Pages:164
Edition: 2019
Book Size: 1/8th Demmy
Binding: Paper Back
Publisher: Sudha Enterprises
Specification
Description
ಹೃದಯ ರಾಗ / Hrudaya Raaga – ನಮ್ಮ ಭಾರತದಲ್ಲಿ ಮೊದಲಿಂದಲೂ ಹಿರಿಯರೆಲ್ಲರೂ ಕೂಡಿ, ಸಮ್ಮತಿಸಿಯೇ ಮದುವೆಯನ್ನು ನಿಶ್ಚಯಿಸುತ್ತಿದ್ದರು. ಹಾಗಾಗಿಯೇ ಮದುವೆಯನ್ನು ಸ್ವರ್ಗದಲ್ಲಿ ನಿಶ್ಚಯಿಸಲ್ಪಡುತ್ತದೆ ಎಂಬ ಮಾತಿದೆ.ಆದರೆ ಯುವಕ ಯುವತಿಯರು ವಯಸ್ಸಿನ ವ್ಯಾಮೋಹದಿಂದ ಪ್ರೀತಿಯ ಬಲೆಯಲ್ಲಿ ಸಿಲುಕಿ, ತಮ್ಮ ಭವಿಷ್ಯವನ್ನು ಮಾತ್ರವಲ್ಲದೆ ತಮ್ಮವರ ಭವಿಷ್ಯವನ್ನು ಸಹ ಸೇರಿಸಿ ಹಾಳು ಮಾಡಿ ಬಿಡುತ್ತಾರೆ.ಪ್ರಭ , ಅತಿ ಕೋಮಲ ಮನಸ್ಸಿನ ಹುಡುಗಿ, ಸೋದರ ಮಾವನ ಅಕ್ಕರೆಯ ಕಣ್ಮಣಿಯಾಗಿ ಬೆಳೆಯಬೇಕಾದ ಇವಳನ್ನು ಡಾ.ಚಂದ್ರ ಮೋಹನ್ ಮೆಚ್ಚಿ, ತಾಯಿ ಸುಭದ್ರಳ ಒಪ್ಪಿಗೆಯಲ್ಲಿಯೇ ಮದುವೆಯಾಗಿ ಸುಖವಾಗಿ ಬಾಳುವಾಗ, ಅವರ ಬಾಳಲ್ಲಿ ಸುಭದ್ರಮ್ಮನ ಅಣ್ಣ, ಮತ್ತು ಅವನ ಮಗಳು ಶಾರದ ಇವರಿಂದ ಒಮ್ಮೆಲೆ ಬಿರುಗಾಳಿಯೊಂದು ಬೀಸಿ ಅಲ್ಲೋಲ ಕಲ್ಲೋಲವಾದ ಬಗೆಯನ್ನು ಈ ಕಾದಂಬರಿಯೂ ವಿವರಿಸುತ್ತದೆ.ಪ್ರಭಳ ತಾಯಿ ಸಂಧ್ಯಳ ಅಮಾಯಕತೆ, ಸಂಧ್ಯಳನ್ನು ಪ್ರೀತಿಸಿದ ಜಗನ್ನಾಥನ ಅಸಹಾಯಕತೆಯಿಂದ ಮದುವೆಗೆ ಮುಂಚೆಯೇ ಗರ್ಭಿಣಿಯಾದ ಸಂಧ್ಯಳನ್ನು ಮದುವೆಯಾಗದೇ ಜಗನ್ನಾಥ ವಿದೇಶಕ್ಕೆ ತೆರಳಿದ.ಜಗನ್ನಾಥನೇ ತಂದೆಯೆಂದು ತಿಳಿಯದೇ ಅತ್ತೆ ಸುಭದ್ರಮ್ಮನ ನಿಂದನೆಯನ್ನು ಸಹಿಸಲಾಗದೇ ಮನೆಯನ್ನೇ ತೊರೆದು ಮಾವ ಲಕ್ಷ್ಮಿಪತಿಯನ್ನು ಆಶ್ರಯಿಸಿ,ಮುದ್ದಾದ ಮಗುವಿಗೆ ಜನ್ಮವನ್ನು ನೀಡಿ, ತಾನೇ ದುಡಿದು ಬದುಕುವ ಸಮಯದಲ್ಲಿಯೇ ತಂದೆ ಜಗನ್ನಾಥನ್ನು ಕಂಡು ತನ್ನ ತಾಯಿ ಸಂಧ್ಯ ಪವಿತ್ರಳೆಂದು ಪ್ರಭ ಸಾಬೀತು ಪಡಿಸುತ್ತಾಳೆ.ಇದು ಕಾದಂಬರಿಯ ಕಥಾವಸ್ತು.
