ಉರಿವ ಕೆಂಡದ ಮೇಲೆ / Uriva Kendada Mele

Author: Basavaraj P. Donur

Pages: 632

Edition: 2021

Book Size: 1/8th Demmy

Binding: Paper Back

Publisher: Manohara Grantha Mala

Original price was: ₹750.Current price is: ₹675.

In stock

Description

ಉರಿವ ಕೆಂಡದ ಮೇಲೆ / Uriva Kendada Mele – ಡಾ. ಬಸವರಾಜ ಡೋಣೂರರ ಪ್ರಥಮ ಕಾದಂಬರಿ. ಈ ಕೃತಿಗೆ ಹಿರಿಯ ಕವಿ ಎಚ್.ಎಸ್. ಶಿವಪ್ರಕಾಶ್ ಮತ್ತು ಹಿರಿಯ ವಿಮರ್ಶಕ ರಾಜೇಂದ್ರ ಚನ್ನಿ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ‘ಬಸವರಾಜ ಡೋಣೂರ ಅವರ ಕಾದಂಬರಿಯನ್ನು ನಾನು ಓದಲು ಶುರುಮಾಡಿದ ಮೇಲೆ ಅದು ಮುಗಿಯುವವರೆಗೆ ಬಿಟ್ಟು ಬಿಡದೆ ಓದಿದೆ. ಕೃತಿಯ ಶಕ್ತಿ ಇರುವುದು ಜಿದ್ದಾಜಿದ್ದಿಯ ಹೋರಾಟದಲ್ಲಿ ಪ್ರಕಾಶ್ ಕೂಡ ತನ್ನ ಎದುರಾಳಿಯ ತಂತ್ರಗಳನ್ನೇ ಬಳಸುತ್ತಾನೆ ಎನ್ನುವುದನ್ನು ತೋರಿಸುವುದರಲ್ಲಿ. ಅಂದರೆ ಅಕಾರ ವ್ಯವಸ್ಥೆಯ ಅಂತಿಮ ಜಯವೆಂದರೆ ಅದನ್ನು ವಿರೋಧಿಸುವವರು ಕೂಡ ಅದೇ ತಂತ್ರಗಳನ್ನು ಬಳಸುವಂತಾಗುವುದು. ಅನಾಮಧೇಯ ಪತ್ರಗಳನ್ನು ಅವನೇ ಮೊದಲು ಬರೆಯುತ್ತಾನೆ. ತನ್ನ ರಕ್ಷಣೆಗಾಗಿ ರಾಜಕೀಯ ವ್ಯಕ್ತಿಗಳ ಸಹಾಯವನ್ನು ಯೋಚಿಸುತ್ತಾನೆ ಕ್ರಾಂತಿಕಾರಿ, ಹೋರಾಟಗಾರನೆಂದು ಪ್ರಸಿದ್ಧನಾಗಿದ್ದರೂ ಇಂಥ ವ್ಯಕ್ತಿಗಳ ಸಹಾಯ ಕೇಳುವುದು ಅವನಿಗೆ ಅನೈತಿಕವೆನಿಸುವುದಿಲ್ಲ. ಸುಳಿಯಲ್ಲಿ ಸಿಕ್ಕಾಗಿದೆ. ಈಗ ಜಯಿಸಲೇ ಬೇಕೆ ಎನ್ನುವುದೇ ಅವನ ಕ್ರಿಯೆಗಳಿಗೆ ಸಿಕ್ಕುವ ನ್ಯಾಯಬದ್ಧತೆಯಾಗಿದೆ. ಅವನು ತನ್ನ ಕ್ರಿಯೆಗಳ ಬಗ್ಗೆ, ತನ್ನ ಅಧಃಪತನದ ಬಗ್ಗೆ ಎಚ್ಚರವಾಗಿರುವುದೇ ಕಾದಂಬರಿಯ ಶಕ್ತಿಯಾಗಿದೆ’ ಎನ್ನುತ್ತಾರೆ ರಾಜೇಂದ್ರ ಚನ್ನಿ.