ಮನೋಗಮ / Manogama
ಮನೋಗಮ / Manogama Original price was: ₹120.Current price is: ₹108.
Back to products
ವಿಶ್ವ ಸಾಹಿತಿ ಭೈರಪ್ಪ / Vishwa Sahiti Bhairappa
ವಿಶ್ವ ಸಾಹಿತಿ ಭೈರಪ್ಪ / Vishwa Sahiti Bhairappa Original price was: ₹615.Current price is: ₹554.

ಗೊರೂರು ಅವರ ಬಾಲ್ಯದ ಆತ್ಮಕತೆ / Goruru Avara Balyada Atmakathe

Author: Goruru Ramaswamy Iyengar

Pages: 204

Edition: 2021

Book Size: 1/8th Demmy

Binding: Paper Back

Publisher: IBH Prakashana

Original price was: ₹210.Current price is: ₹189.

In stock

Description

ಗೊರೂರು ಅವರ ಬಾಲ್ಯದ ಆತ್ಮಕತೆ / Goruru Avara Baalyada Atmakathe – ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಕನ್ನಡದ ವಿಶಿಷ್ಟ ಲೇಖಕರು. ಸ್ವಾತಂತ್ರ ಹೋರಾಟದ ಭಾಗವಾಗಿ ಬೆಳೆದ ಭಾವಕೋಶವುಳ್ಳ ಗೊರೂರರ ಸಾಹಿತ್ಯವು ಸಾಮಾಜಿಕ – ರಾಜಕೀಯ ಇತಿಹಾಸದ ಕೆಲವು ಮಹತ್ವಪೂರ್ಣ ಗುರುತುಗಳನ್ನು ದಾಖಲಿಸಿದೆ. ಕತೆ, ಪ್ರಬಂಧ, ಲಲಿತ ಪ್ರಬಂಧ – ಹೀಗೆ ಯಾವುದೇ ಪ್ರಕಾರದಲ್ಲಿ ಬರೆದರೂ ಪರಸ್ಪರ ಸಂಬಂಧ ಸ್ಥಾಪಿಸುವ ಶೈಲಿಯನ್ನು ರೂಢಿಸಿಕೊಂಡ ಗೊರೂರರು ಬದುಕಿನ ಚಲನಶೀಲತೆಗೆ ಎಂದೂ ಬೆನ್ನು ತೋರಿಸಿದವರಲ್ಲ ಹೀಗಾಗಿ ಅವರ ಸಾಹಿತ್ಯವು ಚಲನಶೀಲ ಮೌಲ್ಯಗಳನ್ನು ಒಳಗೊಳ್ಳುತ್ತಲೇ ಸಮಕಾಲೀನವಾಗುತ್ತದೆ : ವರ್ತಮಾನದಲ್ಲಿ ಉಸಿರಾಡುತ್ತದೆ. ಗೊರೂರು ಸಾಹಿತ್ಯದಲ್ಲಿ ಮೈತಳೆದ ಕೆಲವು ವ್ಯಕ್ತಿಚಿತ್ರಗಳು ಸಾಂಸ್ಕೃತಿಕ ಚೌಕಟ್ಟಿನ ಸಾಮಾಜಿಕ ಅಂತಃಸತ್ವವಾಗಿ ಅರಳುತ್ತವೆ. ಸರಳ, ಸಂವಹನಶೀಲ ಸಾಹಿತ್ಯ ರಚನೆಯ ಮೂಲಕ ಸಂಕೀರ್ಣ ಬದುಕಿನ ವಿವರಗಳನ್ನು ನಿರೂಪಿಸುವ ಗೊರೂರರು ತಮಗೆ ತಾವೇ ಒಂದು ಮಾದರಿಯಾಗಿದ್ದಾರೆ. ಈ ಮಾದರಿಯೊಂದಿಗೆ ನಡೆಸುವ ಮಾತುಕತೆಯ ಮೂಲಕ ಅರ್ಥಪೂರ್ಣ ಚಿಂತನೆ ಹೊರಹೊಮ್ಮುವಂತಾಗಲಿ. ಶ್ರೀ ಸಂಜಯ ಅಡಿಗ ಅವರು ಗೊರೂರರ ಎಲ್ಲ ಕೃತಿಗಳ ಮರುಮುದ್ರಣ ಮಾಡಿದ್ದು, ಇದು ಮರು ಚಿಂತನೆಗೆ ಪ್ರೇರಣೆಯಾಗಲಿ.