ನಾಣೀಭಟ್ಟನ ಸ್ವರ್ಗದ ಕನಸು / Naanibhattana Swargada Kanasu

Author: Gajanana Sharma

Pages: 88

Edition: 2005

Book Size: 1/4th Crown

Binding: Paper Back

Publisher: Akshara Prakashana

75

In stock

Description

ನಾಣೀಭಟ್ಟನ ಸ್ವರ್ಗದ ಕನಸು / Naanibhattana Swargada Kanasu – ಸಂಕಲನದಲ್ಲಿ ಮೂರು ನಾಟಕಗಳಿವೆ. ‘ನಾಣೀಭಟ್ಟನ ಸ್ವರ್ಗದ ಕನಸು’, ‘ಮೃಗ ಮತ್ತು ಸುಂದರಿ’ ಮತ್ತು ‘ಗೊಮ್ಬೆರಾವಣ’. ಇದರಲ್ಲಿ ಮೊದಲನೆಯದು ಮಕ್ಕಳ ಮನೋಲೋಕದ ವಿಶೇಷಗಳನ್ನು ಗುರುತಿಸುವ ಒಂದು ಕಥೆ; ಅದನ್ನು ತುಂಬ ಸ್ವಾರಸ್ಯಕರವಾದ ಘಟನೆ-ಸನ್ನಿವೇಶ ಮತ್ತು ಮಾತುಗಾರಿಕೆಗಳ ಹದದಲ್ಲಿ ಲೇಖಕರು ನಾಟ್ಯೀಕರಿಸಿದ್ದಾರೆ. ಎರಡನೆಯದು ಆಸ್ಕರ್ ವೈಲ್ಡ್‌ನ ಪ್ರಸಿದ್ಧ ಕಥೆಯನ್ನಾಧರಿಸಿದ್ದು; ಕನ್ನಡದಲ್ಲೂ ಈಗಾಗಲೇ ಹಲವರು ಮಕ್ಕಳ ನಾಟಕವಾಗಿ ರುಪಾಂತರಿಸಿರುವ ಕಥೆ ಅದು. ಮೂರನೆಯದು, ಪುರಾಣದ ಒಂದು ಮೂಲೆಯ ಘಟನೆಯನ್ನು ಎತ್ತಿಕೊಂಡು, ಅದರ ಪರಿಧಿಯ ಸುತ್ತಲೇ ಸುತ್ತುತ್ತ, ಇವತ್ತಿನದೋ ಅವತ್ತಿನದೋ ಎಂದು ಗೊತ್ತಾಗದಂಥ ಕಥನವೊಂದನ್ನು ಕಟ್ಟಲಾಗಿದೆ.