ನಂಬಿದ್ರೆ ನಂಬಿ ಬಿಟ್ರೆ ಬಿಡಿ! / Nambidre Nambi Bitre Bidi!
Author: Dr. N. Someswara
Pages: 140
Edition: 2025
Book Size: 1/8th Demmy
Binding: Paper Back
Publisher: Sawanna Enterprises
Description
ನಂಬಿದ್ರೆ ನಂಬಿ ಬಿಟ್ರೆ ಬಿಡಿ! / Nambidre Nambi Bitre Bidi! – ಥಟ್ ಅಂತ ಹೇಳಿ ಜನಪ್ರಿಯ ಕ್ವಿಜ್ ಕಾರ್ಯಕ್ರಮವು 20 ವರ್ಷಗಳಲ್ಲಿ 4300 ಕಂತುಗಳು ಪ್ರಸಾರವಾಗಿವೆ ಎಂದರೆ, ಆ ಯಶಸ್ಸಿನಲ್ಲಿ ಈ ಪುಸ್ತಕದ್ದೂ ಪ್ರಮುಖ ಪಾಲು ಇದೆ. ಪ್ರತಿ ಕಂತಿನ ಕೊನೆಯಲ್ಲಿ ವಿಸ್ಮಯ ವಿಜ್ಞಾನದ ಒಂದು ಕಿವಿಮಾತನ್ನು ಹೇಳುತ್ತಿದ್ದೆ.ಇದು ಅಪಾರ ಜನಪ್ರೀತಿಯನ್ನು ಗಳಿಸಿತ್ತು. ಸಮಯಾಭಾವದಿಂದ ಒಂದು ದಿನ ಈ ಕಿವಿ ಮಾತನ್ನು ಹೇಳದಿದ್ದರೆ, ಅಂದೇ ಫೋನುಗಳ ಮೂಲಕ ಯಾಕೆ ಇವತ್ತು ಕಿವಿ ಮಾತನ್ನು ಹೇಳಲಿಲ್ಲ ನೀವು’ ಎಂದು ಪ್ರೀತಿಯಿಂದ ಫೋನಿನಲ್ಲಿ ಪ್ರಶ್ನೆಯನ್ನು ಕೇಳುತ್ತಿದ್ದರು ಹಲವರು. ಈ ಎಲ್ಲ ಕಿವಿಮಾತುಗಳನ್ನು ಸೇರಿಸಿ, ಯಾಕೆ ಒಂದು ಪುಸ್ತಕವನ್ನು ನೀವು ಬರೆಯಬಾರದು ಎಂಬ ಎರಡು ದಶಕಗಳ ಪ್ರಶ್ನೆಗೆ ಈಗ ಉತ್ತರ ನಿಮ್ಮ ಮುಂದಿದೆ. ಹೌದು. ನಂಬಿದ್ರೆ ನಂಬಿ, ಬಿಟ್ರೆ ಬಿಡಿ ಪುಸ್ತಕವು ಥಟ್ ಅಂತ ಹೇಳಿ ಕ್ವಿಜ಼್ ಕಾರ್ಯಕ್ರಮದ ಕೊನೆಯಲ್ಲಿ ಹೇಳುತ್ತಿದ್ದ ವಿಸ್ಮಯ ವಿಜ್ಞಾನದ ಕಿವಿ ಮಾತುಗಳ ಸಂಗ್ರಹವೇ ನಂಬಿದ್ರೆ ನಂಬಿ ಬಿಟ್ರೆ ಬಿಡಿ.
