ದ್ಯಾವಾ ಪೃಥಿವೀ / Dyava Pruthivi
Author: Vinayaka
Pages: 80
Edition: 2008
Book Size: 1/8th Demmy
Binding: Papar Back
Publisher: Sahithya Prakasahsna
Description
ದ್ಯಾವಾ ಪೃಥಿವೀ / Dyava Pruthivi – ವಿನಾಯಕ ಕಾವ್ಯನಾಮದ ವಿ.ಕೆ. ಗೋಕಾಕ ಅವರ ಕವನಗಳ ಸಂಕಲನ-ದ್ಯಾವಾಪೃಥಿವೀ. ಈ ಸಂಕಲನದಲ್ಲಿ ನೀರದ ಹಾಗೂ ಇಳಾಗೀತ ಎಂಬ ಎರಡು ಪೂರಕ ಭಾಗಗಳಿವೆ. ನೆಲದಲ್ಲಿ ನಿಂತು ಆಕಾಶವನ್ನು ಕಂಡ ಪರಿ ’ನೀರದ’ದಲ್ಲಿದೆ. ಆಕಾಶದಿಂದ ನೆಲದತ್ತ ಹಾಯಿಸಿದ ದೃಷ್ಟಿ ‘ಇಳಾಗೀತ’ದಲ್ಲಿ ಕಂಡು ಬರುತ್ತದೆ. ವಿನಾಯಕರ ನೋಟ ‘ದ್ಯಾವಾಪೃಥಿವೀ’ಯಲ್ಲಿ ಭೂಮ್ಯಾಕಾಶಗಳನ್ನು ತಬ್ಬಿಕೊಂಡಿದೆ. ‘ನೀರದ’ದಲ್ಲಿ 598 ಸಾಲುಗಳು ಹಾಗೂ ‘ಇಳಾಗೀತ’ದಲ್ಲಿ 541 ಸಾಲುಗಳಿವೆ. ಈ ಕೃತಿಯು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದಿದೆ. ಈ ಕಾವ್ಯದಲ್ಲಿ, ಆಂಗ್ಲ ಕವಿ ಷೆಲ್ಲಿಯ ಕಲ್ಪನೆಯೊಂದಿಗೆ ಅರವಿಂದ ಮಹರ್ಷಿಗಳ ಯೋಗದರ್ಶನ ಸೇರಿಕೊಂಡು ತನ್ನ ಪ್ರಭಾವ ಬೀರಿರುವುದು ಸ್ಪಷ್ಟ ವಾಗುತ್ತದೆ. ಪೌರ್ವಾತ್ಯ ಪಾಶ್ಚಾತ್ಯಗಳ ಸಾಮರಸ್ಯವನ್ನು ಸಾಧಿಸುವ ಪ್ರಯತ್ನವನ್ನು ‘ದ್ಯಾವಾಪೃಥಿವೀ’ಯಲ್ಲಿ ವಿನಾಯಕರು ಮಾಡಿದ್ದಾರೆ. ಈ ಕೃತಿಯ ಉದ್ದಕ್ಕೂ ಕವಿಯ ಕಲ್ಪನಾ ವಿಲಾಸ, ಚಿಂತನಪರತೆ, ಪುರಾಣ ಪರಿಜ್ಞಾನ, ಆಧ್ಯಾತ್ಮಿಕ ಶ್ರದ್ಧೆ, ವೈಜ್ಞಾನಿಕ ದೃಷ್ಟಿ-ಇವೆಲ್ಲ ವೇದ್ಯವಾಗುತ್ತದೆ.
