ಶತಮಾನದ ಕವಿ ವರ್ಡ್ಸ್‌ವರ್ತ್ / Shatamaanada Kavi Wordsworth

Author: U.R Ananthamurthy

Pages: 136

Edition: 2014

Book Size: 1/8th Demmy

Binding: Papar Back

Publisher: Abhinava

Original price was: ₹125.Current price is: ₹112.

In stock

Description

ಶತಮಾನದ ಕವಿ ವರ್ಡ್ಸ್‌ವರ್ತ್ / Shatamaanada Kavi Wordsworth – ಬ್ರಿಟಿಷ್ ಮಹಾಕವಿ ವರ್ಡ್ಸ್ ವರ್ತ್ ಕುರಿತು ಅನಂತಮೂರ್ತಿ ಅವರು ಬರೆದ ಕೃತಿ ಇದು. ವರ್ಡ್ಸ್ ವರ್ತ್ ಒಂದು ಭಾಗ್ಯವೆಂದರೆ, ಪ್ರಕ್ಷುಬ್ದ ಕಾಲದಲ್ಲೂ, ಆತನ ವೈಯಕ್ತಿಕ ಜಗತ್ತು ಮತ್ತು ಸಾಮಾಜಿಕ ಜಗತ್ತುಗಳೆರಡೂ ಅತೀವ ಕ್ಷೋಭೆಯಲ್ಲಿದ್ದ ಕಾಲದಲ್ಲೂ, ಆತ ಸಾಮಾನ್ಯ ಮನುಷ್ಯರ ಬಗ್ಗೆ ಹೊಂದಿದ್ದ ವಿಶ್ವಾಸವನ್ನು ಮಾತ್ರ ಕಳೆದುಕೊಳ್ಳಲಿಲ್ಲ. ಹಾಗೆ ನೋಡಿದರೆ, ಆ ವಿಶ್ವಾಸ ಇನ್ನಷ್ಟು ಅಚಲ ಆಗುತ್ತಾ ನಡೆಯಿತು. ಮತ್ತದು ಒಟ್ಟೂ ಕವಿವೃಂದದಲ್ಲಿ ಮಾತ್ರವಲ್ಲದೆ ಅವನೇ ಉದ್ಘಾಟಿಸಿದ ಆಂಗ್ಲ ರೊಮ್ಯಾಂಟಿಕ್ ಕಾವ್ಯ ಪಂಥದೋಳಗೂ ಅವನಿಗೊಂದು ಅನನ್ಯತೆಯನ್ನು ತಂದುಕೊಟ್ಟಿತು. ಆತನ ಬದುಕು ಬರಹಗಳು ಒಂದಕ್ಕೊಂದು ಪೂರಕವಾಗಿದ್ದವು. ಅವನ ಬರೆಹ ಮತ್ತು ಬದುಕಿನ ಬಗ್ಗೆ ಸಂಕ್ಷಿಪ್ತ ನೋಟವನ್ನು ಈ ಕೃತಿ ಹೊದಗಿಸುತ್ತದೆ.