ಚೇತನ ಆಧುನಿಕ ಕನ್ನಡ ಸಾಹಿತ್ಯ – ಪ್ರವಾಸ ಸಾಹಿತ್ಯ / Chethana Aadhunika Kannada Yuganthara Sahithya, Pravasa Sahithya
Author: Dr. Jyothi Shankar
Pages: 180
Edition: 2015
Book Size: 1/8th Demmy
Binding: Paper Back
Publisher: Chethana Book House
Description
ಚೇತನ ಆಧುನಿಕ ಕನ್ನಡ ಸಾಹಿತ್ಯ – ಪ್ರವಾಸ ಸಾಹಿತ್ಯ / Chethana Aadhunika Kannada Sahithya, Pravasa Sahithya : ಸಾವಿರದ ಐನೂರು ವರ್ಷಗಳಿಗಿಂತಲೂ ಸುಧೀರ್ಘ ಇತಿಹಾಸ ಉಳ್ಳದ್ದು ಕನ್ನಡ ಸಾಹಿತ್ಯ. ಪಂಪಯುಗ, ವಚನಯುಗ, ಹರಿಹರ, ಕುಮಾರವ್ಯಾಸಯುಗ, ದಾಸಸಾಹಿತ್ಯಯುಗ, ಆಧುನಿಕಯುಗ ಹೀಗೆ ಕನ್ನಡ ಸಾಹಿತ್ಯ ಹರಡಿಕೊಂಡಿದೆ. ಆಧುನಿಕ ಕನ್ನಡ ಸಾಹಿತ್ಯ ಕೂಡ ಪ್ರಗತಿಶೀಲ, ನವೋದಯ, ನವ್ಯ, ಬಂಡಾಯ, ದಲಿತ ಹೀಗೆ ಹಲವು ಕವಲುಗಳಲ್ಲಿ ಪ್ರಗತಿ ಸಾಧಿಸಿದೆ.
ಈಗ ಚೇತನ ಯುಗಾಂತರ ಕನ್ನಡ ಸಾಹಿತ್ಯ ಯೋಜನೆಯಲ್ಲಿ ಹದಿನಾರು ಸಂಪುಟಗಳಲ್ಲಿ ಕನ್ನಡ ಸಾಹಿತ್ಯ ಚರಿತ್ರೆ ಪ್ರಕಟಿಸಿದ್ದೇವೆ. ವಿಶೇಷತಃ ವಿದ್ಯಾರ್ಥಿಗಳು ಮತ್ತು ಸಂಶೋಧಕರನ್ನು ಗಮನದಲ್ಲಿರಿಸಿಕೊಂಡು ಈ ಸಂಪುಟಗಳನ್ನು ಪ್ರಕಟಿಸಲಾಗಿದೆ. ಪ್ರವಾಸ ಎನ್ನುವ ಪದವೇ ಮನಸಿಗೆ ಮುದ ನೀಡುತ್ತದೆ. ಹಾಗೆಂದ ಮಾತ್ರಕ್ಕೆ ಎಲ್ಲರಿಗೂ ಎಲ್ಲ ಕಾಲದಲ್ಲಿಯೂ ಪ್ರವಾಸ ಸಾಧ್ಯವಾಗುವುದು ಎಂದಲ್ಲ. ಇಷ್ಟೆಲ್ಲಾ ಅನುಕೂಲಗಳಿದ್ದಾಗ್ಯೂ ಪ್ರವಾಸ ಕೈ ಅಳತೆಯ ವಿಷಯವಾಗಿಲ್ಲ. ಆದರೆ ಪ್ರವಾಸ ಮಾಡಿ ಬಂದಿರುವವರು ಹಂಚಿಕೊಂಡ ವಿಷಯಗಳು ನಾವೇ ಪ್ರವಾಸಕ್ಕೆ ಹೋಗಿದ್ದೆವೇನೋ ಅನ್ನುವ ಮಟ್ಟಿಗೆ ಅನುಭವನೀಡಬಲ್ಲ ಶಕ್ತಿಯನ್ನು ಹೊಂದಿರುತ್ತದೆ ಅಂತಹ ವಿಶೇಷವಾದ ಸಾಹಿತ್ಯ ಪ್ರಕಾರ ಪ್ರವಾಸ ಸಾಹಿತ್ಯ.
