ಹುಲಿಯೂರಿನ ಸರಹದ್ದು, ಸ್ವರೂಪ, ನಿಗೂಢ ಮನುಷ್ಯರು / Huliyurina Sarahaddu, Swarupa, Nigudha Manushyaru
Author: K.P. Purnachandra Tejasvi
Pages: 124
Edition: 2025
Book Size: 1/8th Demmy
Binding: Paper Back
Publisher: Pustakaprakashana
Description
ಹುಲಿಯೂರಿನ ಸರಹದ್ದು (1962) ತೇಜಸ್ವಿಯವರ ಮೊದಲ ಕಥಾ ಸಂಕಲನ. ‘ಲಿಂಗಬಂದ’, ‘ಪಂಜೊಳ್ಳಿ ಪಿಶಾಚಿಯ ಸವಾಲು’, ‘ಗುಡುಗು ಹೇಳಿದ್ದೇನು?’, ’ಉರ್ವಶಿ’, ‘ಹುಲಿಯೂರಿನ ಸರಹದ್ದು’, ‘ಗಾಂಧೀಜಿ ದೆಸೆಯಿಂದ’ ಎಂಬ ಆರು ಕಥೆಗಳು ಇಲ್ಲಿವೆ. ಇವು ‘ವ್ಯಕ್ತಿ ವಿಶಿಷ್ಟ ಸಿದ್ದಾಂತ’ಕ್ಕೂ ಮೊದಲು ಬರೆದವುಗಳಾಗಿವೆ. 1966ರಲ್ಲಿ ಸ್ವರೂಪ ಪ್ರಕಟವಾದ ಮೊದಲ ಕಿರುಕಾದಂಬರಿ ಹಾಗೂ 1973ರಲ್ಲಿ ಪ್ರಕಟವಾಗಿದ್ದ ’ನಿಗೂಢ ಮನುಷ್ಯರು’ ಕಿರು ಕಾದಂಬರಿಗಳನ್ನು ಈ ಸಂಕಲನದಲ್ಲಿ ಸೇರಿಸಲಾಗಿದೆ. ’ಸ್ವರೂಪ’ ಕಾದಂಬರಿಯು ನವ್ಯ ಸಾಹಿತ್ಯದ ಬೌದ್ಧಿಕತೆಯ ದಟ್ಟ ಪ್ರಭಾವಕ್ಕೆ ಒಳಗಾಗಿದೆ. ಹೇಮಂತ ಮತ್ತು ಶ್ರೀನಿವಾಸರ ಆತ್ಮ ನಿವೇದನೆಯಾಗಿ ಬೆಳೆಯುವ ಈ ಕಾದಂಬರಿ ಭೂತದ ಘಟನಾವಳಿಗಳ ನಿರೂಪಣೆಯ ಮೂಲಕ ವ್ಯಕ್ತಿತ್ವದ ಸ್ವರೂಪಗಳನ್ನು ಅನಾವರಣಗೊಳಿಸುತ್ತದೆ. ವ್ಯಕ್ತಿಯ ದುರಂತಕ್ಕೆ ಸಮಾಜವೇ ಕಾರಣ, ಎಲ್ಲರ ಗಮನಕ್ಕೆ ಎಲ್ಲರೂ ಹೊಣೆಗಾರರು ಎಂಬ ಆತ್ಯಂತಿಕ ಸತ್ಯವನ್ನು ಇದು ಹೊರಡಿಸುತ್ತದೆ. ’ನಿಗೂಢ ಮನುಷ್ಯರು’ ಕಿರುಕಾದಂಬರಿಯನ್ನು ನೀಳ್ಗತೆ ಎಂದು ಕರೆಯಬಹುದು. ಪ್ರಕೃತಿ ಮತ್ತು ಮನುಷ್ಯ ಮನುಷ್ಯ ಮತ್ತು ಮನುಷ್ಯ ಸಂಬಂಧಗಳ ನಿಗೂಢತೆಯನ್ನು ಹೇಳುತ್ತದಾದರೂ ಇದರುದ್ದಕ್ಕೂ ಬಿಚ್ಚಿಕೊಳ್ಳುತ್ತ ಹೋಗುವ ರಹಸ್ಯಗಳು ಸಷ್ಟಗೊಳ್ಳದೆ ಮತ್ತಷ್ಟು ಸಂಕೀರ್ಣವಾಗುವುದನ್ನು ಕಾಣುತ್ತೇವೆ. ನಿಗೂಢತೆಯು ಕೊನೆಗೂ ನಿಗೂಢವಾಗಿಯೇ ಉಳಿಯುತ್ತದೆ. ಇಂಗ್ಲಿಷಿಗೆ ಅನುವಾದಗೊಂಡು ಪ್ರತಿಷ್ಠಿತ ಪೆಂಗ್ವಿನ್ ಪ್ರಕಾಶನದಿಂದ ಪ್ರಕಟವಾಗಿದೆ.
