ಮಂದ್ರ / Mandra
ಮಂದ್ರ / Mandra Original price was: ₹835.Current price is: ₹752.
Back to products
ಅಂಚು / Anchu
ಅಂಚು / Anchu Original price was: ₹555.Current price is: ₹500.

ಪರ್ವ / Parva

Author: S.L. Bhairappa

Pages: 734

Edition: 2026

Book Size: 1/8th Demmy

Binding: Paper Back

Publisher: Sahitya Bhandara

Original price was: ₹865.Current price is: ₹779.

In stock

Description

ಪರ್ವ / Parva – ಮಹಾಭಾರತದ ಕತೆಯನ್ನು ಆಧರಿಸಿದ ಕಾದಂಬರಿಯಿದು. ಭೈರಪ್ಪನವರ ’ಪರ್ವ’ಕ್ಕೆ ಮಹಾಭಾರತವೇ ಆಧಾರ. ’ವ್ಯಾಸಕೃತ’ ಭಾರತ ಎಂಬುದು ಯಾವುದು? ಎಂಬ ಪ್ರಶ್ನೆ ಇದೆ. ಭೈರಪ್ಪನವರು ಮಹಾಭಾರತವನ್ನು ತನ್ನದೇ ವಿಶಿಷ್ಟ ಮತ್ತು ವಿಭಿನ್ನ ನೆಲೆಯಲ್ಲಿ ಚಿತ್ರಿಸಿದ್ದಾರೆ. ಇದನ್ನು ಮಹಾಭಾರತದ ಪುನರ್‍ ಸೃಷ್ಟಿ ಎನ್ನಬಹುದು. ಭೈರಪ್ಪನವರು ಈ ಕಾದಂಬರಿಯಲ್ಲಿ ನಿರೂಪಣಾ ವಿಧಾನವನ್ನು ಕೈ ಬಿಟ್ಟು ಪಾತ್ರಗಳೇ ಕಥನವನ್ನು ನಿರ್ವಹಿಸುತ್ತವೆ. ಮಹಾಭಾರತವನ್ನು ರೂಢಿಗತವಾಗಿ ಹೇಳುವ ಕ್ರಮ ಮಹಾಕಾವ್ಯ ಶೈಲಿಯದು. ಭೈರಪ್ಪನವರ ಭಾರತದಲ್ಲಿ ಅದು ಪಾತ್ರವೇ ತನ್ನ ಆತ್ಮಶೋಧ ಮಾಡುತ್ತ ಹೇಳುತ್ತ ಹೋಗುವ ಕಾರಣದಿಂದ ಭಾವಗೀತಾತ್ಮಕ ಆಗಿದೆ. ಪಾತ್ರಗಳ ಅಂತರಂಗ ಪರಿವೀಕ್ಷಣೆಯು ಕೇವಲ ಕಥನಕ್ರಮ ಮಾತ್ರ ಆಗಿರದೆ ಆಯಾ ಪಾತ್ರಗಳ ಸ್ವವಿಮರ್ಶೆಗೂ ಬಳೆಯಾಗಿದೆ. ಪರ್ವದಲ್ಲಿ ಪಾತ್ರಗಳ ವರ್ತನೆಯನ್ನು ನಿರೂಪಣೆ ಮಾಡುವ ಪಾತ್ರಗಳೇ ನಿರ್ಧರಿಸಿ ಚಿಂತನ ನಡೆಸುತ್ತವೆ. ಪರ್ವ ಕಾದಂಬರಿಯು ಮಹಾಭಾರತದ ಎಷ್ಟೋ ವಿವರಗಳನ್ನು ಕಾಲ-ದೇಶಕ್ಕೆ ಅನುಗುಣವಾದ ಘಟನೆಗಳನ್ನಾಗಿ ರೂಪಿಸಿದೆ. ಮಹಾಭಾರತದ ಪಾರಂಪರಿಕ ಕಥನದಲ್ಲಿ ವಾಸ್ತವಕ್ಕೆ ಅತೀತವಾದ, ದೇಶಮುಕ್ತವಾದ ವಿವರಗಳು ಬರುತ್ತವೆ. ಆದರೆ, ಪರ್ವ ಕಾದಂಬರಿಯಲ್ಲಿ ಬರುವ ಪ್ರತಿಯೊಂದು ವಿವರವೂ ಮಾನವ ಸಾಧ್ಯತೆ ಮತ್ತು ಸಂಭಾವ್ಯತೆಗಳೆರಡನ್ನೂ ಒಳಗೊಂಡಿದೆ.