ಸಾಹಿತ್ಯ ಮತ್ತು ಪ್ರತೀಕ / Sahitya Mattu Prathika
ಸಾಹಿತ್ಯ ಮತ್ತು ಪ್ರತೀಕ / Sahitya Mattu Prathika Original price was: ₹80.Current price is: ₹72.
Back to products
ನಷ್ಟ ದಿಗ್ಗಜಗಳು / Nasta Diggajagalu
ನಷ್ಟ ದಿಗ್ಗಜಗಳು / Nasta Diggajagalu Original price was: ₹140.Current price is: ₹126.

ಅದೇ ಊರು ಅದೇ ಮರ / Ade Uru Ade Mara

Author: Dr.K. Shivarama Karantha

Pages: 303

Edition: 2021

Book Size: 1/8th Demmy

Binding: Paper Back

Publisher: Sapna Book House

Specification

Original price was: ₹180.Current price is: ₹162.

In stock

Description

ಅದೇ ಊರು ಅದೇ ಮರ / Ade Uru Ade Mara – ಅದೇ ಊರು, ಅದೇ ಮರ-ಈ ಕಾದಂಬರಿಯನ್ನು ಡಾ. ಕೆ. ಶಿವರಾಮ ಕಾರಂತರು ರಚಿಸಿದ್ದಾರೆ. ವಟಪುರವೆಂಬ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಹಳ್ಳಿ ಸ್ವಾತಂತ್ಯ್ರಪೂರ್ವದಿಂದ ಸ್ವಾತಂತ್ಯ್ರ ನಂತರದ ನಾಲ್ಕೈದು ದಶಕಗಳಲ್ಲಿ ಯಾವೆಲ್ಲ ಸ್ಥಿತ್ಯಂತರಗಳನ್ನು ಹಾಗೂ ಮೂರು ತಲೆಮಾರುಗಳಲ್ಲಿ ಜನಜೀವನದ ಮೌಲ್ಯಗಳಲ್ಲಿ ಉಂಟಾದ ಕಾಲಕಾಲದ ಬದಲಾವಣೆಯನ್ನುಕಂಡಿತು ಎಂಬುದರ ಚಿತ್ರಣವಿದೆ. ಆ ಊರಿನ ಹೆಸರಿಗೆ ಕಾರಣವಾದ ವಟವೃಕ್ಷ ಪುರಾತನ ವೈಭವವನ್ನು ಸಾರುತ್ತದೆ. ಒಂದು ಎಕರೆ ಜಮೀನನ್ನು ಆವರಿಸುವಷ್ಟು ಜಾಗದಲ್ಲಿ ಪಕ್ಷಿಗಳಿಗೆ ನಿಶ್ಚಿಂತ ಆವಾಸವನ್ನೂ ಒದಗಿಸುತ್ತದೆ. ವಟಪುರದ ತಲೆಮಾರಿನ ಜನರು ದಾನ, ಧರ್ಮ , ದೇವರು, ನಂಬಿಕೆಗಳ ನೆರಳಿನಲ್ಲಿ ಬದುಕನ್ನು ಸಾಗಿಸುತ್ತಾರೆ. ಊರಿಗೆ ಆಪತ್ತು ಬಂದಾಗ ಜಾತಿ, ಮತ , ಬಡವ, ಶ್ರೀಮಂತರೆನ್ನದೆ ಎಲ್ಲರೂ ಒಗ್ಗಟ್ಟಿನಿಂದ ಸಹಕರಿಸುತ್ತಾರೆ. ಹೀಗೆ ವಟಪುರದ ಮುಂದಿನ ತಲೆಮಾರಿನ ಕಥೆ ಈ ಕಾದಂಬರಿಯು ಹೇಳುತ್ತ ಸಾಗುತ್ತದೆ. ಒಂದು ದಿನ ಗೋಳಿಮರದ ಅಳಿದುಳೀದ ಕಾಂಡ, ಬೇರುಗಳೂ ಕಣ್ಮರೆಯಾಗುತ್ತವೆ. ಅಲ್ಲೊಂದು ಆಲದ ಮರ ಇತ್ತು ಎಂಬುದರ ಗುರುತೇ ಇರುವುದಿಲ್ಲ. ಸಂಜೆಯ ಹೊತ್ತು ನಾಲ್ವರು ಮುದುಕರು ಈ ಸ್ಥಳಕ್ಕೆ ಬಂದು ಶಾಪ ಹಾಕುತ್ತಾರೆ. ಅವುಗಳನ್ನು ಕಡಿದು ಹೊತ್ತೊಯ್ದವರ ಸುಳಿವು ಸಿಗದು. ಕಾಲಕ್ರಮೇಣ ಅವನತಿಗೆ ಸಾಗುತ್ತಿರುವ ಇಂದಿನ ತಲೆಮಾರಿನ ಜನತೆಯ ಸ್ಪಷ್ಟ ಚಿತ್ರಣ ನೀಡುತ್ತದೆ ಈ ಕಾದಂಬರಿ.