ಗತಜನ್ಮ ಮತ್ತೆರಡು ಕಥೆಗಳು / Gatajanma Matteradu Kathegalu

Author: S.L. Bhairappa

Pages:71

Edition: 2025

Book Size: 1/8th Demmy

Binding: Paper Back

Publisher: Sahitya Bhandara

 

95

In stock

Description

ಗತಜನ್ಮ ಮತ್ತೆರಡು ಕಥೆಗಳು / Gatajanma Matteradu Kathegalu  -ಸಾಹಿತಿ ಎಸ್. ಎಲ್. ಭೈರಪ್ಪ ಅವರ ಕಥಾಸಂಕಲನ ‘ಗತಜನ್ಮ, ಮತ್ತೆರಡು ಕತೆಗಳು’. ಈ ಪುಸ್ತಕವು ಗತಜನ್ಮ, ಸತ್ತಿಲ್ಲ, ಸಂಬಂಧ ಎನ್ನುವ ಮೂರು ಕಥೆಗಳನ್ನು ಒಳಗೊಂಡಿದೆ. ಮೂರೂ ಕಥೆಗಳು ಹೃದಯ ಸ್ಪರ್ಶಿಯಾಗಿ ಓದುಗರ ಮನ ಮುಟ್ಟುತ್ತವೆ. ಗತಜನ್ಮ…ಬಾಲ್ಯ ವಿವಾಹ ಪದ್ಧತಿ ಇದ್ದ ಕಾಲದ ಕಥೆಯಿದು. ಇದು ಭೈರಪ್ಪನವರು ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದಾಗ ಬರೆದದ್ದು. ಅಷ್ಟು ಚಿಕ್ಕ ವಯಸ್ಸಿನಲ್ಲಿ ಬರೆದ ಕಥೆಯೆಂದರೆ ಲೇಖಕರ ಪ್ರಬುದ್ಧತೆಗೆ ಅಚ್ಚರಿ ಮೂಡುತ್ತದೆ.    ಎರಡನೇ ಕಥೆ ಸತ್ತಿಲ….ಈ ಕಥೆಯಲ್ಲಿ ಪುಟ್ಟ ಬಾಲಕನ ತಂದೆ ಕೆಲಸಕ್ಕೆಂದು ಪರವೂರಿಗೆ ಹೋಗಿ ಅಲ್ಲೇ ಕಾಯಿಲೆಯಿಂದ ಸತ್ತು ಹೋಗಿರುತ್ತಾರೆ. ಆದರೆ ಆ ಹುಡುಗನ ತಾಯಿ ಮಗ ಇನ್ನೂ ಚಿಕ್ಕವನು ತಂದೆ ಸತ್ತ ವಿಷಯ ತಿಳಿದರೆ ನೊಂದುಕೊಳ್ಳುವನೆಂದು ಹೆದರಿ ಅಪ್ಪ ದೇವರ ಬಳಿ ಹೋಗಿದ್ದಾರೆ ಅಂತಲೇ ನಂಬಿಸಿರುತ್ತಾಳೆ. ಮುಗ್ಧ ಬಾಲಕನಿಗೆ ಸದಾ ಅಪ್ನದೇ ಯೋಚನೆ… ಯಾವಾಗಲೂ ‘ಅಪ್ಪ ಬರುವುದು ಯಾಕೆ ತಡವಾಗುತ್ತಿದೆ, ಪತ್ರ ಬರೆದು ಕೇಳಮ್ಮ’ ಅಂತ ಅಮ್ಮನನ್ನು ಪೀಡಿಸುತ್ತಾನೆ. ಅಲ್ಲಿ ಪೋಸ್ಟಾಫೀಸು ಇಲ್ಲ ಮಗು ಅಂತ ಅಮ್ಮ ಸಬೂಬು ಹೇಳುತ್ತಾಳೆ. ತಕ್ಷಣ ಹುಡುಗ ‘ಪೋಸ್ಟಾಫೀಸು ಇಲ್ಲದ ಊರನ್ನು ದೇವರು ಊರು ಅಂತಾರ, ಅದಕ್ಕಿಂತ ನಮ್ಮೂರೇ ಚಂದ… ಅಪ್ಪನಿಗೆ ಇಲ್ಲಿಗೆ ಬರಲು ಹೇಳು’ ಅಂತಾನೆ. ಇದನ್ನು ಓದುವಾಗ ಕಣ್ಣು ತುಂಬಿ ಬರುತ್ತವೆ. ಮಗು ಹೀಗೆ ದಿನಾ ಅಪ್ಪನ ಬಗ್ಗೆ ಕೇಳುವುದು,ಅಮ್ಮ ಏನೇನೋ ಹೇಳಿ ಸಮಾಧಾನ ಹೇಳುವುದು ನಡೆಯುತ್ತಿರುತ್ತದೆ.  ಮೂರನೇ ಕಥೆ ಸಂಬಂಧ….ಮಕ್ಕಳಿಲ್ಲದ ಹೆಣ್ಣಿನ ಸುತ್ತ ಹೆಣೆದ ಕಥೆ ಇದು. ಹಣ, ಆಸ್ತಿ ಇದ್ದರೂ ಅದನ್ನು ಅನುಭವಿಸಲು ಮಕ್ಕಳಿಲ್ಲದ ಕೊರಗು ಆಕೆಯದು. ಗಂಡನಿಗೆ ತನ್ನ ಅಣ್ಣನ ಮಗನನ್ನು ದತ್ತು ತೆಗೆದುಕೊಳ್ಳುವಾಸೆ. ಗಂಡನ ಅಣ್ಣನ ಮಕ್ಕಳ ಮೇಲೆ ಪ್ರೀತಿ, ಮಮಕಾರ ಇದ್ದರೂ ಇದು ಅವಳಿಗೆ ಸಮ್ಮತವಿಲ್ಲ. ಆಕೆಯ ತಂಗಿಗೊ ಬಡತನವಿದ್ದರೂ ಮೂರು ಮಕ್ಕಳ ಭಾಗ್ಯ… ಇನ್ನು ಮಕ್ಕಳಾಗದಂತೆ ಆಪರೇಷನ್ ಮಾಡಿಸಿಕೊಳ್ಳಬೇಕೆಂಬ ತಂಗಿಯನ್ನು ತಡೆದು ನಾಲ್ಕನೆಯ ಮಗುವಾಗಲಿ ನಾನೇ ದತ್ತು ತೆಗೆದುಕೊಳ್ಳುವೆ ಅಂತ ಒಪ್ಪಿಸುತ್ತಾಳೆ