ನಷ್ಟ ದಿಗ್ಗಜಗಳು / Nasta Diggajagalu
ನಷ್ಟ ದಿಗ್ಗಜಗಳು / Nasta Diggajagalu Original price was: ₹140.Current price is: ₹126.
Back to products
ಹಿರಿಯ ಕಿರಿಯ ಹಕ್ಕಿಗಳು / Hiriya Kiriya Hakkigalu
ಹಿರಿಯ ಕಿರಿಯ ಹಕ್ಕಿಗಳು / Hiriya Kiriya Hakkigalu Original price was: ₹110.Current price is: ₹99.

ಕನ್ನಡಿಯಲ್ಲಿ ಕಂಡಾತ / Kannadiyalli Kandatha

Author: Dr.K. Shivarama Karantha

Pages: 320

Edition: 2016

Book Size: 1/8th Demmy

Binding: Paper Back

Publisher: Sapna Book House

Original price was: ₹160.Current price is: ₹144.

In stock

Description

ಕನ್ನಡಿಯಲ್ಲಿ ಕಂಡಾತ / Kannadiyalli Kandata – ಡಾ. ಕೆ. ಶಿವರಾಮ ಕಾರಂತರ ಕಾದಂಬರಿ-ಕನ್ನಡಿಯಲ್ಲಿ ಕಂಡಾತ. ಪರಮೇಶ್ವರನು ಸಂಸಾರದಲ್ಲಿ ಅಣ್ಣಂದಿರು, ತಾಯಿ, ಹೆಂಡತಿ, ಮಕ್ಕಳು ಎಲ್ಲರೊಡನೆಯೂ ವಿರಸ ಕಟ್ಟಿಕೊಂಡು, ತಾನು ನಡೆದದ್ದೇ ದಾರಿ ಎಂಬಂತೆ ಅನೀತಿಯ ಮಾರ್ಗ ಹಿಡಿದಾತ. ತನ್ನ ಪ್ರೇಯಸಿಯ ಮೇಲೆ ಇನ್ನೊಬ್ಬ ಗಟ್ಟಿಕುಳ ಕಣ್ಣಿಟ್ಟಾಗ ಉಂಟಾದ ದ್ವೇಷ – ಜಗಳಗಳಿಂದಾಗಿ ಊರು ಬಿಟ್ಟು ಅಲೆಯುತ್ತಾನೆ. ವಿವಿಧ ತೆರನಾದ ಜನಗಳು ದಾರಿಯುದ್ದಕ್ಕೂ ಇದಿರಾಗುತ್ತಾರೆ. ಕುರುಡ ಹಿಡಿದದ್ದೇ ದಾರಿ ಎಂಬ ತೆರದಲ್ಲಿ ಅಲೆಮಾರಿತನವನ್ನು ರೂಢಿಸಿಕೊಳ್ಳುತ್ತಾನೆ. ಹೊಟ್ಟೆಯ ಹಸಿವನ್ನು ನೀಗಿಸಿಕೊಳ್ಳಲು ಭಿಕ್ಷಾಪಾತ್ರೆಯನ್ನೂ ಹಿಡಿಯಬೇಕಾಗುತ್ತದೆ ; ಭೈರಾಗಿಯಂತೆಯೂ ನಟಿಸುವಂತಾಗುತ್ತದೆ. ಹೀಗೆ ಗೊತ್ತುಗುರಿಯಿಲ್ಲದೆ ಅಲೆದು, ದಣಿದು, ವಿವಿಧ ತೆರನ ಅನುಭವ, ಕಹಿ, ಕಷ್ಟಕಾರ್ಪಣ್ಯ ಗಳನೆಲ್ಲ ಕಂಡ ಪರಮೇಶ್ವರನ ಒಣ ಹೆಮ್ಮೆ ಮತ್ತು ಅಹಂಕಾರ ಅಲೆದಾಟದ ಮೂರು ವರ್ಷಗಳ ಬದುಕಿನಲ್ಲಿ ಸಂಪೂರ್ಣ ನುಚ್ಚುನೂರಾಗಿ, ತನ್ನ ತಪ್ಪಿನ ಅರಿವಾಗುತ್ತದೆ. ಆದರೂ, ಊರಿಗೆ ಹಿಂದಿರುಗಿ, ಮಡದಿ ಮಕ್ಕಳನ್ನು ಸೇರಿಕೊಳ್ಳಲು ಧೈರ್ಯ ಸಾಲದಾಗುತ್ತದೆ. ಮಲೆಮನೆಯ ಪ್ರತಿಷ್ಠಿತ ವ್ಯಕ್ತಿ ಮಂಜಪ್ಪನವರ ಕರುಣೆ, ಮಾನವೀಯತೆ, ಉಪಚಾರಗಳಿಂದ ಅವರ ಬಳಿಯಲ್ಲಿದ್ದು, ಮಾಸ್ತರಿಕೆ ವೃತ್ತಿ ಮಾಡಿಕೊಂಡಿರುತ್ತಾನೆ. ಮೊದಲೆಲ್ಲ ಪರರ ಮೇಲೆ ಅವನು ವಿನಾಕಾರಣ ಉರಿದು ಬೀಳುತ್ತಿದ್ದ. ಈಗ ಮಾತ್ರ ಅವನಿಗೆ ನೀತಿಯ ವಿಷಯದಲ್ಲೇ ಆಗಲಿ, ಇನ್ನೊಂದು ವಿಷಯದಲ್ಲೇ ಆಗಲಿ, ಪೂರ್ಣತೆ ತನ್ನ ಎಟುಕಿನಿಂದ ಬಲು ದೂರ ಉಳಿದಿದೆ ಎಂದು ಅನಿಸುತ್ತದೆ. ಮೊದಲಿಗಿಂತಲೂ ತಾನು ಎಷ್ಟೇ ಸುಧಾರಿಸಿದರೂ, ಹಳೆಯ ದೇಹ, ಹಳೆಯ ಮನಸುಗಳನ್ನು ಹೊತ್ತು ನಲಿಯುತ್ತಿರುವ ತನ್ನ ರೂಪವನ್ನು ಕನ್ನಡಿಯಲ್ಲಿ ಕಂಡಾಗ ತೀರ ಕುರೂಪವಾಗಿ ಕಾಣಸದೇ ಹೋದರೂ, ಸುರೂಪವಾಗಿಲ್ಲವಲ್ಲ ಎಂಬ ಮಿತಿ ಕಾಣಿಸುತ್ತದೆ. ಎಷ್ಟೇ ಪಶ್ಚಾತ್ತಾಪದ ಬದುಕು ಸಾಗಿಸಿದರೂ ಹಳೆಯ ಕರ್ಮಗಳು ಮಾತ್ರ ನೆನಪಾಗಿಯೇ ಉಳಿಯುತ್ತವೆ ಎಂಬುದು ಇಲ್ಲಿಯ ಸಂದೇಶ.