ಕವಲು / Kavalu
Author: S.L. Bhairappa
Pages: 317
Edition: 2025
Book Size: 1/8th Demmy
Binding: Paper Back
Publisher: Sahitya Bhandara
Specification
Description
ಕವಲು / Kavalu – ಪ್ರಖ್ಯಾತ ಲೇಖಕರಾದ ಎಸ್. ಎಲ್. ಭೈರಪ್ಪನವರ ’ಕವಲು’ ಕಾದಂಬರಿಯು ಪ್ರಸ್ತುತ ದಿನಮಾನಗಳಲ್ಲಿ ಮಹಿಳಾ ಪರ ಕಾನೂನುಗಳ ದುರುಪಯೋಗ, ಮಹಿಳಾ ಮಣಿಗಳ ಹೋರಾಟದ ರೀತಿ, ಆಧುನಿಕ ಮಹಿಳಾವಾದದ ಕಾರಣ ಛಿದ್ರವಾಗುತ್ತಿರುವ ಭಾರತೀಯ ಕೌಟುಂಬಿಕ ವ್ಯವಸ್ಥೆಗಳ ಬಗ್ಗೆ ಕವಲಿನಲ್ಲಿ ಚೆನ್ನಾಗಿ ಮನಸ್ಸಿಗೆ ನಾಟುವಂತೆ ಚಿತ್ರಿತವಾಗಿದೆ. ಮುಖ್ಯವಾಗಿ ಎರಡು ಮಧ್ಯಮ ವರ್ಗದ ಉನ್ನತ ಕೆಲಸದಲ್ಲಿರುವ ಕುಟುಂಬಗಳಲ್ಲಿ ಉಂಟಾಗುವ ತಲ್ಲಣಗಳ ಬಗ್ಗೆ ಕವಲಿನಲ್ಲಿ ವಿಸ್ತೃತವಾಗಿ ಚಿತ್ರಿತವಾಗಿದೆ. ಕಾದಂಬರಿಯ ಪ್ರಮುಖ ಪಾತ್ರಧಾರಿಯಾದ ಜಯಕುಮಾರ ಸ್ವಂತ ಪರಿಶ್ರಮದಿಂದ ಕಂಪನಿ ಕಟ್ಟಿ ಬೆಳಸಿದ ಸಾಹಸಿ. ಮುಖ್ಯವಾಗಿ ಎರಡು ಮಧ್ಯಮ ವರ್ಗದ ಉನ್ನತ ಕೆಲಸದಲ್ಲಿರುವ ಕುಟುಂಬಗಳಲ್ಲಿ ಉಂಟಾಗುವ ತಲ್ಲಣಗಳ ಬಗ್ಗೆ ಕವಲಿನಲ್ಲಿ ವಿಸ್ತೃತವಾಗಿ ಚಿತ್ರಿತವಾಗಿದೆ. ಮಹಿಳೆಯರಿಂದ ಮಹಿಳೆಗೆ ಆಗುವ ಶೋಷಣೆಗೆ ಮಹಿಳಾ ಹೋರಾಟಗಾರರು ಏನನ್ನುತ್ತಾರೆ? ಭಾರತೀಯ ಕೌಟುಂಬಿಕ ವ್ಯವಸ್ಥೆಯಲ್ಲಿ ಇಂದು ಗಂಡ ಹೆಂಡತಿ ಸಂಬಂಧಗಳಲ್ಲಿ ಪ್ರೀತಿ, ನಂಬಿಕೆ, ಭಾವನಾತ್ಮಕ ಸಂಬಂಧಗಳು ಮರೆಯಾಗಿ ಕೇವಲ ವ್ಯವಹಾರ ಮಾತ್ರ ಉಳಿದುಕೊಂಡಿದೆ ಎನ್ನುವದನ್ನು ಕವಲಿನಲ್ಲಿ ಹೇಳಿದ್ದಾರೆ. ಕಾದಂಬರಿ ಓದುತ್ತ ಹೊಗುತ್ತಿದ್ದಂತೆ ಅದರಲ್ಲಿನ ಪಾತ್ರಗಳು ಘಟನೆಗಳು ನಮ್ಮ ಸುತ್ತಮುತ್ತ ನಡೆಯುತ್ತಿದೆ ಎನ್ನುವಷ್ಟರ ಮಟ್ಟಿಗೆ ಆಪ್ತವಾಗಿದೆ. ಉನ್ನತ ಶಿಕ್ಷಣಗಳಲ್ಲಿ ಪಾಶ್ಚಿಮಾತ್ಯದ ಪ್ರಭಾವೋ ಏನೋ ಆಧುನಿಕ ಮಹಿಳೆಯರು, ಮುಕ್ತ ಸಂಸ್ಕೃತಿಯನ್ನು ಬಿಡಲಾಗದೆ, ಇತ್ತ ಭಾರತೀಯ ಸಂಸ್ಕೃತಿಯನ್ನು ಒಪ್ಪಿಕೊಳ್ಳಲಾಗದೆ ಒದ್ದಾಡುವ ಸಂದಿಗ್ಧ ಪರಿಸ್ಥಿತಿಯನ್ನು “ಕವಲು”ನಲ್ಲಿ ಚಿತ್ರಿಸಿದ್ದಾರೆ.
