ಸೈಜ್ ಜೀರೋ ದೇಹದ ಜತೆ ನನ್ನ ಪ್ರಯೋಗಗಳು / Size Zero - Dehada Jothe Nanna Prayogagalu
₹125 Original price was: ₹125.₹112Current price is: ₹112.
ಇವರು ಅವರು ದೇವರು / Ivaru Avaru Devaru
₹200 Original price was: ₹200.₹180Current price is: ₹180.
ಬಾಟಮ್ ಐಟಮ್ / Bottom Item
Author: Ravi Belagere
Pages:212
Edition: 2023
Book Size: 1/8th Demmy
Binding: Paper Back
Publisher: Bhavana Prakashana
Description
ಬಾಟಮ್ ಐಟಮ್ / Bottom Item – ಗಂಡ ಹೆಂಡತಿಯ ಜಗಳದಿಂದ ಹಿಡಿದು, ನೌಕರಿಗೊಂದು ಅರ್ಜಿ ಬರೆಯುವುದು ಹೇಗೆ ಅಂತ ವಿವರಿಸುವ ತನಕ ಎಲ್ಲ ಸಂಗತಿಗಳನ್ನು ತೆಕ್ಕೆಗೆ ತೆಗೆದುಕೊಂಡ ಪೇಜಿನ ಬುಡದ ಪುಟ್ಟ ಅಂಕಣ ‘ಬಾಟಮ್ ಐಟಮ್’. ಎಷ್ಟೋಸಲ ನನ್ನ ರಣ ಗಂಭೀರ ಬರಹಗಳಾದ ಖಾಸ್ಬಾತ್, ಹಲೋಗಳಿಗಿಂತ ಹೆಚ್ಚಿನ ಪ್ರತಿಕ್ರಿಯೆ ತೆಗೆದುಕೊಂಡ ಅಂಕಣವಿದು. ಏನು ತಪ್ಪಿದರೂ, ದೇವರ ನೆತ್ತಿಯ ಮೇಲೆ ಹೂವು ತಪ್ಪುವುದಿಲ್ಲ ಎಂಬಂತೆ-ಈ ಬಾಟಮ್ ಐಟಮ್ಮೊಂದು ಇಲ್ಲದೇ ಹೋದರೆ, ಆ ಸಂಚಿಕೆ ಪೂರ್ಣವಾಗುವುದೇ ಇಲ್ಲ. ಪತ್ರಿಕೆಯ ಮೂರನೆಯ ಪುಟಕ್ಕೊಂದು ಆಕಾರ ಸಿಗುವುದಿಲ್ಲ. ದೊಡ್ಡ ಅಂಗಿ, ಗಿಡ್ಡ ಲಂಗ ಧರಿಸಿ ನಿಂತಿರುವ ತುಂಟ ಹುಡುಗಿಯ ಹಾಗೆ ಕಾಣುವ ‘ಹಾಯ್ ಬೆಂಗಳೂರ್!’ ನ ಮೂರನೇ ಪುಟದ ಈ ಗಿಡ್ಡ ಲಂಗವೇ ‘ಬಾಟಮ್ ಐಟಮ್.’
