ಖಾಸ್ ಬಾತ್ 2007 / Khasbath 2007
Author: Ravi Belagere
Pages:216
Edition: 2025
Book Size: 1/8th Demmy
Binding: Paper Back
Publisher: Bhavana Prakashana
Specification
Description
ಖಾಸ್ ಬಾತ್ 2007 / Khasbath 2007 – ಈ ಪತ್ರಿಕೋದ್ಯಮದಲ್ಲಿ ಯಾರೂ ಮಾಡದ ಸಾಹಸಗಳು ಎಂದರೆ ಕೇವಲ ನನ್ನ ಅಪ್ಪನದ್ದು, ಟೀಕೆಗೆ ಒಳಗಾದರೂ, ಪ್ರಶಂಸೆಗೆ ಒಳಗಾದರೂ ಎರಡನ್ನೂ ಸಮಾನವಾಗಿ ಸ್ವೀಕರಿಸಿದ್ದಾರೆ ಮತ್ತು ಅದಕ್ಕೆ ಸಮಜಾಯಿಸಿ ಕೊಡದೇ ಒಪ್ಪಿಕೊಂಡಿದ್ದಾರೆ. ಅವರ ಜೀವನವೇ ಕಲರ್ ಫುಲ್. ಇಂಗ್ಲಿಷ್ ನಲ್ಲಿ ಒಂದು ಮಾತಿದೆ. ಬಹುಶಃ ಅದು ಅಪ್ಪನಿಗೆ ಹೇಳಿ ಮಾಡಿಸಿರಬಹುದು. “”You can love him or you can hate him” ಆದರೆ “you can’t ignore him” ಅಂತ! ಇದನ್ನ ಯಾಕೆ ಹೇಳ್ತಿದೀನಿ ಅಂದ್ರೆ ಒಮ್ಮೆ ಅಪ್ಪನನ್ನು ಯಾರೋ ಕೇಳಿದರು; ನಿಮ್ಮಂತಹ ಬರಹಗಾರನಿದ್ದಾನಾ? ಅಪ್ಪನ ಉತ್ತರ ಇದ್ದಾರೆ. ನಿಮ್ಮಂತಹ ಧೈರ್ಯಶಾಲಿ ಇದ್ದಾರಾ? ಮತ್ತೆ ಉತ್ತರ ಇದ್ದಾರೆ. ನಿಮ್ಮಂತಹ ವಾಗಿ ಇದ್ದಾರಾ? ಅಪ್ಪನ ಉತ್ತರ ಮತ್ತದೇ ಇದ್ದಾರೆ. ಮತ್ತೆ ನೀವ್ಯಾಕೆ ವಿಭಿನ್ನ? ಅಂದಾಗ ಅಪ್ಪ ಉತ್ತರಿಸಿದ್ದು; ಈ ಮೂರು combination ನನ್ನೊಬ್ಬನಲ್ಲೇ ಇರೋದಕ್ಕೆ ನಾನು ರವಿ ಬೆಳಗೆರೆ. ಅವರಿಗೆ ಅಪ್ಪ ಕೇಳಿದರು; ನಿಮ್ಮ ತಂದೆ ಯಾರು? ನಿಮಗೆ ಗೊತ್ತಾ? ಗೊತ್ತು, ಅಂದ ವ್ಯಕ್ತಿ. ಆದರೆ ನನಗೆ ನನ್ನ ಅನುಭವಗಳೇ ತಂದೆ. ಅದನ್ನು ಜೀವನವು ಹೇಳಿ ಕೊಟ್ಟಿತು ಮತ್ತು ಎಡವಟ್ಟಾದ ನನ್ನನ್ನು ಅಮ್ಮ ಆಗಿರಲಿ ಅಥವಾ ನನ್ನ ಲಲಿತೆ ಆಗಿರಲಿ ಹೇಳಿಕೊಟ್ಟಿದ್ದಾರೆ. ಈಗ ನಿಮ್ಮ ಕೈಯಲ್ಲಿರುವ ಪುಸ್ತಕವೂ ಹಾಗೇನೇ; ನಿಮ್ಮ ಎಡವಟ್ಟನ್ನು ಅಥವಾ ನಿಮ್ಮ ಬಲಹೀನತೆಯನ್ನು ನಿಮಗೇ ಅರಿವಿಲ್ಲದೆ ನೀವು ಅನುಭವಿಸುತ್ತೀರಿ. ನೈಜತೆಗೆ ಹತ್ತಿರದ್ದೇನಿದ್ದರೂ ಅದನ್ನು ಹೇಳಿಕೊಂಡಿದ್ದೇನೆ ಮತ್ತು ಬರೆದಿದ್ದೇನೆ. ಅಪ್ಪ ಈಗ ಇದ್ದಿದ್ದರೆ ಇದೇ ಮಾತುಗಳನ್ನು ಹೇಳುತ್ತಿದ್ದರು ಎಂಬುವ ಭರವಸೆಯಿಂದ ಇದನ್ನೆಲ್ಲಾ ಬರೆದಿದ್ದೇನೆ. ನನ್ನ ಈ ಮೊದಲನೇಯ ಪ್ರಯತ್ನಕ್ಕೆ ನಿಮ್ಮ ಪ್ರೀತಿ ಮತ್ತು ಹಾರೈಕೆ ಇರಲಿ.
