ಸು ಬಿಟ್ರೆ ಬಣ್ಣ ಬಾ ಬಿಟ್ರೆ ಸುಣ್ಣ / Su Bittare Banna Ba Bittare Sunna
Author: Jogi
Pages: 88
Edition: 2021
Book Size: 1/8th Demmy
Binding: Paper Back
Publisher: Ankita Pustaka
Specification
Description
ಸು ಬಿಟ್ರೆ ಬಣ್ಣ ಬಾ ಬಿಟ್ರೆ ಸುಣ್ಣ / Su Bittre Banna Ba Bittre Sunna – ಕಾರ್ಲೋ ಗೋಲ್ಡೋನಿಯ ‘ಸರ್ವೆಂಟ್ ಆಫ್ ಟು ಮಾಸ್ಟರ್ಸ್’ ನಾಟಕದ ಕನ್ನಡದ ರೂಪ ಸು ಬಿಟ್ರೆ ಬಣ್ಣ ಬ ಬಿಟ್ರೆ ಸುಣ್ಣ “ಇದಕ್ಕೆ ಮೂಲ ಪ್ರೇರಣೆ ಕೆ. ವಿ ಅಕ್ಷರ, ನೀನಾಸಂ ತಿರುಗಾಟಕ್ಕೆಂದು ಈ ನಾಟಕವನ್ನು ನನ್ನಿಂದ ಬರೆಸಿದರು” ಎಂದಿದ್ದಾರೆ ಜೋಗಿ, ಈ ನಾಟಕ ಖ್ಯಾತ ನಿರ್ದೇಶಕ ಇಕ್ಬಾಲ್ ಅಹಮದ್ರವರ ನಿರ್ದೇಶನದಲ್ಲಿ ಸಾಕಷ್ಟು ಜನ ಪ್ರೀತಿಗಳಿಸಿದೆ, ಅತ್ಯಂತ ಸಮರ್ಥವಾಗಿ ಸಮಕಾಲೀನ ಸಂದರ್ಭಕ್ಕೆ ಹೊಂದುವಂತೆ ಜೋಗಿಯವರು ಇದನ್ನು ಕನ್ನಡಕ್ಕೆ ತಂದಿದ್ದಾರೆ. ನಾಟಕವನ್ನು ಕುರಿತು ಜೋಗಿಯವರ ಕೆಲವು ಮಾತುಗಳು ಇಂತಿವೆ. ಕಾರ್ಲೋ ಗೋಲ್ಡೋನಿ ಈ ನಾಟಕವನ್ನು ಬರೆದದ್ದು 1746ರಲ್ಲಿ, ಸುಮಾರು 275 ವರ್ಷ ಹಿಂದಿನ ನಾಟಕ ಈಗ ನಮ್ಮನ್ನು ಮುಟ್ಟುವ ಪರಿ ಅಚ್ಚರಿಗೊಳಿಸುತ್ತದೆ. ನಾಟಕ ಪ್ರತಿಸಲ ರಂಗಕ್ಕೇರಿದಾಗಲೂ ಸಮಕಾಲೀನವಾಗುತ್ತದೆ, ಆ ಕ್ಷಣದ ನಾಟಕವಾಗಿ ಬಿಡುತ್ತದೆ. ಅದನ್ನು ಈ ನಾಟಕ ತಿಳಿಸಿಕೊಟ್ಟಿತು.
