ಸಂಸ್ಕೃತಿ / Samskruti
ಸಂಸ್ಕೃತಿ / Samskruti Original price was: ₹100.Current price is: ₹90.
Back to products
ಇಂದ್ರವಜ್ರ / Indravajra
ಇಂದ್ರವಜ್ರ / Indravajra Original price was: ₹75.Current price is: ₹67.

ಮದುವೆಯ ಆಲ್ಬಮ್ / Maduveya Album

Author: Girish Karnad

Pages:100

Edition: 2017

Book Size: 1/8th Demmy

Binding: Paper Back

Publisher: Manohara Grantha Mala

Original price was: ₹90.Current price is: ₹81.

In stock

Description

ಮದುವೆಯ ಆಲ್ಬಮ್ / Maduveya Album – ಗಿರೀಶ್ ಕಾರ್ನಾಡ್ ಅವರ “ಮದುವೆಯ ಆಲ್ಬಮ್” ಒಂದು ಹಾಸ್ಯ ನಾಟಕವಾಗಿದ್ದು, ಇದು ಜಾಗತೀಕೃತ ಮತ್ತು ತಂತ್ರಜ್ಞಾನ ಆಧಾರಿತ ಭಾರತದಲ್ಲಿ ಸಾಂಪ್ರದಾಯಿಕ ವಿವಾಹದ ವಿಷಯವನ್ನು ವಿಮರ್ಶಿಸುತ್ತದೆ. ಆಧುನಿಕ ಮಧ್ಯಮ ವರ್ಗದ ಕುಟುಂಬದ ಪಾತ್ರಗಳ ಮೂಲಕ, ಸಮಕಾಲೀನ ಭಾರತದ ಬಗ್ಗೆ ಆಳವಾದ ಒಳನೋಟಗಳನ್ನು ನೀಡುವ ಈ ನಾಟಕವು ಗಿರೀಶ್ ಕಾರ್ನಾಡ್ ಅವರ ಸಾಮಾಜಿಕ ವಿಷಯಾಧಾರಿತ ನಾಟಕಗಳಲ್ಲಿ ಒಂದು. ಐತಿಹಾಸಿಕ ಮತ್ತು ಪೌರಾಣಿಕ ವಸ್ತುಗಳನ್ನು ಆಧರಿಸಿದ ನಾಟಕಗಳ ಮೂಲಕ ಪ್ರಸಿದ್ದರಾಗಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಅವರ ನಾಟಕ. ಸಾಮಾಜಿಕ ವಸ್ತು ಆಧರಿಸಿದ ನಾಟಕ ಇದು. ಮದುವೆಯ ಆಲ್ಬಮ್ ನಾಟಕಕ್ಕಿಂತ ಮುಂಚೆ ಗಿರೀಶ ಅವರು ‘ಅಂಜು ಮಲ್ಲಿಗೆ’ ಎಂಬ ನಾಟಕ ಪ್ರಕಟಿಸಿದ್ದರು. ಅದು ಸಮುದ್ರದಾಚೆಗೀನ ಕಥೆಯನ್ನು ಒಳಗೊಂಡಿತ್ತು. ಅದಾದ ಮೇಲೆ ಆಧುನಿಕ ತಂತ್ರಜ್ಞಾನ ಬಳಸಿ ಏಕವ್ಯಕ್ತಿ ಪ್ರದರ್ಶನದ ‘ಬಿಂಬ’ ಎಂಬ ನಾಟಕ ಪ್ರಕಟಿಸಿದ್ದರು. ಅದಾದ ಮೇಲೆ ‘ಮದುವೆಯ ಆಲ್ಬಮ್’ ನಾಟಕ ಬರೆದಿದ್ದಾರೆ. ಸಮಕಾಲೀನ ಜೀವನದ ಬಗ್ಗೆ ನಾಟಕ ಬರೆದರೆ ಮಾತ್ರ ಖರೇ ನಾಟಕಕಾರ’ ಎಂದು ಹಿರಿಯ ನಾಟಕಕಾರ- ಪ್ರಕಾಶಕ ಜಿ.ಬಿ. ಜೋಷಿ ಅವರು ಹೇಳಿದ್ದನ್ನು ಪ್ರಸ್ತಾಪಿಸಿರುವ ಗಿರೀಶ ಅವರು ಅದಕ್ಕೆ ಪ್ರತಿವಾದ ಹೂಡಲು ‘ಸಮಕಾಲೀನ ಸಂವೇದನೆ ಮುಖ್ಯ ಹೊರತು ವಿಷಯವಲ್ಲ’ ಎಂದು ಹೇಳಿದ್ದರಂತೆ. ಅದನ್ನು ಸ್ಮರಿಸಿರುವ ಗಿರೀಶ ಅವರು ಜಿ.ಬಿ. ಶತಮಾನೋತ್ಸವ ಸಂದರ್ಭದಲ್ಲಿಯಾದರೂ ‘ಖರೆ ನಾಟಕಕಾರ’ ಎಂದು ಸಿದ್ದಗೊಳಿಸಲು ಅವಕಾಶ ದೊರೆಯಿತಲ್ಲ ಎಂದು ಹೇಳಿದ್ದಾರೆ. ಸಮಕಾಲೀನ ಜೀವನವನ್ನು ಆಧಿರಿಸಿದ ನಾಟಕ ‘ಮದುವೆಯ ಆಲ್ಬಮ್’.