ಮಿಥುನ /Mithuna
ಮಿಥುನ /Mithuna Original price was: ₹135.Current price is: ₹122.
Back to products
ಸುಬ್ಬಣ್ಣ / Subbanna
ಸುಬ್ಬಣ್ಣ / Subbanna Original price was: ₹90.Current price is: ₹81.

ಮನೀಷೆ / Maneeshe

Author: Vasudhendra

Pages:92

Edition: 2020

Book Size: 1/8th Demmy

Binding: Paper Back

Publisher: Chanda Pustaka

Original price was: ₹100.Current price is: ₹90.

In stock

Description

ಮನೀಷೆ / Maneeshe –  ಸರಿಯಾಗಿ ಅದೇ ಸಮಯಕ್ಕೆ ಹಿತ್ತಲಿನಲ್ಲಿ ಸದ್ದಾಯ್ತು, ಯಾರೋ ಹಿತ್ತಲಿನ ಬೇಲಿಯ ಬಾಗಿಲನ್ನು ತೆರೆಯುತ್ತಿರುವಂತೆ ಭಾಸವಾಯ್ತು, ಕಮಲಕ್ಕ ಹಿತ್ತಲಿಗೆ ಹೋದಳು. ವಾಜಿಯೂ ಹಿಂಬಾಲಿಸಿದ. ಅಲ್ಲಿ ಬೆಳಿಗ್ಗೆ ವಾಜಿಯಿಂದ ಕಲ್ಲಿನೇಟು ತಿಂದ ಹಂದಿ ಗೇಟನ್ನು ನೂಕುತ್ತಿತ್ತು. ಕಮಲಕ್ಕಗೆ ಅದೇನನ್ನಿಸಿತೋ ಏನೋ, ಸೀದಾ ಹೋಗಿ ಗೇಟನ್ನು ತೆರೆದುಬಿಟ್ಟಳು. ಹಂದಿ ಒಳನುಗ್ಗಿ ಮಲ್ಲಿಗೆಯ ಹಂದರದ ಕೆಳಗೆ ಸ್ವಲ್ಪ ಮಣ್ಣು ಕೆದರಿ ಕುಳಿತುಕೊಂಡುಬಿಟ್ಟಿತು. ಕಮಲಕ್ಕ ಆ ಹಂದಿಯನ್ನು ನೋಡಿ, ‘ರಾಯರೇ, ಹಂದಿ ಹಡವಣಿಗಿ ಸುಸೂತ್ರ ‘ಆಗ್ಲಪ್ಪ ಅಂತ ಮನಸ್ಸಿನಲ್ಲೇ ಪ್ರಾರ್ಥಿಸಿ, ವಾಜಿಯ ಕೈ ಹಿಡಿದುಕೊಂಡು ಬಸ್‌ ನಿಲ್ದಾಣದ ಕಡೆ ಹೊರಟುಬಿಟ್ಟಳು. ಆದರೆ ಹಸಿವು ಮತ್ತು ಅವಮಾನಗಳಿಂದ ಕಂಗಾಲಾದ ವಾಜಿ ಈಗ ಬಸ್ಸಿನಲ್ಲಿ ಸೀಟನ್ನು ಹಿಡಿಯುತ್ತಾನೆಂಬುದು ಸಂಶಯದ ವಿಷಯ.