ಯಾದ್ ವಶೇಮ್ / Yaad Vashem

Author: Nemichandra

Pages:288

Edition: 2018

Book Size: 1/8th Demmy

Binding: Paper Back

Publisher: Navakarnatka Publication

Original price was: ₹240.Current price is: ₹216.

In stock

Description

ಯಾದ್ ವಶೇಮ್ / Yaad Vashem –  ನೇಮಿಚಂದ್ರ ಅವರ ‘ಯಾದ್ ವಶೇಮ್’ ಕಾದಂಬರಿಯು ಹಿಟ್ಲರ್‌ನ ಆಳ್ವಿಕೆಯಲ್ಲಿ ಯಹೂದಿಗಳು ಅನುಭವಿಸಿದ ಹಿಂಸೆ ಮತ್ತು ಶೋಷಣೆಯನ್ನು ಚಿತ್ರಿಸುವ ಕೃತಿಯಾಗಿದೆ. ಇದು ಯಹೂದಿ ಬಾಲಿಕೆಯೊಬ್ಬಳು ಹಿಟ್ಲರ್‌ನ ನೆಲದಿಂದ ಗಾಂಧಿಯ ನೆಲಕ್ಕೆ ಬರುವ ಕಥೆಯನ್ನು ಹೇಳುತ್ತದೆ, ಇದು ಹ್ಯಾನ್ ಎಂಬ ಮುಖ್ಯ ಪಾತ್ರದ ಮೂಲಕ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನಿಯಲ್ಲಿನ ಸಾಮಾನ್ಯ ಜನರ ಬವಣೆಗಳನ್ನು ವಿವರಿಸುತ್ತದೆ. ಮಹಾಯುದ್ಧದ ಸಂದರ್ಭದಲ್ಲಿ ಜರ್ಮನಿಯಲ್ಲಿ ಸಾಮಾನ್ಯ ಜನ ಅನುಭವಿಸಿದ ಯಾತನೆ, ಶೋಷಣೆ, ಲೈಂಗಿಕ ಕ್ರೌರ್ಯ ಇತ್ಯಾದಿ ಚಿತ್ರಣವೇ ಈ ಕಾದಂಬರಿ. ಜರ್ಮನಿಯಿಂದ ತಂದೆಯೊಂದಿಗೆ ಭಾರತಕ್ಕೆ ಬಂದಿದ್ದರೂ ಹ್ಯಾನ್ ಎಂಬ ಯಶಾದ್ ವಶೇಮ್ ಆ ನೆನಪುಗಳಿಂದ ತತ್ತರಿಸಿ ಹೋಗುತ್ತಾಳೆ. ಒಂದು ತುಣುಕು ಬ್ರೆಡ್ ಗಾಗಿ ಹುಡುಕಿ ಹುಡುಕಿ ಬಸವಳಿದ ಮಕ್ಕಳು ಸಾಲು ಸಾಲಾಗಿ ಸತ್ತರು. ಮಹಿಳೆಯರು ಕಾಮುಕರ ಲೈಂಗಿಕ ಶೋಷಣೆಗೆ ಒಳಗಾದರು. ವೃದ್ಧರು ಬರ್ಬರ ಹಿಂಸೆ ಅನುಭವಿಸಿದರು. ಊರು ತುಂಬೆಲ್ಲಾ ನರಕ ಯಾತನೆ, ಇಂತಹ ಭೀಕರ ಚಿತ್ರಣ ಕಟ್ಟಿಕೊಡುವ ಈ ಕಾದಂಬರಿಯು ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (2007) ಹಾಗೂ ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಪ್ರತಿಷ್ಠಾನದ ‘ಅಕ್ಕ ಪ್ರಶಸ್ತಿ’ (2009) ಪಡೆದಿದೆ.