ಮಾಗಧ / Maagadha
Author: Sahana Vijayakumar
Pages:772
Edition: 2024
Book Size: 1/8th Demmy
Binding: Paper Back
Publisher: Sahitya Bhandara
Description
ಮಾಗಧ / Maagadha – ಕನ್ನಡದಲ್ಲಿ ಐತಿಹಾಸಿಕ ಕಾದಂಬರಿಗಳಿಗೆ ಶತಮಾನಕ್ಕೂ ಮಿಗಿಲಾದ ಇತಿಹಾಸವಿದೆ. ಆದರೆ ನವೋದಯದ ಬಳಿಕ ನವ್ಯ, ಬಂಡಾಯ ಮುಂತಾದ ಚಳವಳಿಗಳ ಯುಗದಲ್ಲಿ ಈ ಪ್ರಕಾರವು ಲೇಖಕರನ್ನು ಹೆಚ್ಚು ಸೆಳೆದಂತೆ ತೋರದು. ಈಚಿನ ಇಪ್ಪತ್ತು-ಇಪ್ಪತ್ತೈದು ವರ್ಷಗಳಲ್ಲಿ ಡಾ| ಎಸ್.ಎಲ್. ಭೈರಪ್ಪನವರ ಸಾರ್ಥ, ಆವರಣ ಮುಂತಾದ ಕೃತಿಗಳ ಬಳಿಕ – ಐತಿಹಾಸಿಕ ಕಾದಂಬರಿಗಳ ರಚನೆ ಮತ್ತೆ ಮುನ್ನೆಲೆಗೆ ಬಂದಂತೆ ತೋರುತ್ತದೆ. ಈ ಹಂತದಲ್ಲಿ ಅಧ್ಯಯನ, ಕ್ಷೇತ್ರಕಾರ್ಯ, ವಸ್ತುನಿಷ್ಠೆ, ಚಿತ್ತವೃತ್ತಿಗಳ ಸಂಕೀರ್ಣತೆ, ಕಪ್ಪು ಬಿಳುಪಲ್ಲದ ಪಾತ್ರಗಳ ನಿರ್ಮಾಣ, ಬಿಗಿಯಾದರೂ ಭಾವುಕವಾಗದ ಭಾಷೆ ಮುಂತಾದ ಲಕ್ಷಣಗಳುಳ್ಳ ಹಲಕೆಲವು ಕಾದಂಬರಿಗಳು ಗಮನಾರ್ಹವಾಗಿ ಹೊರಬಂದಿವೆ. ಸುದೀರ್ಘವಾದ ಈ ಕಾದಂಬರಿಯಲ್ಲಿ ನಮ್ಮನ್ನು ಆವರಿಸಿಕೊಳ್ಳುವ ಹಲವು ಪಾತ್ರಗಳು ಸಹನಾ ಅವರದೇ ಸೃಷ್ಟಿ. ಈ ಮೂಲಕ ಅವರ ಸತ್ಯವಿಮುಖವಲ್ಲದ ಸೌಂದರ್ಯಸಿದ್ದಿ ಮೆಚ್ಚುವಂತಿದೆ. ‘ಮಾಗಧ’ ಕೃತಿಗೆ ಪ್ರಬುದ್ಧ ಓದುಗರು ದಕ್ಕಲೆಂದೂ ಇಂಥ ಮತ್ತೂ ಹಲವು ಕೃತಿಗಳನ್ನು ಸಹನಾ’ಅವರು ಬರೆಯಲೆಂದೂ ನಾನು ಆಶಿಸುತ್ತೇನೆ. ಈಗಾಗಲೇ ಮೂರು ಕಾದಂಬರಿಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಪರಿಚಿತರಾದ ಇವರು ‘ಮಾಗಧ’ದ ಮೂಲಕ ಓದುಗರಿಗೆ ಮತ್ತಷ್ಟು ಹತ್ತಿರವಾಗಲಿ; ಅಕ್ಷರಜಗತ್ತಿನಲ್ಲಿ ಮತ್ತಷ್ಟು ಎತ್ತರ-ಬಿತ್ತರಗಳನ್ನು ಎಟುಕಿಸಿಕೊಳ್ಳಲಿ,
