ರೌದ್ರವರಣಂ / Roudravaranam
Author: Anantha Kunigal
Pages:160
Edition: 2024
Book Size: 1/8th Demmy
Binding: Paper Back
Publisher: Avva Pustakalaya
Description
ರೌದ್ರವರಣಂ / Roudravaranam – ‘ರೌದ್ರಾವರಣಂ’ ಅನಂತ ಕುಣಿಗಲ್ ಅವರ ಮೊದಲ ಕಾದಂಬರಿಯಾಗಿದ್ದು, ಕಾಡು, ಬೇಟೆ, ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಸಂಬಂಧಗಳನ್ನು ಕುರಿತಾಗಿದೆ. ಜೋಗಿ ಅವರು ಈ ಕಾದಂಬರಿಯ ಬೆನ್ನುಡಿ ಬರೆದಿದ್ದಾರೆ, ಇದು ಯುವ ಓದುಗರಿಗೆ ವಿಶೇಷವಾಗಿ ಸೂಕ್ತವಾಗಿದೆ ಎಂದು ಹೇಳಿದ್ದಾರೆ. ಕಾದಂಬರಿಯು ಬಾಬಣ್ಣನೆಂಬ ಬೇಟೆಗಾರನ ಸುತ್ತ ಕಥೆ ಹೆಣೆದಿದೆ. ‘ರೌದ್ರಾವರಣಂ’ ಉತ್ಸಾಹಿ ತರುಣ ಅನಂತ ಅವರ ಚೊಚ್ಚಲ ಕಾದಂಬರಿ ರೋಚಕತೆ, ಬಿಗಿ ನಿರೂಪಣೆ, ಅನೇಕಾನೇಕ ತಿರುವು, ನಾಟಕೀಯತೆ ಈ ಕಾದಂಬರಿಯ ಗಮನ ಸೆಳೆಯುವ
ಸೆಳೆಯುವ ಅಂಶಗಳು. ಕಮ್ಮಾರ ಬಾಬಣ್ಣ ಮತ್ತು ಆತನ ಸಂಗಾತಿಯೇ ಆಗಿ ಹೋಗಿರುವ ಚಂದ್ರ ಎನ್ನುವ ನಾಯಿಯ ಸುತ್ತ ಕಥೆ ಹೆಣೆದಂತೆ ಕಂಡರೂ, ಊರುಕೇರಿ, ಧರ್ಮಶೋಷಣೆ, ಸಿರಿವಂತಿಕೆಯ ದರ್ಪ-ದಬ್ಬಾಳಿಕೆ ಇತ್ಯಾದಿಗಳು ಕಥೆಯುದ್ದಕ್ಕೂ ಇಣುಕುತ್ತವೆ. ಅನಂತ ಅವರು ಚಿತ್ರರಂಗಕ್ಕೆ ಸೇರಿರುವ ಲೇಖಕ, ಹೀಗಾಗಿಯೇ, ಸಿನಿಮೀಯತೆ ಚೌಕಟ್ಟು ಮೀರಿ ಬೆಳೆಯುವ ಕಥಾನಾಯಕನ ಪಾತ್ರ, ಕೆಲವೊಮ್ಮೆ ಇದು ಸಾಧ್ಯವೆ? ಎಂಬಂಥ ಪ್ರಸಂಗಗಳು ಇಲ್ಲಿ ಕಾಣುತ್ತವೆ.
