ಕಾಡ್ಗಿಚ್ಚು / Kaadgichchu
Author : anantha Kunigal
Pages:152
Edition: 2023
Book Size: 1/8th Demmy
Binding: Paper Back
Publisher: Avva Pustakalaya
Description
ಕಾಡ್ಗಿಚ್ಚು / Kaadgichchu – ‘ಕಾಡ್ಗಿಚ್ಚು’ ಎಂಬುದು ಅನಂತ ಕುಣಿಗಲ್ ಅವರ ಕಾದಂಬರಿ. ಈ ಕೃತಿಯ ಕುರಿತು ಲೇಖಕ ಮಹೇಶ ಅರಬಳ್ಳಿ ಬರೆದಿದ್ದಾರೆ, ಇದು ಸಮಾಜದ ಪ್ರಗತಿ ಮತ್ತು ಪ್ರತಿಯೊಬ್ಬರ ಉನ್ನತ ಬದುಕು ಎರಡರ ಬಗ್ಗೆಯೂ ವಿವರಿಸುತ್ತದೆ. ಈ ಕಾದಂಬರಿ, ಅನುಕೂಲಸ್ಥರು ಮತ್ತು ಪ್ರಭಾವಿ ವ್ಯಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ವಾಮಮಾರ್ಗಗಳನ್ನು ಬಳಸುವ ವಿಷಯವನ್ನು ಕುರಿತಾಗಿದೆ.
“ಕಾಡ್ಗಿಚ್ಚು” ಕಾದಂಬರಿಯಲ್ಲಿ ಅನಂತ ಕುಣಿಗಲ್ ಅವರು ಈ ಮೇಲಿನ ವಿಚಾರವನ್ನೇ ಎಳೆ ಎಳೆಯಾಗಿ ಬಿಡಿಸಿದ್ದಾರೆ. ಇದು ಅವರದೇ ಕಾದಂಬರಿಯಾದ “ರೌದ್ರಾವರಣಂ”ನ ಮುಂದುವರಿದ ಭಾಗ. ಆದರೆ ಕಾಡ್ಗಿಚ್ಚನ್ನು ಪ್ರತ್ಯೇಕವಾಗಿ ಓದಿದರೂ ಯಾವುದೇ ತೊಡಕಿಲ್ಲದೆ ಓದಿಸಿಕೊಳ್ಳುತ್ತದೆ. ರೌದ್ರಾವರಣಂ ನಲ್ಲಿ ಓದುಗರ ಮನಸೆಳೆದ ಅಂಶಗಳು ಕಾಡ್ಗಿಚ್ಚಿನಲ್ಲೂ ನಿಚ್ಚಳವಾಗಿ ಮೂಡಿವೆ. ಅಲ್ಲಿ ಚಂದ್ರ, ಇಲ್ಲಿ ರೂಬಿ. ಉಳಿದಂತೆ ಹಳೆಯ ಪಾತ್ರಗಳು ಮುಂದುವರೆದುಕೊಂಡು ಹೋಗುತ್ತವೆ. ಈ ಕಥನದ ಅಂತ್ಯ ರೋಚಕವಾಗಿದ್ದು ಮುಂದಿನ ಭಾಗಕ್ಕೆ ಮುನ್ನುಡಿಯಂತಿದೆ.
