ಕಿಲುಬು / Kilubu
Author: Kum.Verabhadrappa
Pages:275
Edition: 2018
Book Size: 1/8th Demmy
Binding: Paper Back
Publisher: Sapna Book House
Description
ಕಿಲುಬು / Kilubu – ಖ್ಯಾತ ಲೇಖಕ ಕುಂ. ವೀರಭದ್ರಪ್ಪ ಅವರ ವಿಶಿಷ್ಟ-ವಿಡಂಬನಾತ್ಮಕ ಕಾದಂಬರಿ ’ಕಿಲುಬು’. ಈ ಕಾದಂಬರಿಯ ಬಗ್ಗೆ ಆರ್. ದೊಡ್ಡೇಗೌಡ ಅವರು ’ಈ ಕೃತಿಯಲ್ಲಿನ ರಾಜಕಾರಣ ಜಿಲ್ಲೆಯಿಂದ ರಾಜ್ಯಕ್ಕೆ, ರಾಜ್ಯದಿಂದ ರಾಷ್ಟ್ರಕ್ಕೆ, ರಾಷ್ಟ್ರದಿಂದ ಇಡೀ ಜಗತ್ತಿಗೆ ವಿಸ್ತರಿಸುತ್ತದೆ. ರಾಜಕಾರಣಿಗಳ, ರಾಜ್ಯಪಾಲರ, ಅಧಿಕಾರಿಗಳ, ನ್ಯಾಯವಾದಿಗಳ ವಿವಿಧ ಮುಖಗಳನ್ನು ಕುಂವೀ ಕಟು ವಿಡಂಬನಾತ್ಮಕ ಶೈಲಿಯಲ್ಲಿ ಅನಾವರಣಗೊಳಿಸಿದ್ದಾರೆ. ಇಲ್ಲಿನ ಪಾತ್ರಗಳಿಗೆ ಸ್ವತಂತ್ರ ಅಸ್ತಿತ್ವವಿಲ್ಲ. ಅವುಗಳ ನಿಯಂತ್ರಕ ಶಕ್ತಿಕೇಂದ್ರಗಳು ವಾಸ್ತುಶಾಸ್ತ್ರಜ್ಞರು, ಜ್ಯೋತಿಷಿಗಳು. ವರ್ತಮಾನದ ಮುಖವಾಡ ಧರಿಸಿರುವ ಭೂತಕಾಲ ಇಲ್ಲಿ ಕ್ರಿಯಾಶೀಲವಾಗಿದೆ. ವಿಧ್ವಂಸಕ ಪ್ರವೃತ್ತಿಗಳ ಅಂತರ್ಜಾಲ ಕೇವಲ ಭುವನವಿಜಯದಿಂದ ನ್ಯಾಯಾಲಯದ ವಿವಿಧ ಮಗ್ಗುಲುಗಳನ್ನು ಆವರಿಸಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯ ಪ್ರಧಾನ ಪಾತ್ರಧಾರಿಗಳು ರಾಜ್ಯದ ರಾಜಕಾರಣ ನಿಯಂತ್ರಿಸುವ ಕ್ಷುದ್ರಶಕ್ತಿಗಳು. ಈ ಎಲ್ಲಾ ವಿವರಗಳು ದಟ್ಟಿಸಿರುವ ಈ ಕಾದಂಬರಿ ಉದ್ದಕ್ಕೂ ಬಳಕೆಯಾಗಿರುವ ಭಾಷೆ ಕುಂವೀಯವರ ಉಳಿದೆಲ್ಲ ಕಥಾನಕಗಳಿಗಿಂತ ಭಿನ್ನ ಹಾಗೂ ಪರಿಣಾಮಕಾರಿಯಾಗಿದೆ. ಈ ಕೃತಿಯಲ್ಲಿನ ಗ್ರಾಮ ಹಾಗೂ ನಾಮವಾಚಕಗಳು ಧ್ವನಿಪೂರ್ಣವಾಗಿವೆ. ಜಗದುದರ | ನಿಷ್ಟಪತ್ತಿ, ಕಕ್ಕೋಲ, ಕಾನಕುಡಿ, ಕ್ಷೇತ್ರಪಾಲ ಉಕ್ಕಡಿ, ಅರಗೀರ್, ನಿಷಾಧ್… ಹೀಗೆ ಕನ್ನಡದ ಶ್ರೇಷ್ಠ ವಿಡಂಬನಾಷ್ಟಕ ಹಾಗೂ ಎಂಜಾಯಬಲ್ ಶೈಲಿಯ ಕಾದಂಬರಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
