ಅರುಣಾಚಲದ ಆತ್ಮಜ್ಯೋತಿ ರಮಣ ಮಹರ್ಷಿ / Arunaachalada Aatmajyoti Ramana Maharshi
Author: Dr.N.S.Lakshmi Narayana Bhatta
Pages:464
Edition: 2020
Book Size: 1/8th Demmy
Binding: Paper Back
Publisher: Ankita Pustaka Prakashana
Description
ಅರುಣಾಚಲದ ಆತ್ಮಜ್ಯೋತಿ ರಮಣ ಮಹರ್ಷಿ / Arunaachalada Aatmajyoti Ramana Maharshi – ರಮಣ ಮಹರ್ಷಿ, ದಕ್ಷಿಣ ಭಾರತದ ಅರುಣಾಚಲದಲ್ಲಿ ಪ್ರಕಟವಾದ ಅಧ್ಯಾತ್ಮಿಕ ಜ್ಯೋತಿ. 16ರ ಯಸ್ಸಿನಲ್ಲಿಯೇ ಆಶ್ಚರ್ಯಕರ ಅನುಭವಕ್ಕೆ ಒಳಗಾಗಿ ಅವ್ಯಕ್ತದ ಕರೆಗೆ ಓಗೊಟ್ಟು ಅವರು ಮನೆ ತೊರೆದರು. ಲೌಕಿಕ ಬದುಕನ್ನು ಬಿಟ್ಟುಕೊಟ್ಟು ಅಲೌಕಿಕದ ನೆಲೆಗೆ ತಲುಪಿದ ಅವರು, 50 ವರ್ಷಗಳ ದೀರ್ಘಕಾಲ ಅರುಣಾಚಲದಲ್ಲಿಯೇ ಉಳಿದು ತಪಸ್ಸು ಮತ್ತು ಲೋಕಾನುಗ್ರಹ ಕಾರ್ಯಗಳಲ್ಲಿ ಮಗ್ನರಾದರು. ಅವರ ಪ್ರಭಾವಕ್ಕೆ ಒಳಗಾದವರು ಸಾವಿರಾರು ಮಂದಿ. ಪಾಶ್ಚಾತ್ಯ ದೇಶಗಳಿಂದಲೂ ನೂರಾರು ಜನ ಅವರನ್ನು ಕಾಣಲು ಅರುಣಾಚಲಕ್ಕೆ ಬಂದರು. ಕೆಲವರು ರಮಣಾಶ್ರಮದಲ್ಲಿಯೇ ನೆಲೆಸಿದರು. ಪಾಲ್ ಬ್ರಂಟನ್, ಮೇಜರ್ ಚ್ಯಾಡ್ ವಿಕ್, ಆರ್ಥರ್ ಆಸ್ಬೋರ್ನ್, ಎಸ್.ಎಸ್. ಕೊಹೆನ್, ಹಂಫ್ರೀಸ್, ಹಫೀಜ್ ಕಾವ್ಯಕಂಠ ಗಣಪತಿಮುನಿ ಮೊದಲಾದವರು ಆ ಬಗ್ಗೆ ಬರೆದರು. ಆ ಜಾತಿ ಈ ಜಾತಿ ಎನ್ನದೆ, ಪುರುಷರು ಸ್ತ್ರೀಯರು ಮಕ್ಕಳು ಎನ್ನದೇ, ತಮ್ಮಲ್ಲಿಗೆ ಬಂದವರಿಗೆಲ್ಲ ಮಹರ್ಷಿ ಅಧ್ಯಾತ್ಮ ಅಮೃತದ ದಿವ್ಯ ಸಿಂಚನ ಮಾಡಿದರು.
