ಮರದೊಳಗಣ ಕಿಚ್ಚು / Maradolagana Kichchu
Author: Rahamath Tarikere
Pages:312
Edition: 2012
Book Size: 1/8th Demmy
Binding: Paper Back
Publisher: Abhinava Prakashana
Description
ಮರದೊಳಗಣ ಕಿಚ್ಚು / Maradolagana Kicchu – “ಮರದೊಳಗಣ ಕಿಚ್ಚು” ಎಂಬುದು ರಹಮತ್ ತರೀಕೆರೆ ಅವರು ಬರೆದ ಪುಸ್ತಕ. ಈ ಪುಸ್ತಕವು ಸಾಂಸ್ಕೃತಿಕ ಅಧ್ಯಯನಗಳಿಗೆ ಸಂಬಂಧಿಸಿದ ಒಂದು ಪ್ರಮುಖ ಕೃತಿಯಾಗಿದೆ. ಆರಂಭ, ಪ್ರಮಾಣ, ತೊಡಕು, ನಿರ್ಮಾಣ ಎಂಬ ನಾಲ್ಕು ಭಾಗಗಳಿವೆ. ಮೊದಲ ಭಾಗದಲ್ಲಿ ಪ್ರತಿಸಂಸ್ಕೃತಿ ಅಧ್ಯಯನದ ತಾತ್ವಿಕ ಚರ್ಚೆಯಿದೆ. ಎರಡನೇ ಭಾಗದಲ್ಲಿ ಪ್ರತಿಸಂಸ್ಕೃತಿ ಮೂಡುವಿಕೆಗೆ ಹಿನ್ನೆಲೆಯಾಗಿರುವ ನಿಂತ ನೆಲದ ಚರಿತ್ರೆಯನ್ನು ಕಟ್ಟಿಕೊಳ್ಳುವ ಪ್ರಯತ್ನವಿದೆ. ನೂರನೇ ಪ್ರಕರಣದಲ್ಲಿ ಪ್ರತಿಸಂಸ್ಕೃತಿಯ ತೊಡಕುಗಳಾಗಿ ಬರುವ ಸಂಗತಿಗಳ ವಿವರಣೆಯಿದೆ. ಕೊನೆಯ ಪ್ರಕರಣದಲ್ಲಿ ಪ್ರತಿಸಂಸ್ಕೃತಿ ರೂಪುಗೊಳ್ಳುವ ಬಗೆಗಳ ವಿಶ್ಲೇಷಣೆಯಿದೆ. ಸಾಹಿತ್ಯ ಆಸಕ್ತಿಯುಳ್ಳು ಸಾಮಾನ್ಯ ಓದುಗರನ್ನು ಗಮನದಲ್ಲಿ ಇಟ್ಟುಕೊಂಡು ಸಂವಾದ ಸಾಧ್ಯವಾಗುವಂತೆ ರಚಿಸಲಾದ ಕೃತಿಯಿದು. 1994ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಮೊದಲ ಬಾರಿಗೆ ಪ್ರಕಟವಾಗಿದ್ದ ಈ ಗ್ರಂಥದ ಎರಡನೇ ಆವೃತ್ತಿಯನ್ನು 2007ರಲ್ಲಿ ಬೆಳ್ಳಿಚುಕ್ಕಿ ಟ್ರಸ್ಟ್ ಪ್ರಕಟಿಸಿತ್ತು. ಬೆಳಗಾವಿಯಲ್ಲಿ ನಡೆದ ಎರಡನೇ ವಿಶ್ವಕನ್ನಡ ಸಮ್ಮೇಳನದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರಕಟಿಸಿದ ಕನ್ನಡದ ನೂರು ಮೇರು ಕೃತಿಗಳ ಸರಣಿಯಲ್ಲಿ ಮೂರನೇ ಆವೃತ್ತಿ ಪ್ರಕಟವಾಗಿತ್ತು. ಇದು ನಾಲ್ಕನೇ ಆವೃತ್ತಿ.
